ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯ
ಮೂಡಲಗಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ರಮೂಡಲಗಿ ತಾಲೂಕಿನ ತಿಗಡಿ ಗ್ರಾಮದಲ್ಲಿ ಶ್ರೀ ಹನುಮಾನ
ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು.
ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಈ ಅನ್ನ ಸಂತರ್ಪಣೆ ಕಾರ್ಯವು ಜಿಲ್ಲಾದ್ಯಂತ ನಡೆಯುತ್ತಿದ್ದು ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದು ಈ ಸೇವೆ ನಿರಂತರವಾಗಿರಲಿ ಎಂದು ಊರಿನ ಹಿರಿಯರು ಆಶಿಸಿದ್ದಾರೆ.
ಈ ಸಂದರ್ಭದಲ್ಲಿ ರುದ್ರಗೌಡ ಪಾಟೀಲ, ಯಲ್ಲಪ್ಪಾ ಹುಲಿಕಟ್ಟಿ, ವಿರುಪಾಕ್ಷಿ ಮೆಣಸಿ, ಶ್ರೀಮಂತ ಹುಚ್ಚಣ್ಣವರ, ನಾರಾಯಣ ವಾಲಿಕರ, ಸಿದ್ರಾಯಿ ಬೀರಡಿ, ಹನುಮಂತ್ ಅಂಬಿ, ಅಶೋಕ ಪೂಜಾರಿ,ಎಚ್ ಆರ್ ಪಾಟೀಲ, ನಾಗಪ್ಪಾ ಪಾಟೀಲ, ದುಂಡಪ್ಪಾ ವಡಚಣ್ಣವರ, ಭೀಮಶಿ ಹಳಬರ, ಆರ್ ವಾಯ್ ಬುದ್ನಿ.
ಊರಿನ ರೈತರು, ಹಿರಿಯರು ಮತ್ತು ಅನೇಕ ಉಪಸ್ಥಿತರಿದ್ದರು.