Breaking News

ಸದ್ಯದಲ್ಲೇ ಹೊಸ ರೂಪದಲ್ಲಿ ಬರಲಿದೆ ಬೈಕ್‌ ಪ್ರಿಯರಯಮಹಾ RX100

Spread the love

ಮಹಾ RX100 ಮೋಟಾರ್‌ ಸೈಕಲ್‌ಗಳು ಸಾಕಷ್ಟು ಜನಪ್ರಿಯತೆ ಗಳಿಸಿದ್ದವು. ಬೈಕ್‌ ಪ್ರಿಯರಿಗೆಲ್ಲ ಈ ಮೋಟಾರ್‌ ಸೈಕಲ್‌ ಬಗ್ಗೆ ತಿಳಿದಿದೆ. ಆದರೆ ಈ ಬೈಕ್‌ಗಳ ಮಾರಾಟ ಬಹಳ ಹಿಂದೆಯೇ ಅಂದ್ರೆ ಸುಮಾರು 25 ವರ್ಷಗಳ ಹಿಂದೆ ಸ್ಥಗಿತಗೊಂಡಿದೆ.

ಇದೀಗ ಅದೇ ಐಕಾನಿಕ್‌ ಬೈಕ್‌ ಹೊಸ ರೂಪದಲ್ಲಿ ಮಾರುಕಟ್ಟೆಗೆ ಬರಲು ಸಜ್ಜಾಗಿದೆ.

ಹೊಸ RX100 ಲಾಂಚ್‌ ಅನ್ನು ಯಮಹಾ ಇಂಡಿಯಾ ಖಚಿತಪಡಿಸಿದೆ.

ಕಂಪನಿಯು ಉದ್ದೇಶಪೂರ್ವಕವಾಗಿ RX100 ಹೆಸರನ್ನು ಬೇರೆ ಬೈಕ್‌ಗಳಿಗೆ ನೀಡಿಲ್ಲ. ಮತ್ತೆ RX100 ಹೆಸರಿನಲ್ಲೇ ಮೋಟಾರ್‌ ಸೈಕಲ್‌ ಬಿಡುಗಡೆ ಮಾಡುವುದು ಯಮಹಾ ಕಂಪನಿಯ ಉದ್ದೇಶವಾಗಿತ್ತು.

ಆದರೆ ಕಟ್ಟುನಿಟ್ಟಾದ ಮಾನದಂಡಗಳ ಹಿನ್ನೆಲೆಯಲ್ಲಿ ಕಂಪನಿಯು OG RX100ನ 2-ಸ್ಟ್ರೋಕ್ ಎಂಜಿನ್ ಅನ್ನು ಮರಳಿ ತರುವುದಿಲ್ಲ. ಯಮಹಾ, ಹೊಸ RX100ಗಾಗಿ ದೊಡ್ಡ ಎಂಜಿನ್ ಅನ್ನು ಅಭಿವೃದ್ಧಿಪಡಿಸಿದೆ. ಅದರ ವಿನ್ಯಾಸ, ಶಬ್ಧ ಮತ್ತು ಕಾರ್ಯಕ್ಷಮತೆಯಿಂದಲೇ RX100 ಭಾರತೀಯರಲ್ಲಿ ಜನಪ್ರಿಯವಾಗಿತ್ತು.

ಹೊಸ ಯಮಹಾ RX100, 100cc ಎಂಜಿನ್‌ನಿಂದ ನಿಯಂತ್ರಿಸಲ್ಪಡುವುದಿಲ್ಲ. ಯಮಹಾ ಪ್ರಸ್ತುತ ತನ್ನ ಸ್ಕೂಟರ್ ಶ್ರೇಣಿಯಲ್ಲಿ 125 ಸಿಸಿ ಎಂಜಿನ್‌ಗಳನ್ನು ಹೊಂದಿದೆ. ಇದಲ್ಲದೆ 150 ಸಿಸಿ ಮತ್ತು 250 ಸಿಸಿ ಎಂಜಿನ್‌ಗಳನ್ನು ಸಹ ಹೊಂದಿದೆ. ಕಂಪನಿಯು RX ಎಂಬ ಸಾಂಪ್ರದಾಯಿಕ ಹೆಸರಿನೊಂದಿಗೆ ರಾಯಲ್ ಎನ್‌ಫೀಲ್ಡ್ ಅನ್ನು ಟಾರ್ಗೆಟ್‌ ಮಾಡಿರೋದ್ರಿಂದ 250cc ಎಂಜಿನ್ ಅನ್ನು ಸಹ ಬಳಸಬಹುದು.

ರಾಯಲ್ ಎನ್‌ಫೀಲ್ಡ್‌ನ 350cc ಶ್ರೇಣಿಯೊಂದಿಗೆ ಸ್ಪರ್ಧಿಸಬಹುದು. ಈ ಹಿಂದೆ ರಾಯಲ್ ಎನ್‌ಫೀಲ್ಡ್ ಮೋಟಾರ್ ಸೈಕಲ್‌ಗಳಿಗೆ ಹೋಲಿಸಿದರೆ RX100 ಬೈಕ್ ಹೆಚ್ಚು ಜನರನ್ನು ಆಕರ್ಷಿಸಿತ್ತು. ಹೊಸ ಯಮಹಾ RX100 ಯಾವಾಗ ಮಾರುಕಟ್ಟೆಗೆ ಬರಬಹುದು ಎಂಬುದು ಖಚಿತವಾಗಿಲ್ಲ.


Spread the love

About Laxminews 24x7

Check Also

1200 ರೈತರ ಆತ್ಮಹತ್ಯೆ: ಕಾಂಗ್ರೆಸ್ ಆಡಳಿತದಲ್ಲಿ ರೈತರ ಜೀವಕ್ಕಿಲ್ಲ ಬೆಲೆ- ಪ್ರಹ್ಲಾದ್ ಜೋಶಿ

Spread the love ಬೆಂಗಳೂರು ಜುಲೈ 26: ರಾಜ್ಯದಲ್ಲಿ ಕಳೆದ 15 ತಿಂಗಳಲ್ಲಿ 1200ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ