Breaking News
Home / Uncategorized / ಬಸ್‌ ಪ್ರಯಾಣ ದರ ದುಬಾರಿ: ಒಂದು ಸಾವಿರ ಪ್ರಕರಣ ದಾಖಲು

ಬಸ್‌ ಪ್ರಯಾಣ ದರ ದುಬಾರಿ: ಒಂದು ಸಾವಿರ ಪ್ರಕರಣ ದಾಖಲು

Spread the love

 

ಬೆಂಗಳೂರು: ಬಸ್‌ ಪ್ರಯಾಣ ದರ ದುಬಾರಿ ಆಗಿರುವುದರಿಂದ ಕಾರ್ಯಾಚರಣೆ ನಡೆಸಿರುವ ಸಾರಿಗೆ ಇಲಾಖೆ ಅಧಿಕಾರಿಗಳು, ರಾಜ್ಯದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾರೆ.

 

‘ಬೆಂಗಳೂರಿನಲ್ಲೇ 450 ಪ್ರಕರಣಗಳನ್ನು ದಾಖಲಿಸಲಾಗಿದ್ದು, ರಾಜ್ಯದ ವಿವಿಧೆಡೆಯೂ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಒಟ್ಟಾರೆ ಒಂದು ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಿಸಿದ್ದಾರೆ. ಪ್ರಯಾಣ ದರ ಹೆಚ್ಚಳವಷ್ಟೇ ಅಲ್ಲದೇ, ದಾಖಲೆಗಳು ಸಮರ್ಪಕವಾಗಿ ಇಲ್ಲದ ಪ್ರಕರಣಗಳೂ ಇದರಲ್ಲಿ ಸೇರಿವೆ’ ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ವಿವರಿಸಿದರು.

‘ದಸರಾ ಹಬ್ಬದ ಸಂದರ್ಭದಲ್ಲಿ ₹60 ಲಕ್ಷದಿಂದ ₹70 ಲಕ್ಷದ ತನಕ ದಂಡ ವಸೂಲಿಯಾಗಿತ್ತು.‌ ದೀಪಾವಳಿ ಸಂದರ್ಭದಲ್ಲಿ ಎಷ್ಟು ದಂಡ ವಸೂಲಿಯಾಗಿದೆ ಎಂಬ ಮಾಹಿತಿ ಎರಡು ದಿನಗಳ ಬಳಿಕ ಲಭ್ಯವಾಗಲಿದೆ’ ಎಂದು ಅವರು ತಿಳಿಸಿದರು.‌

‘ದಂಡ ಹಾಕಿದರೆ ಸಾಲದು’

ಪ್ರಯಾಣ ದರ ಏರಿಕೆ ಮಾಡಿದ ಸಂದರ್ಭದಲ್ಲಿ ಸಾರಿಗೆ ಅಧಿಕಾರಿಗಳು ದಂಡ ವಿಧಿಸುತ್ತಿದ್ದರೂ, ಪ್ರತಿ ಹಬ್ಬದ ಸಂದರ್ಭದಲ್ಲೂ ಖಾಸಗಿ ಬಸ್ ಪ್ರಯಾಣ ದರ ಅನಿಯಂತ್ರಿತವಾಗಿ ಏರಿಕೆ ಆಗುವುದು ನಿಂತಿಲ್ಲ.

‘ದಂಡವನ್ನಷ್ಟೇ ವಿಧಿಸಿ ಸುಮ್ಮನಾದರೆ ಪ್ರಯೋಜನ ಇಲ್ಲ. ಪದೇ ಪ‍ದೇ ಕಾನೂನು ಉಲ್ಲಂಘಿಸುವ ಖಾಸಗಿ ಬಸ್‌ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲು ಮೋಟಾರು ಕಾಯ್ದೆಯಲ್ಲಿ ಅವಕಾಶ ಇದೆ. ಪರವಾನಗಿ ಅಮಾನತಿನಲ್ಲಿಡಲು ಮತ್ತು ಪರವಾನಗಿ ರದ್ದುಪಡಿಸಲು ಸಾಧ್ಯವಿದೆ. ಅದನ್ನು ಅಧಿಕಾರಿಗಳು ಮಾಡಬೇಕು’ ಎಂಬುದು ಪ್ರಯಾಣಿಕರ ಒತ್ತಾಯ.

‘ಹಬ್ಬದ ಸಂದರ್ಭದಲ್ಲಿ ಒಂದೆರಡು ದಿನ ನೆಪಮಾತ್ರಕ್ಕೆ ಸಾರಿಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಾರೆ. ಪ್ರತಿ ಹಬ್ಬದಲ್ಲೂ ದುಬಾರಿ ದರದಲ್ಲಿ ಟಿಕೆಟ್ ಖರೀದಿಸಿ ಪ್ರಯಾಣಿಸಬೇಕಾಗಿದೆ’ ಎಂದು ಪ್ರಯಾಣಿಕ ವಿನಯ್ ಬೇಸರ ವ್ಯಕ್ತಪಡಿಸಿದರು


Spread the love

About Laxminews 24x7

Check Also

ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ಪಾಸ್‌ಪೋರ್ಟ್‌ ರದ್ದಿಗೆ SIT ಮನವಿ!

Spread the loveವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ಪಾಸ್‌ಪೋರ್ಟ್‌ ರದ್ದಿಗೆ SIT ಮನವಿ! ಬೆಂಗಳೂರು: ಹಾಸನದ ಹಾಲಿ ಸಂಸದ, ಮಾಜಿ ಶಾಸಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ