Breaking News
Home / Uncategorized / ಬೆಂಗಳೂರು-ಸೇಲಂ ಮಾರ್ಗದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು: 12 ರೈಲುಗಳ ಓಡಾಟದಲ್ಲಿ ವ್ಯತ್ಯಯ

ಬೆಂಗಳೂರು-ಸೇಲಂ ಮಾರ್ಗದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು: 12 ರೈಲುಗಳ ಓಡಾಟದಲ್ಲಿ ವ್ಯತ್ಯಯ

Spread the love

ಧುರೈ ವಿಭಾಗದ ಮಲವಿಟ್ಟನ್ ರೈಲು ನಿಲ್ದಾಣದಿಂದ ಹಾವೇರಿ ನಿಲ್ದಾಣದವರೆಗೆ 2408 ಟನ್ ರಸಗೊಬ್ಬರದ ಚೀಲಗಳನ್ನು ಹೊತ್ತೊಯ್ಯುತ್ತಿದ್ದ ಲೋಡ್ ಗೂಡ್ಸ್ ರೈಲಿನ 6 ಬೋಗಿಗಳು ಹಳಿ ತಪ್ಪಿದ್ದು, ಪರಿಣಾಮ 12 ರೈಲುಗಳ ಓಡಾಟದಲ್ಲಿ ವ್ಯತ್ಯಯ ಉಂಟಾಗುವಂತೆ ಮಾಡಿದೆ. ಬೆಂಗಳೂರು: ಮಧುರೈ ವಿಭಾಗದ ಮಲವಿಟ್ಟನ್ ರೈಲು ನಿಲ್ದಾಣದಿಂದ ಹಾವೇರಿ ನಿಲ್ದಾಣದವರೆಗೆ 2408 ಟನ್ ರಸಗೊಬ್ಬರದ ಚೀಲಗಳನ್ನು ಹೊತ್ತೊಯ್ಯುತ್ತಿದ್ದ ಲೋಡ್ ಗೂಡ್ಸ್ ರೈಲಿನ 6 ಬೋಗಿಗಳು ಹಳಿ ತಪ್ಪಿದ್ದು, ಪರಿಣಾಮ 12 ರೈಲುಗಳ ಓಡಾಟದಲ್ಲಿ ವ್ಯತ್ಯಯ ಉಂಟಾಗುವಂತೆ ಮಾಡಿದೆ.

ಘಟನೆಯಲ್ಲಿ ಯಾವುದೇ ಸಿಬ್ಬಂದಿಗೂ ಗಾಯಗಳಾಗಿಲ್ಲ. ರೈಲಿನಲ್ಲಿದ್ದ ಲೋಕೋ ಪೈಲಟ್ (ಎಲ್ಪಿ), ಸಹಾಯಕ ಲೋಕೋ ಪೈಲಟ್ ಮತ್ತು ಟ್ರೈನ್ ಮ್ಯಾನೇಜರ್ ಸುರಕ್ಷಿತವಾಗಿದ್ದಾರೆಂದು ತಿಳಿದುಬಂದಿದೆ. ಘಟನೆ ಬಳಿಕ ಈ ಮಾರ್ಗದಲ್ಲಿ ಓಡಾಡುವ ನಾಲ್ಕು ರೈಲುಗಳನ್ನು ರದ್ದುಗೊಳಿಸಲಾಗಿದ್ದು, 8 ರೈಲುಗಳ ಮಾರ್ಗಗಳನ್ನು ಬದಲಿಸಲಾಗಿದೆ. ಸದ್ಯ ಈ ಮಾರ್ಗವನ್ನು ಮುಚ್ಚಲಾಗಿದ್ದು ಮರುಸ್ಥಾಪನೆ ಕಾರ್ಯ ನಡೆಯುತ್ತಿದೆ ಎಂದು ವರದಿಗಳು ತಿಳಿಸಿವೆ.

ನೈಋತ್ಯ ರೈಲ್ವೆಯ ಅಧಿಕೃತ ಪ್ರಕಟಣೆಯ ಪ್ರಕಾರ, ಶುಕ್ರವಾರ ಮುಂಜಾನೆ 2.12 ಗಂಟೆಗೆ ಬೆಂಗಳೂರು-ಸೇಲಂ ವಿಭಾಗದ ಮಾರಂಡಹಳ್ಳಿ ಮತ್ತು ರಾಯಕ್ಕೊಟ್ಟೈ ನಿಲ್ದಾಣಗಳ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದ್ದು, ರೈಲು ಹಳಿ ತಪ್ಪಲು ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರೈಲಿನಲ್ಲಿ ಒಟ್ಟು 42 ವ್ಯಾಗನ್ಗಳಿದ್ದು, 6 ವ್ಯಾಗನ್ಗಳು ಹಳಿ ತಪ್ಪಿವೆ. ಹಿರಿಯ ಅಧಿಕಾರಿಗಳನ್ನು ಒಳಗೊಂಡ ಬೆಂಗಳೂರು ವಿಪತ್ತು ನಿರ್ವಹಣಾ ತಂಡವು ಅಪಘಾತ ಪರಿಹಾರ ರೈಲಿನೊಂದಿಗೆ ಬೆಳಗಿನ ಜಾವ 3 ಗಂಟೆಗೆ ಹಳಿ ತಪ್ಪಿದ ಸ್ಥಳಕ್ಕೆ ತೆರಳಿ, ಪುನಃಸ್ಥಾಪನೆ ಕೆಲಸ ಪ್ರಗತಿಯಲ್ಲಿದೆ. ಘಟನೆ ಬಳಿಕ ನಾಲ್ಕು ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಕೆಎಸ್ಆರ್ ಬೆಂಗಳೂರು-ಜೋಲಾರ್ಪೇಟ್ಟೈ-ಕೆಎಸ್ಆರ್ ಬೆಂಗಳೂರು ಮೆಮು ವಿಶೇಷ ರೈಲು. ಕೆಎಸ್ಆರ್ನಿಂದ ಬೆಳಗ್ಗೆ 8.45ಕ್ಕೆ ಮತ್ತು ಜೋಲಾರ್ಪೇಟೆಯಿಂದ ಮಧ್ಯಾಹ್ನ 2 ಗಂಟೆಗೆ ಹೊರಡಬೇಕಿತ್ತು. ಸೇಲಂ ಮತ್ತು ಧರ್ಮಪುರಿಯಿಂದ ಹೊರಡುವ ಸೇಲಂ – ಯಶವಂತಪುರ ಎಕ್ಸ್ಪ್ರೆಸ್ (ರೈಲು ಸಂಖ್ಯೆ. 16212) – ಕೆಎಸ್ಆರ್ ಬೆಂಗಳೂರು ಮೆಮು ವಿಶೇಷ (ರೈಲು ಸಂಖ್ಯೆ.

06278) ಧರ್ಮಪುರಿಯಿಂದ ಹೊರಡುತ್ತವೆ… ತಿರುನೆಲ್ವೇಲಿ – ದಾದರ್ ಎಕ್ಸ್ಪ್ರೆಸ್, ಟುಟಿಕೋರಿನ್ – ಮೈಸೂರು ಎಕ್ಸ್ಪ್ರೆಸ್, ಕಣ್ಣೂರು-ಯಶವಂತಪುರ ಎಕ್ಸ್ಪ್ರೆಸ್, ಮೈಲಾಡುತುರೈ-ಮೈಸೂರು ಎಕ್ಸ್ಪ್ರೆಸ್, ನಾಗರ್ಕೋಯಿಲ್ – ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಎಕ್ಸ್ಪ್ರೆಸ್, ಕೊಯಮತ್ತೂರು – ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್ಪ್ರೆಸ್ ಓಡಾಡುವ ಮಾರ್ಗಗಳನ್ನು ಬದಲಿಸಲಾಗಿದೆ. ಈ ರೈಲುಗಳು ಸೇಲಂ, ತಿರುಪತ್ತೂರ್, ಜೋಲಾರ್ಪೇಟ್ಟೈ ಎ ಕ್ಯಾಬಿನ್ ಮತ್ತು ಕೃಷ್ಣರಾಜಪುರ ಮೂಲಕ ಸಂಚರಿಸುತ್ತವೆ. ಕೆಎಸ್ಆರ್ ಬೆಂಗಳೂರು – ಎರ್ನಾಕುಲಂ ಎಕ್ಸ್ಪ್ರೆಸ್ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ – ಕಾರೈಕಲ್ ಎಕ್ಸ್ಪ್ರೆಸ್ ರೈಲುಗಳು ಕೂಡ ಕೃಷ್ಣರಾಜಪುರಂ, ಜೋಲಾರ್ಪೇಟ್ಟೈ ಎ ಕ್ಯಾಬಿನ್, ತಿರುಪತ್ತೂರು ಮತ್ತು ಸೇಲಂ ಮೂಲಕ ಸಂಚರಿಸಲಿವೆ. ಮಾರ್ಗ ಬದಲಿಸಿದ ಎಲ್ಲಾ ರೈಲುಗಳು ಕುಪ್ಪಂ, ಬಂಗಾರಪೇಟೆ, ಮಾಲೂರು ಮತ್ತು ಕೃಷ್ಣರಾಜಪುರದಲ್ಲಿ ಒಂದು ನಿಮಿಷ ಹೆಚ್ಚುವರಿಯಾಗಿ ನಿಲುಗಡೆ ಮಾಡಲಿವೆ.


Spread the love

About Laxminews 24x7

Check Also

ಮಲತಾಯಿಯ ಕ್ರೌರ್ಯಕ್ಕೆ ಮೂರು ವರ್ಷದ ಕಂದಮ್ಮ ಬಲಿ

Spread the love ಬೆಳಗಾವಿ: ಮಲತಾಯಿಯ ಕ್ರೌರ್ಯಕ್ಕೆ ಮೂರು ವರ್ಷದ ಕಂದಮ್ಮ (Baby Death) ಬಲಿಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ