Home / ಹುಬ್ಬಳ್ಳಿ / ಮೂವತ್ತು ತಿಂಗಳಲ್ಲಿ 38 ಕೊಲೆ! ಖಾಕಿ ಕಂಡರೆ ಪುಂಡರಿಗಿಲ್ಲ ಭಯ, ಸಿಎಂ ತವರಲ್ಲಿ ಚಾಕು-ಚೂರಿ ಅಟ್ಟಹಾಸ

ಮೂವತ್ತು ತಿಂಗಳಲ್ಲಿ 38 ಕೊಲೆ! ಖಾಕಿ ಕಂಡರೆ ಪುಂಡರಿಗಿಲ್ಲ ಭಯ, ಸಿಎಂ ತವರಲ್ಲಿ ಚಾಕು-ಚೂರಿ ಅಟ್ಟಹಾಸ

Spread the love

ಹುಬ್ಬಳ್ಳಿ: ಮುಖ್ಯಮಂತ್ರಿಯವರ ತವರು ಹುಬ್ಬಳ್ಳಿ-ಧಾರವಾಡದಲ್ಲಿ ರೌಡಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊಲೆ, ಕೊಲೆ ಯತ್ನ, ಹಲ್ಲೆಯಂಥ ಪ್ರಕರಣಗಳ ಸಂಖ್ಯೆ ಏರುತ್ತಿದೆ.

ಚಾಕು, ಚೂರಿ, ತಲ್ವಾರ್, ಮತ್ತಿತರ ಮಾರಕಾಸ್ತ್ರಗಳು ಆಟಿಕೆಯಂತಾಗಿವೆ. ಸಾಮಾನ್ಯರೂ ಸಲೀಸಾಗಿ ಅಪರಾಧ ಕೃತ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಕೇವಲ ಎರಡೂವರೆ ವರ್ಷಗಳಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ನಡೆದಿರುವ 38 ಕೊಲೆಗಳು ಇದಕ್ಕೆ ಪುಷ್ಠಿ ನೀಡುತ್ತಿವೆ.

ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಹಳೇ ಹುಬ್ಬಳ್ಳಿ ಕೋಮು ಗಲಭೆ ನಂತರ ಹುಬ್ಬಳ್ಳಿಯಲ್ಲಿ ಮೇಲಿಂದ ಮೇಲೆ ನೆತ್ತರು ಹರಿಯುತ್ತಲೇ ಇದೆ. ಇದಕ್ಕೆ ತಾಜಾ ಉದಾಹರಣೆ ಚಂದ್ರಶೇಖರ ಗುರೂಜಿ ಹತ್ಯೆ. ಹೆಣ್ಣು, ಹೊನ್ನು, ಮಣ್ಣು ವಿಚಾರವಾಗಿ ಒಂದಷ್ಟು ಕೊಲೆಗಳು ನಡೆದಿದ್ದರೆ, ಮತ್ತಷ್ಟು ಕೊಲೆಗಳು ಮೀಟರ್ ಬಡ್ಡಿ, ಹಳೇ ವೈಷಮ್ಯದ ವಿಚಾರಕ್ಕೆ, ಗುಟ್ಖಾ, ಸಿಗರೇಟ್, ಎಗ್‌ರೈಸ್‌ನಂತಹ ಕ್ಷುಲ್ಲಕ ಕಾರಣಕ್ಕೂ ಕೊಲೆ ನಡೆದಿರುವುದು ದುರಂತ. ಇದಕ್ಕೆಲ್ಲ ಖಾಕಿಪಡೆಯ ಮೃದುತ್ವ ಧೋರಣೆಯೇ ಕಾರಣ ಎಂದು ತರ್ಕಿಸಲಾಗುತ್ತಿದೆ. ಆಗಾಗ ರೌಡಿ ಪರೇಡ್ ಮಾಡುವ ಹು-ಧಾ ಪೊಲೀಸರು, ಕೆಲವು ರೌಡಿಗಳನ್ನು ಠಾಣೆಗೆ ಕರೆಸಿ ಸಾಲಾಗಿ ನಿಲ್ಲಿಸುತ್ತಾರೆ. ಅವರ ಹೆಸರು, ವಿಳಾಸ ಬರೆದುಕೊಂಡು ಬೈದು ಕಳುಹಿಸುತ್ತಾರೆ. ಮತ್ತೆ ಅವರ ಭೇಟಿ ಆಗುವುದು ನಂತರದ ಪರೇಡ್‌ನಲ್ಲೇ. ಈ ನಡುವೆ ಆ ರೌಡಿಗಳು ಏನು ಮಾಡುತ್ತಿದ್ದಾರೆ? ಯಾರೊಂದಿಗೆ ಒಡನಾಟ ಹೊಂದಿದ್ದಾರೆ ? ಎಂಬಿತ್ಯಾದಿ ಸೂಕ್ಷ್ಮ ವಿಚಾರಗಳನ್ನು ಭೇದಿಸಲು ಪೊಲೀಸರು ಆಸಕ್ತಿ ತೋರುತ್ತಿಲ್ಲ.

ಕೆಲ ಸಂದರ್ಭದಲ್ಲಿ ರೌಡಿಗಳ ಮನೆಗಳ ಮೇಲೆ ಬೆಳ್ಳಂಬೆಳಗ್ಗೆ ದಾಳಿ ನಡೆಸುವ ಪೊಲೀಸರು, ಅಲ್ಲೊಬ್ಬ- ಇಲ್ಲೊಬ್ಬ ರೌಡಿಗಳ ಮನೆಯಲ್ಲಿ ಸಿಕ್ಕ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳುತ್ತಾರೆ. ನಂತರ ಅವರೂ ಸುಲಭವಾಗಿ ಜಾಮೀನು ಪಡೆದು ಹೊರಬರುತ್ತಾರೆ. ಹೀಗೆ ಪೊಲೀಸ್ ಠಾಣೆಗೆ, ಜೈಲಿಗೆ ಹೋಗುವುದು ಎಂದರೆ ದೊಡ್ಡ ವಿಷಯವೇನಲ್ಲ ಎನ್ನುವಂತಾಗಿದೆ.


Spread the love

About Laxminews 24x7

Check Also

‘ಬರ ಪರಿಹಾರ ನೀಡದೇ ಕಾಂಗ್ರೆಸ್ ದಿವಾಳಿ’

Spread the loveಹುಬ್ಬಳ್ಳಿ: ‘ರಾಜ್ಯ ಸರ್ಕಾರಕ್ಕೆ ಬರ ಪರಿಹಾರ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ಯಾವತ್ತು ಹೇಳಿಲ್ಲ. ಕೇಂದ್ರ ಸರ್ಕಾರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ