Breaking News
Home / ರಾಜಕೀಯ / ಕಾಂಗ್ರೆಸ್‌ 40 ಕ್ಷೇತ್ರಗಳಲ್ಲಿ ಟಿಕೆಟ್‌ ಕಗ್ಗಂಟು; ಇಲ್ಲಿದೆ ನೋಡಿ ಕೈ ಎರಡನೇ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

ಕಾಂಗ್ರೆಸ್‌ 40 ಕ್ಷೇತ್ರಗಳಲ್ಲಿ ಟಿಕೆಟ್‌ ಕಗ್ಗಂಟು; ಇಲ್ಲಿದೆ ನೋಡಿ ಕೈ ಎರಡನೇ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

Spread the love

ಬೆಂಗಳೂರು,ಏಪ್ರಿಲ್3:‌ ವಿಧಾನಸಭೆ ಚುನಾವಣೆ ಭರ್ಜರಿ ತಯಾರಿ ನಡೆಸಿರುವ ಕಾಂಗ್ರೆಸ್‌ ಈಗಾಗಲೇ 124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಇನ್ನೂ ಎರಡನೇ ಪಟ್ಟಿ ತಯಾರಿಕೆಯಲ್ಲಿ 40 ಕ್ಷೇತ್ರಗಳ ಅಭ್ಯರ್ಥಿಯೇ ದೊಡ್ಡ ಸವಾಲವಾಗಿದೆ.

124 ಕ್ಷೇತ್ರದಲ್ಲಿ ಸ್ಪರ್ಧಾಳುಗಳನ್ನು ಘೋಷಿಸಿದ್ದ ಸ್ಕ್ರೀನಿಂಗ್ ಕಮಿಟಿ ಉಳಿದ ನೂರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಎಐಸಿಸಿ ಕೇಂದ್ರ ಚುನಾವಣಾ ಸಮಿತಿಗೆ ಶಿಫಾರಸು ಮಾಡಿದೆ.

ಇದರಲ್ಲಿ 40 ಕ್ಷೇತ್ರಗಳಿಗೆ ಎರಡರಿಂದ ಮೂರು ಅಭ್ಯರ್ಥಿಗಳನ್ನ ಎಐಸಿಸಿ ಕೇಂದ್ರ ಚುನಾವಣಾ ಸಮಿತಿಗೆ ಶಿಫಾರಸು ಮಾಡಿದ್ದು, ಏಪ್ರಿಲ್‌ 10 ರ ಬಳಿಕ ಎರಡನೇ ಪಟ್ಟಿ ಪ್ರಕಟಗೊಳಲ್ಲಿದದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಈಗಾಗಲೇ ಮೂರ್ನಾಲ್ಕು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದು, ಮೂರ್ನಾಲ್ಕು ಕ್ಷೇತ್ರದಲ್ಲಿ ಹೊಸ ಅಭ್ಯರ್ಥಿಗಳನ್ನ ಕಣಕ್ಕಿಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಪ್ಲಾನ್‌ ನಡೆಸಿದೆ. ಇತ್ತ ಅಪರೇಷನ್‌ ಹಸ್ತದ ಮೂಲಕ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರಿಗೆ ಗಾಳ ಹಾಕಿರು ಕಾಂಗ್ರೆಸ್‌ ಅನ್ಯ ಪಕ್ಷದ ನಾಯಕರಿಗಾಗಿ ಕೆಲ ಕ್ಷೇತ್ರಗಳನ್ನ ಕಾಯ್ದಿರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಇನ್ನೂ 100 ಕ್ಷೇತ್ರಗಳಲ್ಲಿ ಟಿಕೆಟ್‌ ಆಕಾಂಕ್ಷಿಗಳು ಹೆಚ್ಚಾಗಿದ್ದು, ಈ 100 ಕ್ಷೇತ್ರಗಳಲ್ಲಿ ಹಾಲಿ ಶಾಸಕರ ಪೈಕಿ ಮೂರ್ನಾಲ್ಕು ಜನರನ್ನ ಹೊರತುಪಡಿಸಿ ಬಹುತೇಕ ಹಾಲಿ ಕಾಂಗ್ರೆಸ್‌ ಶಾಸಕರಿಗೆ ಟಿಕೆಟ್‌ ಸಿಗಲಿದೆ ಎಂದು ಕಾಂಗ್ರೆಸ್‌ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಇತ್ತ ಸಾಕಷ್ಟು ಕುತೂಹಲವನ್ನ ಸೃಷ್ಟಿಸಿರುವುದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಎರಡನೇ ಕ್ಷೇತ್ರ. ಈಗಾಗಲೇ ಮೊದಲ ಪಟ್ಟಿಯಲ್ಲಿ ವರುಣಾ ಕ್ಷೇತ್ರದಿಂದ ಹೈಕಮಾಂಡ್‌ ಟಿಕೆಟ್‌ ನೀಡಿದ್ದು, ಕೋಲಾರ ಕ್ಷೇತ್ರದಲ್ಲೂ ನಾನು ಸ್ಪರ್ಧೆ ಮಾಡುತ್ತೇನೆ ಎಂದು ಹೈಕಮಾಂಡ್‌ ನಾಯಕರಿಗೆ ಟಿಕೆಟ್‌ ಕೇಳಿರುವ ಸಿದ್ದರಾಮಯ್ಯ ಅವರಿಗೆ ಕೋಲಾರದಿಂದ ಟಿಕೆಟ್‌ ನೀಡುವ ಕುರಿತು ಹೈಕಮಾಂಡ್‌ ಯಾವ ತಿರ್ಮಾನವನ್ನ ತೆಗೆದುಕೊಳ್ಳುತ್ತದೆ ಎಂಬುದು ಸಾಕಷ್ಟು ಕುತೂಹಲಕ್ಕೆ ಎಡೆಮಾಡಿ ಕೊಟ್ಟಿದ್ದು, ಬಹುತೇಕ ಸಿದ್ದರಾಮಯ್ಯ ಅವರಿಗೆ ಕೋಲಾರ ಕ್ಷೇತ್ರಕ್ಕೆ ಹೈಕಮಾಂಡ್‌ ಟಿಕೆಟ್‌ ನೀಡಲಿದೆ.

ಶಿಫಾರಸು ಮಾಡಿದ ಸಂಭಾವ್ಯ ಪಟ್ಟಿ ಇಲ್ಲಿದೆ.

ಕ್ಷೇತ್ರ ಅಭ್ಯರ್ಥಿಗಳ ಹೆಸರು
ಗುಬ್ಬಿ ಶ್ರೀನಿವಾಸ್
ಕೋಲಾರ ಸಿದ್ದರಾಮಯ್ಯ
ನಿಪ್ಪಾಣಿ ಕಾಕಾ ಸಾಹೇಬ್ ಪಾಟೀಲ್
ಬಸವಕಲ್ಯಾಣ ವಿಜಯ ಸಿಂಗ್
ಗೋಕಾಕ್ ಅಶೋಕ್ ಪೂಜಾರಿ
ಕಿತ್ತೂರು ಡಿ.ಬಿ.ಇಮಾನ್ದಾ‌
ಮುದೋಳ್ ಆರ್ .ಬಿ .ತಿಮ್ಮಾಪುರ
ತೇರದಾಳ ಉಮಾಶ್ರೀ
ಬೀಳಗಿ ಜಗದೀಶ್ ಪಾಟೀಲ್
ಬಾದಾಮಿ ಭೀಮಸೇನ ಚಿಮ್ಮನಕಟ್ಟಿ
ಸಿಂದಗಿ ಅಶೋಕ್ ಮನಗೂಳಿ
ಗುರುಮಠಲ್ ಬಾಬುರಾವ್ ಚಿಂಚನಸೂರ್
ಕಲಬುರಗಿ ದಕ್ಷಿಣ ಅಲ್ಲಮ್ ಪ್ರಭು ಪಾಟೀಲ್
ರಾಯಚೂರು ಎನ್.ಎಸ್ ಬೋಸರಾಜ್
ಮಾನ್ವಿ ಹಂಪಯ್ಯ ನಾಯಕ್‌
ಸಿಂಧನೂರು ಹಂಪನಗೌಡ ಬಾದರ್ಲಿ
ಗಂಗಾವತಿ ಇಕ್ಸಾಲ್ ಅನ್ಸಾರಿ
ಕಲಘಟಗಿ ಸಂತೋಷ ಲಾಡ್
ಹುಬ್ಬಳ್ಳಿ-ಧಾರವಾಡ ಪಶ್ಚಿಮ ಮೋಹನ್ ಲಿಂಬಿಕಾಯಿ
ಮಂಗಳೂರು ದಕ್ಷಿಣ ಜೆ.ಆರ್.‌ ಲೋಬೋ
ಶಿರಸಿ ಭೀಮಣ್ಣ ನಾಯ್
ಹರಿಹರ ರಾಮಪ್ಪ
ತೀರ್ಥಹಳ್ಳಿ ಕಿಮ್ಮನೆ ರತ್ನಾಕರ್
ಮೂಡಿಗೆರೆ ನಯನಾ ಮೋಟಮ್ಮ
ಚಿಕ್ಕಮಗಳೂರು ಹೆಚ್ ಡಿ ತಮ್ಮಯ್ಯ
ಕಡೂರು ವೈ ಎಸ್ ವಿ ದತ್ತಾ
ಚಿಕ್ಕಬಳ್ಳಾಪುರ ಕೊತ್ತೂರು ಮಂಜುನಾಥ್
ಯಲಹಂಕ ಕೇಶವ್ ರಾಜಣ್ಣ
ಪುಲಕೇಶಿ ನಗರ ಅಖಂಡ ಶ್ರೀನಿವಾಸ್ ಮೂರ್ತಿ
ಸಿವಿ ರಾಮನ್ ನಗರ ಸಂಪತ್ ರಾಜ್
ಪದ್ಮನಾಭ ನಗರ ಪಿ.ಜಿ.ಆರ್ ಸಿಂಧ್ಯಾ
ಬೊಮ್ಮನಹಳ್ಳಿ ಉಮಾಪತಿಗೌಡ
ಮೇಲುಕೋಟೆ ದರ್ಶನ್ ಪುಟ್ಟಣ್ಣಯ್ಯ
ಮದ್ದೂರು ಉದಯ್ ಗೌಡ
ಶ್ರವಣಬೆಳಗೊಳ ಗೋಪಾಲ್ ಸ್ವಾಮಿ
ಅರಸೀಕೆರೆ ಶಿವಲಿಂಗೇಗೌಡ
ಪುತ್ತೂರು ಶಕುಂತಲಾ ಶೆಟ್ಟಿ
ಯಲ್ಲಾಪುರ ಬಿ.ಎಸ್.ಪಾಟೀಲ

Spread the love

About Laxminews 24x7

Check Also

ಬೆಂ.ಗ್ರಾದಲ್ಲಿ ಕಾಂಗ್ರೆಸ್​ನಿಂದ ಗ್ಯಾರಂಟಿ ಕಾರ್ಡ್​​ ಹಂಚಿಕೆ ಆರೋಪ; BJP-JDS ಕಾರ್ಯಕರ್ತರ ಮೇಲೆ ಹಲ್ಲೆ!

Spread the love ರಾಮನಗರ: ಬೆಂಗಳೂರು ಗ್ರಾಮಾಂತರದ (Bengaluru Rural) ರಾಮನಗರದಲ್ಲಿ (Ramanagara) ಕಾಂಗ್ರೆಸ್ ಕಾರ್ಯಕರ್ತರು, ಡಿಸಿಎಂ ಡಿಕೆ ಶಿವಕುಮಾರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ