Breaking News
Home / ರಾಜಕೀಯ / ಬೆಳಗಾವಿ: ಯಲ್ಲಿ ಧಾರಾಕಾರ ಮಳೆ , ಈವರೆಗೆ 317 ಮನೆಗಳು ಕುಸಿದಿವೆ.

ಬೆಳಗಾವಿ: ಯಲ್ಲಿ ಧಾರಾಕಾರ ಮಳೆ , ಈವರೆಗೆ 317 ಮನೆಗಳು ಕುಸಿದಿವೆ.

Spread the love

ಬೆಳಗಾವಿ: ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಡೀ ಧಾರಾಕಾರ ಮಳೆ ಸುರಿದಿದ್ದು, ಈವರೆಗೆ 317 ಮನೆಗಳು ಕುಸಿದಿವೆ.

ಚಿಕ್ಕೋಡಿ ತಾಲ್ಲೂಕಿನಲ್ಲಿ 82, ಚನ್ನಮ್ಮನ ಕಿತ್ತೂರು ತಾಲ್ಲೂಕಿನಲ್ಲಿ 39, ರಾಮದುರ್ಗ ತಾಲ್ಲೂಕಿನಲ್ಲಿ 43, ಸವದತ್ತಿ 35 ಹಾಗೂ ಬೆಳಗಾವಿ ತಾಲ್ಲೂಕಿನಲ್ಲಿ 19 ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ.

 

ಉಳಿದಂತೆ, ಮೂಡಲಗಿ ತಾಲ್ಲೂಕು 22, ಕಾಗವಾಡ 24, ಬೈಲಹೊಂಗಲ 19, ಹುಕ್ಕೇರಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ 14 ಮನೆಗಳ ಗೋಡೆಗಳು ಕುಸಿದಿವೆ.

ನಿರಂತರ ಸುರಿಯುತ್ತಿರುವ ಮಳೆಯಿಂದಯಾಗಿ ಹಳ್ಳಿಗಳಲ್ಲಿನ ಕಲ್ಲು- ಮಣ್ಣಿನ ಮನೆಗಳ ಗೋಡೆ ಕುಸಿಯುವುದು ಮುಂದುವರಿದಿದೆ.

ಮುಳುಗಡೆ ಸೇತುವೆ ಮೇಲೇ ಸಂಚಾರ ಬಂದ್‌!

ಗೋಕಾಕ ಶಿಂಗ್ಲಾಪುರ ಸೇತುವೆ ಮೇಲೆ ನೀರು ಹರಿಯುತ್ತಿರುವ ಕಾರಣ ಪೊಲೀಸರು ಸಂಚಾರ ಬಂದ್ ಮಾಡಿದರು. ಅಪಾಯವನ್ನೂ ಲೆಕ್ಕಿಸದೇ ಸೇತುವೆ ಮೇಲೆ ವಾಹನ ಓಡಾಡುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಬ್ಯಾರಿಕೇಡ್ ಇಟ್ಟು ಸಂಚಾರ ಬಂದ್ ಮಾಡಿದರು. ಗೋಕಾಕ ಹೊರವಲಯದಲ್ಲಿರುವ ಈ ಸೇತುವೆ ಮೇಲೆ ಅರ್ಧ ಅಡಿಯಷ್ಟು ನೀರು ಹರಿಯುತ್ತಿದೆ.


ಗೋಕಾಕ ಶಿಂಗ್ಲಾಪುರ ಸೇತುವೆಯಲ್ಲಿ ಸಂಚಾರವನ್ನು ಬಂದ್‌ ಮಾಡಿದ ಪೊಲೀಸರು

ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಈಗಾಗಲೇ ಚಿಕ್ಕೋಡಿ ತಾಲ್ಲೂಕಿನ ಐದು ಹಾಗೂ ನಿಪ್ಪಾಣಿ ತಾಲ್ಲೂಕಿನ ಎರಡು ಸೇತುವೆಗಳ ಸಂಚಾರ ಬಂದ್ ಆಗಿದೆ. ಸೋಮವಾರ ತಡರಾತ್ರಿಯಿಂದ ಘಟಪ್ರಭಾ ಹಾಗೂ ಮಲಪ್ರಭಾ ನದಿಗಳ ಒಳಹರಿವೂ ಮತ್ತಷ್ಟು ಹೆಚ್ಚಳವಾಗಿದೆ.


Spread the love

About Laxminews 24x7

Check Also

ಕರ್ನಾಟಕ ‘SSLC ಪರೀಕ್ಷೆ-2’ರ ‘ಪರಿಷ್ಕೃತ ವೇಳಾಪಟ್ಟಿ’ ಪ್ರಕಟ

Spread the love ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಎಸ್ ಎಸ್ ಎಲ್ ಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ