Breaking News
Home / ಜಿಲ್ಲೆ / ಬೆಳಗಾವಿ / ರಾಮದುರ್ಗದ ಕಾರ್ಯ ನಿರ್ವಾಹಕ ಅಧಿಕಾರಿಯಿಂದ ವಂಚಿತಗೊಳಗಾದ ಸರ್ಕಾರಿ ಶಾಲೆಗಳು

ರಾಮದುರ್ಗದ ಕಾರ್ಯ ನಿರ್ವಾಹಕ ಅಧಿಕಾರಿಯಿಂದ ವಂಚಿತಗೊಳಗಾದ ಸರ್ಕಾರಿ ಶಾಲೆಗಳು

Spread the love

ಹೌದು ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿಗೆ ಸಂಬಂಧಿಸಿದ ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಸಂಬಂಧಿಸಿದ ಸರ್ಕಾರಿ ಶಾಲೆಗಳು ರಾಮದುರ್ಗ ತಾಲೂಕ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಯಾದ “ಪ್ರವೀಣ್ ಸಾಲಿ” ಇವರಿಂದ ಅಭಿವೃದ್ಧಿ ಕಾಣದೆ ಹದಗೆಟ್ಟು ಹೋಗುತ್ತೇವೆ…

ಪ್ರಿಯ ವಿಕ್ಷೆಕರೆ,
ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಶಾಲಾ ಕಾಮಗಾರಿಗಳಾದ ಕಂಪೌಂಡ್, ಆಟದ ಮೈದಾನ, ಶೌಚಾಲಯ, ಅಡುಗೆ ಕೊನೆ, ಹೀಗೆ ಮುಂತಾದ ಕಾಮಗಾರಿಗಳನ್ನು ಕೈಗೊಂಡು ಅಭಿವೃದ್ಧಿ ಪಡಿಸುವಂತೆ ಬೆಳಗಾವಿ ಜಿಲ್ಲಾ ಪಂಚಾಯಿತಿಯಿಂದ ಜರುಗಿಸಿದ ಪ್ರಗತಿಪರಿಶೀಲನಾ ಕಾರ್ಯಕ್ರಮಗಳಲ್ಲಿ ಹಲವಾರು ಬಾರಿ ತಾಲೂಕಿನ ಎಲ್ಲಾ
E O ಗಳಿಗೆ ಆದೇಶಿಸಿದರೂ ಕೂಡ ಕ್ಯಾರೇ ಎನ್ನದೇ ರಾಮದುರ್ಗದ ತಾಲೂಕ ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ “ಪ್ರವೀಣ್ ಸಾಲಿ…

ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸರ್ಕಾರಿ ಶಾಲೆಗಳಿಗೆ ಸಂಬಂಧಿಸಿದಂತೆ ಎಲ್ಲ ಕಾಮಗಾರಿಗಳು ಮುಕ್ತಾಯಗೊಂಡು ಅಭಿವೃದ್ಧಿ ಹೊಂದಿವೆ, ಅಭಿವೃದ್ಧಿ ಹೊಂದಿದ ಎಲ್ಲ ಸರ್ಕಾರಿ ಶಾಲೆಗಳಿಗೆ ಬೇಟಿ ನೀಡಿದ ಬೆಳಗಾವಿಯ C E O “ಧರ್ಶನ H V” ಸಂತಸ ವ್ಯಕ್ತಪಡಿಸಿದರು…

ಆದರೆ ಇದೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸರಕಾರಿ ಶಾಲೆಗಳ ಅಭಿವೃದ್ಧಿ ಪರಿಶೀಲನೆಗಾಗಿ ಬೆಳಗಾವಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ “ಧರ್ಶನ H V” ಇವರು ದಿನಾಂಕ: 5-7-2022 ರಂದು ಬೇಟಿ ನೀಡಿ ಕೇಲವೊಂದು ಸರಕಾರಿ ಶಾಲೆಗಳನ್ನು ಪರಿಸಿಲಿಸಿ ಅಭಿವೃದ್ಧಿ ಆಗದೇ ಇರುವುದನ್ನು ಕಂಡು ಕೆಲವೊಂದು ಪಿಡಿಓ ಹಾಗೂ ಇಂಜಿನೀಯರಗಳನ್ನು ಅಮಾನತು ಮಾಡಿದರು…

ಬೆಳಗಾವಿ ಸಿಇಓ ರವರಿಗೆ ನಾವು ಹೇಳೊದು ಇಷ್ಟೇ ರಾಮದುರ್ಗ ತಾಲ್ಲೂಕಿನಲ್ಲಿ ತಾವು ಬೇಟಿ ಕೊಟ್ಟ ಶಾಲೆಗಳು ಅಷ್ಟೇ ಅಲ್ಲ, ಇನ್ನೂ ಸಾಕಷ್ಟು ಶಾಲೆಗಳು ಅಭಿವೃದ್ಧಿ ಕಾಣದೇ ಶಾಲೆ ಕಟ್ಟಡಗಳು, ಆಟದ ಮ್ಯದಾನಗಳು ಹದಗೆಟ್ಟು ಹೋಗಿ ಶಾಲೆಯ ಮಕ್ಕಳು ನರಕಯಾತನೆ ಅನುಭವಿಸುತ್ತಿದ್ದಾರೆ…
ಇದಕ್ಕೆಲ್ಲಾ ಕಾರಣ ಇಲ್ಲಿನ ತಾಲ್ಲೂಕ ಪಂಚಾಯತ ಅಧಿಕಾರಿ ಪ್ರವೀಣ ಸಾಲಿರವರು…

ಬೆಳಗಾವಿ ಜಿಲ್ಲಾ ಪಂಚಾಯತ ಸಿಇಓ ರವರು ರಾಮದುರ್ಗ ತಾಲ್ಲೂಕಿಗೆ ಬೇಟಿ ನೀಡಿ ಒಂದು ತಿಂಗಳು ಕಳೆಯುತ್ತಾ ಬಂದಿದೆ, ಆದರೇ ಇದುವರೆಗೆ ಎಳ್ಳಷ್ಟು ಅಭಿವೃದ್ಧಿ ಆಗಿಲ್ಲಾ, ಇದಕ್ಕೆಲ್ಲಾ ಕಾರಣ ಇಲ್ಲಿನ ತಾಲ್ಲೂಕು ಪಂಚಾಯತಿ ಅಧಿಕಾರಿಗಳ ಅವ್ಯವಸ್ಥೆಯ ಆಡಳಿತ…

ಮಾನ್ಯ CEO ರವರು ರಾಮದುರ್ಗ ತಾಲ್ಲೂಕಿಗೆ ಬೇಟಿ ನೀಡಿದಾಗ ಸರಿಯಾಗಿ ಪರಿಸಿಲಿಸದೇ,- “ಮುಗಿದಿರುವ ಕಾಮಗಾರಿಗಳ ಕ್ರೀಯಾ ಯೋಜನೆ ತಯಾರಿಸುವುದು, ಮತ್ತು ಸುಮಾರು ವರ್ಷಗಳ ಹಿಂದೆ ಮುಗಿದಿರುವ ಕಾಮಗಾರಿಗಳನ್ನು ತಮ್ಮ ಲಾಗಿನಲ್ಲಿ ಪೇಮೆಂಟ್ ಮಾಡಿರುವ ರಾಮದುರ್ಗ ತಾಲ್ಲೂಕು ಪಂಚಾಯತಿ ಅಧಿಕಾರಿಗಳನ್ನು ಪರಿಸಿಲಿಸಿ ಅಮಾನತು ಮಾಡೋದು ಬಿಟ್ಟು, ಕೆಳ ಹಂತದ ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಮಾಡಿದ್ದಾರೆ…

ರಾಮದುರ್ಗ ತಾಲ್ಲೂಕಿನಲ್ಲಿ ಹೆಚ್ಚಾಗಿ ಎಲ್ಲಾ ಜನಗಳಲ್ಲಿ ಸರಳವಾಗಿ ಹರದಾಡುತ್ತಿರುವ ಮಾತುಗಳು ಇಷ್ಟೇ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹಮ್ಮಿಕೊಂಡಿರುವ ಕೆಲಸ ಕಾಮಗಾರಿಗಳಿಗೆ ಅಂದಾಜು ಮೋತ್ತವನ್ನು ಆದರಿಸಿ ರಾಮದುರ್ಗ ತಾಲ್ಲೂಕು ಪಂಚಾಯತ ಅಧಿಕಾರಿಗಳಿಗೆ “ಪರಶೆಂಟೆಜ್” ಬರುವವರೆಗೆ ಕಾಮಗಾರಿಗಳನ್ನು ಪ್ರಾರಂಭಿಸಲು ಅನುಮತಿ ನೀಡುವುದಿಲ್ಲವಂತೆ, ಒಂದು ವೇಳೆ ಅವರ ಮಾತನ್ನು ಕೆಳದಿದ್ದರೆ ಸಾಕು ಕ್ಷುಲ್ಲಕ ಕಾರಣಗಳಿಂದ ಅವರನ್ನು ಅಮಾನತು ಮಾಡುತ್ತೆನೆ ಎಂದು ಎದರಿಸುತ್ತಾರಂತೆ…

ಈಗಾಗಲೇ ಇವರ ವರ್ತನೆಗೆ ಎಷ್ಟೋ ಜನ ಇಂಜಿನೀಯರಗಳು ತಮ್ಮ ತಮ್ಮ ಕರ್ತವ್ಯಗಳಿಗೆ ರಾಜಿನಾಮೇ ನೀಡಲು ಮುಂದಾಗಿದಾರೆ…

ಈಗಲಾದರೂ ಮಾನ್ಯ CEO ರವರು ಕೆಳ ಹಂತದ ಅಧಿಕಾರಿಗಳನ್ನು ತಾರ್ಗೆಟ್ ಮಾಡೂವುದನ್ನೂ ಬಿಟ್ಟು, ತಾಲ್ಲೂಕು ಆದ್ಯಂತಾ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಹೆಸರಿಗಷ್ಟೇ ಖರ್ಚುಗಳನ್ನು ತೋರಿಸುವ ಹಾಗೆ ಕೆಲಸ ಕಾರ್ಯಗಳನ್ನು ಮಾಡಿ, ಜಿಲ್ಲೆಯಲ್ಲಿಯೇ ರಾಮದುರ್ಗ ತಾಲ್ಲೂಕು ಪ್ರಥಮ ಎಂದು ಸರಕಾರದ ಕಣ್ಣಿಗೆ ಮಣ್ಣು ಎರಚಿ ಯಾವುದೇ ಅಭಿವೃದ್ಧಿಗೆ ಮುಂದಾಗದೇ, ತಾಲ್ಲೂಕ ಅಧಿಕಾರಿಯಿಂದಲೇ ಆಗುವ ತಾಲ್ಲೂಕಾದ್ಯಂತಾ ಕರ್ತವ್ಯ ಲೋಪ್ ದೋಷಗಳನ್ನು ಗಂಬಿರವಾಗಿ ಗಣನೆಗೆ ತೆಗೆದುಕೊಂಡು ಕೂಡಲೇ ಅಂತವರನ್ನೂ ಅಮಾನತು ಮಾಡಿ,
ಸಂಬಂಧ ಪಟ್ಟ ಸಚಿವರಿಗೆ ಮಾಹಿತಿ ತಿಳಿಸುವುದಾಗಬೇಕೆಂಬುವುದೇ ನಮ್ಮ ವಾಹಿನಿಯ ಆಶಯ…

 


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ