Home / ಜಿಲ್ಲೆ / ಬೆಂಗಳೂರು / KSRTC ಸಿಬ್ಬಂದಿ’ಗಳಿಗೆ ಭರ್ಜರಿ ಸಿಹಿಸುದ್ದಿ: ಇನ್ಮುಂದೆ ‘ಪ್ರತಿ ತಿಂಗಳು 1ನೇ ತಾರೀಕು ವೇತನ ಪಾವತಿ’

KSRTC ಸಿಬ್ಬಂದಿ’ಗಳಿಗೆ ಭರ್ಜರಿ ಸಿಹಿಸುದ್ದಿ: ಇನ್ಮುಂದೆ ‘ಪ್ರತಿ ತಿಂಗಳು 1ನೇ ತಾರೀಕು ವೇತನ ಪಾವತಿ’

Spread the love

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ( Karnataka State Road Transport Corporation -KSRTC) ಸಮಸ್ತ ಸಿಬ್ಬಂದಿಗಳಿಗೆ ಅಕ್ಟೋಬರ್ 2022ರಿಂದ ಪ್ರತಿ ತಿಂಗಳು 1ನೇ ತಾರೀಕಿನಂದು ವೇತನ ಪಾವತಿ ಮಾಡುವ ಉಪ ಕ್ರಮವನ್ನು ಜಾರಿಗೆ ತರಲಾಗುತ್ತಿದೆ.

ಹೀಗಾಗಿ ನಿಗಮದ ಸಮಸ್ತ ಸಿಬ್ಬಂದಿಗಳಿಗೆ ಇನ್ಮುಂದೆ ಪ್ರತಿ ತಿಂಗಳ 1ನೇ ತಾರೀಕಿನಂದೇ ವೇತನ ಪಾವತಿಯಾಗಲಿದೆ.

 

ಈ ಕುರಿತಂತೆ ಕೆ ಎಸ್ ಆರ್ ಟಿ ಸಿಯ ವ್ಯವಸ್ಥಾಪಕ ನಿರ್ದೇಶಕಾರದಂತ ವಿ ಅನ್ಬುಕುಮಾರ್ ( KSRTC MD V.Anbhukumar ) ಅವರು ಆದೇಶ ಹೊರಡಿಸಿದ್ದು, ಸಾರಿಗೆ ಸಂಸ್ಥೆಯ ಆತ್ಮವೇ ನಮ್ಮ ಕಾರ್ಮಿಕ ಬಂಧುಗಳು. ಅವರ ಕ್ಷೇಮಾಭಿವೃದ್ಧಿ, ಹಿತಾಸಕ್ತಿಯನ್ನು ಕಾಪಾಡುವ ಹಾಗೂ ಅವರ ಕಷ್ಟಗಳಿಗೆ ಸಕಾಲದಲ್ಲಿ ಸ್ಪಂದಿಸುವುದು ನಮ್ಮ ಆದ್ಯೆತೆಯಾಗಿದೆ. ಈ ನಿಟ್ಟಿನಲ್ಲಿ ಅಕ್ಟೋಬರ್ 2022ರ ತಿಂಗಳಿನಿಂದ ಪ್ರಪ್ರಥಮ ಬಾರಿಗೆ ಚಾಲಕ, ನಿರ್ವಾಹಕ, ತಾಂತ್ರಿಕ ಸಿಬ್ಬಂದಿಗಳು ಸೇರಿದಂತೆ ಸಮಸ್ತ ಸಿಬ್ಬಂದಿಗಳಿಗೆ ಪ್ರತಿ ತಿಂಗಳ ದಿನಾಂಕ 1ರಂದೇ ವೇತನವನ್ನು ಪಾವತಿ ಮಾಡಲು ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.

 

ಇನ್ನೂ ಈ ಕ್ರಮಕ್ಕೆ ಸಂಬಂಧಿಸಿದಂತೆ ಸಿಬ್ಬಂದಿಗಳ ವೇತನ ಬಿಲ್ಲುಗಳನ್ನು ತಯಾರಿಸುವಾಗ ಹಾಜರಾತಿ, ರಜೆ ಮಂಜೂರಾತಿ ಆದೇಶ, ಹೆಚ್ಚುವರಿ ಭತ್ಯೆ ಮುಂತಾದ ದಾಖಲಾತಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ, ವೇತನದ ಬಿಲ್ಲನ್ನು ಸಿದ್ದಪಡಿಸುವಂತೆ ತಿಳಿಸಿದ್ದಾರೆ.

 

ಕೋವಿಡ್ ಕಾರಣದಿಂದಾಗಿ ನಿಗಮದ ಆರ್ಥಿಕ ಪರಿಸ್ಥಿತಿಯು ಕ್ಲಿಷ್ಟಕರವಾಗಿದ್ದಾಗ್ಯೂ ಸಹ, ನಿಗಮದ ಸಮಸ್ತ ಕಾರ್ಮಿಕ ಸಿಬ್ಬಂದಿಗಳ ಹಿತದೃಷ್ಠಿಯಿಂದ ಈ ನೂತನ ಉಪಕ್ರಮವನ್ನು ಜಾರಿಗೊಳಿಸಲಾಗುತ್ತಿದ್ದು, ಪ್ರಾರಂಭಿಕ ತಿಂಗಳುಗಳಲ್ಲಿ ಈ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಸಹಕರಿಸುವಂತೆ ಕೋರಿದ್ದಾರೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ