Breaking News
Home / ರಾಜಕೀಯ / ಕಕಮರಿ: ‘ಪರೀಕ್ಷೆಗೆ ಭಯ ಪಡುವ ಅಗತ್ಯವಿಲ್ಲ

ಕಕಮರಿ: ‘ಪರೀಕ್ಷೆಗೆ ಭಯ ಪಡುವ ಅಗತ್ಯವಿಲ್ಲ

Spread the love

ಕಮರಿ: ‘ಮನಸ್ಸಿನ ಶಕ್ತಿ ದೇಹದ ಶಕ್ತಿಗಿಂತ ಬಲಿಷ್ಠ. ಅದು ಇದ್ದರೆ ಜಗತ್ತಿನಲ್ಲಿ ಎಲ್ಲವನ್ನೂ ಸಾಧಿಸಬಹುದು. ಅದಕ್ಕೆ ಬಡವ- ಶ್ರೀಮಂತ ಎನ್ನುವ ಭೇದಭಾವ ಇಲ್ಲ’ ಎಂದು ಕಕಮರಿ ಗುರುದೇವಾಶ್ರಮದ ಆತ್ಮಾರಾಮ್ ಸ್ವಾಮೀಜಿ ಹೇಳಿದರು.

ಸಮೀಪದ ಕೊಟ್ಟಲಗಿ ಸಿದ್ಧೇಶ್ವರ ಆಂಗ್ಲ ಮಾಧ್ಯಮ ಶಾಲೆಯ 11ನೇ ವಾರ್ಷಿಕ ಸ್ನೇಹ ಸಮ್ಮಿಲನ ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೋಡುಗೆ ಸಮಾರಂಭ ಮತ್ತು ಮಕ್ಕಳಿಂದ ತಂದೆ- ತಾಯಿಗಳ ಪಾದಪೂಜೆ ಕಾರ್ಯಕ್ರಮದದಲ್ಲಿ ಅವರು ಮಾತನಾಡಿದರು.

 

‘ವಿದ್ಯಾರ್ಥಿಗಳಿಗೆ ಅಂಕಗಳು ಮಹತ್ವದ್ದು. ಆದರೆ ಅಂಕಗಳೇ ಜೀವನವಲ್ಲ. ಅಂಕಗಳನ್ನು ಪಡೆದ ಮಾತ್ರಕ್ಕೆ ಬುದ್ಧಿವಂತರಾಗುವುದಿಲ್ಲ. ತಮ್ಮಲ್ಲಿರುವ ಶಕ್ತಿಯನ್ನು ತಿಳಿದುಕೊಳ್ಳುವುದು ಬುದ್ಧಿವಂತಿಕೆ’ ಎಂದರು.

‘ಪರೀಕ್ಷೆಗ ಭಯ ಪಡುವ ಅಗತ್ಯವಿಲ್ಲ. ಪರೀಕ್ಷೆ ಎಂಬುವುದು ಜೀವನದ ಒಂದು ಭಾಗ ಮಾತ್ರ. ಆಸಕ್ತಿ, ಗುರಿಯೊಂದಿಗೆ ಪರಿಶ್ರಮ ಪಟ್ಟರೆ ಯಶಸ್ವಿಯಾಗಬಹುದು. ಜೀವನದಲ್ಲಿ ಒತ್ತಡ ಇದ್ದಾಗ ನಾವು ಮಾಡುವ ಕೆಲಸದ ಬಗ್ಗೆ ಗಮನವಿರುತ್ತದೆ. ಆದರೆ ಒತ್ತಡವೇ ಜೀವನವಾಗಬಾರದು’ ಕರೆ ನೀಡಿದರು.

ಸಿವಿಲ್ ನ್ಯಾಯಾಧೀಶರಾಗಿ ನೇಮಕವಾದ ಮಹಾಂತೇಶ ಚೌಲಗಿ ಮಾತನಾಡಿ, ‘ಗುಣಮಟ್ಟದ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರ, ಮಾನವೀಯ ಮೌಲ್ಯ ಮೈಗೂಡಿಸಿಕೊಂಡು ಬದುಕು ಕಟ್ಟಿಕೊಳ್ಳುವ ಮಹತ್ವಾಕಾಂಕ್ಷೆ ಹೊಂದಿರಬೇಕು’ ಎಂದರು.


Spread the love

About Laxminews 24x7

Check Also

ಆರೋಪಿ ಫಯಾಜ್‌ ನ್ಯಾಯಾಂಗ ಬಂಧನಕ್ಕೆ!

Spread the loveಹುಬ್ಬಳ್ಳಿ : ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯ ಹತ್ಯೆ(student murder) ಆರೋಪಿ ಫಯಾಜ್‌(Fayaz) ಎಂಬುವವನನ್ನ ಕೋರ್ಟ್‌ ಇಂದು ನ್ಯಾಯಾಂಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ