Breaking News
Home / ರಾಜಕೀಯ / ಸಿದ್ದರಾಮಯ್ಯ ಅವಧಿಯ ಸೋಲಾರ್ ಹಗರಣದ ತನಿಖೆಗೆ ಮುಂದಾದ ಬಿಜೆಪಿ ಸರ್ಕಾರ

ಸಿದ್ದರಾಮಯ್ಯ ಅವಧಿಯ ಸೋಲಾರ್ ಹಗರಣದ ತನಿಖೆಗೆ ಮುಂದಾದ ಬಿಜೆಪಿ ಸರ್ಕಾರ

Spread the love

ಬೆಂಗಳೂರು: ಕಾಂಗ್ರೆಸ್ ಅವಧಿಯಲ್ಲಿ ನಡೆದ ಸೋಲಾರ್ ಹಂಚಿಕೆ ಹಗರಣದ ತನಿಖೆಗೆ ಸರ್ಕಾರ ಮೀನಾಮೇಷ ಎಣಿಸುತ್ತಿರುವ ಬಗ್ಗೆ ಬಿಜೆಪಿ ಹೈಕಮಾಂಡ್ ಗರಂ ಆಗಿದ್ದು, ಈ ಸಂಬಂಧ ಯಾವುದೇ ಕ್ಷಣದಲ್ಲಿ ಸರ್ಕಾರ ತನಿಖೆಗೆ ಆದೇಶ ನೀಡುವ ಸಾಧ್ಯತೆ ಇದೆ.

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಸೋಲಾರ್ ಉತ್ಪಾದನೆಗಾಗಿ ಕರೆದ ಆನ್ ಲೈನ್ ಅರ್ಜಿ ಹಂಚಿಕೆಯಲ್ಲಿ ಭಾರಿ ಅಕ್ರಮ ನಡೆದಿತ್ತು ಎಂಬ ಆರೋಪ ವ್ಯಕ್ತವಾಗಿತ್ತು. 2100 ಕೋಟಿ ರೂ. ಮೊತ್ತದ 300 ಮೆಗಾ ವ್ಯಾಟ್ ಸೋಲಾರ್ ಹಂಚಿಕೆಯನ್ನು ಕೇವಲ ಎಂಟೇ ನಿಮಿಷದಲ್ಲಿ ಅರ್ಜಿ ಪ್ರಕ್ರಿಯೆ ಮುಕ್ತಾಯಗೊಳಿಸಲಾಗಿತ್ತು. ಇದರಲ್ಲಿ ಸಾರ್ವಜನಿಕ ಹೊಣೆಗಾರಿಕೆ ನೀತಿಯನ್ನು ಗಾಳಿಗೆ ತೂರಲಾಗಿದೆ ಎಂಬ ಆರೋಪ ವ್ಯಕ್ತವಾಗಿತ್ತು.

120 ಸೆಕೆಂಡ್ ಗಳಲ್ಲಿ 126 ರೈತರಿಂದ ಅರ್ಜಿ ಸ್ವೀಕರಿಸುವುದು ತರ್ಕಕ್ಕೆ ಮತ್ತು ವಾಸ್ತವಕ್ಕೆ ನಿಲುಕದ ವಿಚಾರವಾಗಿದ್ದು, ಈ ಅವಧಿಯಲ್ಲಿ ಅರ್ಜಿ ತುಂಬುವುದು ಅಸಾಧ್ಯ ಎಂದು ಆರೋಪ ವ್ಯಕ್ತವಾಗಿತ್ತು.ಆದರೆ ಅಂದಿನ ಇಂಧನ ಸಚಿವರು 26 ಸಾವಿರ ಅರ್ಜಿ ಬಂದಿದೆ. ಆ ಪೈಕಿ 295 ಆಯ್ಕೆ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದರು. ಆದರೆ ಇ ಆಡಳಿತ ಎಂಟು ನಿಮಿಷದಲ್ಲಿ 265 ಅರ್ಜಿ ಸ್ವೀಕಾರವಾಗಿದೆ ಎಂದು ಹೇಳಿದ್ದು ಗೊಂದಲ ಮೂಡಿಸಿತ್ತು. ಆದರೆ ಈ ಅರ್ಜಿಗಳಲ್ಲಿ ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ್ ಕುಟುಂಬದ ಮೂವರಿಗೆ ಅವಕಾಶ ನೀಡಲಾಗಿತ್ತು. ಹೈದರಾಬಾದ್ ಮೂಲದ ಕೆಲ ಕಂಪನಿಗಳು ಅರ್ಜಿ ಸ್ವೀಕಾರಕ್ಕೆ ಮುನ್ನ ಭೂಮಿ ಖರೀದಿಯನ್ನೂ ಮಾಡಿದ್ದು ಅನುಮಾನಕ್ಕೆ ಕಾರಣವಾಗಿತ್ತು.


Spread the love

About Laxminews 24x7

Check Also

ಕರ್ನಾಟಕ ‘SSLC ಪರೀಕ್ಷೆ-2’ರ ‘ಪರಿಷ್ಕೃತ ವೇಳಾಪಟ್ಟಿ’ ಪ್ರಕಟ

Spread the love ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಎಸ್ ಎಸ್ ಎಲ್ ಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ