Home / ರಾಜಕೀಯ / ಬೆಳಗಾವಿ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಸೇರಿದಂತೆ ಹಲವರಿಗೆ ಸೋಲಿನ ಭಯ ಕಾಂಗ್ರೆಸ್ ಸಮೀಕ್ಷೆಯಲ್ಲಿ ಬಯಲು..

ಬೆಳಗಾವಿ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಸೇರಿದಂತೆ ಹಲವರಿಗೆ ಸೋಲಿನ ಭಯ ಕಾಂಗ್ರೆಸ್ ಸಮೀಕ್ಷೆಯಲ್ಲಿ ಬಯಲು..

Spread the love

 ರಾಜ್ಯ ವಿಧಾನಸಭಾ ಚುನಾವಣೆ  ಸಮೀಪಿಸುತ್ತಿದ್ದಂತೇ, ಹಲವು ಹಾಲಿ ಕಾಂಗ್ರೆಸ್ ಶಾಸಕರಿಗೆ  ಸೋಲಿನ ಭೀತಿ ಎದುರಾಗಿದೆ. ಹತ್ತಕ್ಕೂ ಹೆಚ್ಚು ಹಾಲಿ ಶಾಸಕರಿಗೆ ಸೋಲಿನ ಭೀತಿ ಕಾಡುತ್ತಿದೆ ಎನ್ನಲಾಗಿದೆ.

ಇದೆಲ್ಲವೂ ಇತ್ತೀಚಿಗೆ ಕಾಂಗ್ರೆಸ್ ನಡೆಸಿದಂತ ಆಂತರಿಕ ಸಮೀಕ್ಷೆಯಲ್ಲಿ ಬಯಲಾಗಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಕೆಲ ಶಾಸಕರು ಕೂಡ ಚುನಾವಣೆಯ ( Election ) ವೇಳೆಗೆ ಬಂಡಾಯವೇಳಲಿದ್ದು, ಕೈ ಪಕ್ಷಕ್ಕೆ ಬಂಡಾಯದ ಭೀತಿ ಕೂಡ ಎದುರಾಗಲಿದೆ ಎಂದು ಹೇಳಲಾಗುತ್ತಿದೆ.

ಹೌದು.. ಕೆಲವರಿಗೆ ಕಾರ್ಯಕರ್ತರ ಜೊತೆಗೆ ಸಂಪರ್ಕ ಹೊಂದಿಲ್ಲದೇ ಇರೋದು ಇದರ ದೊಡ್ಡ ಮೈನಸ್ ಪಾಯಿಂಟ್ ಎನ್ನಲಾಗಿದೆ. ಅಲ್ಲದೇ ಕ್ಷೇತ್ರದಲ್ಲಿ ಕೆಲಸ ಮಾಡದಿದ್ದರೂ ಕೂಡ, ಜನರ ಸಂಪರ್ಕ, ಕೈಗೆ ಸಿಗದೇ ಇರೋ ಆರೋಪ ಕೂಡ ಎದುರಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿಯೇ ಶಾಸಕರ ಕಾರ್ಯವೈಖರಿಯೂ ಕೆಲ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂಬುದಾಗಿ ಸಮೀಕ್ಷಾ ವರದಿಯಲ್ಲಿ ಬಹಿರಂಗಗೊಂಡಿದೆಯಂತೆ.

 

ಇನ್ನೂ ಆಂತರಿಕ ಸಮೀಕ್ಷಾ ವರದಿಯಿಂದ ಎಚ್ಚೆತ್ತುಕೊಂಡಿರುವಂತ ಕರ್ನಾಟಕ ಪ್ರದೇಶ ಕಾಂಗ್ರೆಸ್, ಸೋಲುವ ಶಾಸಕರಿಗೆ, ಚುನಾವಣೆಯ ವೇಳೆಗೆ ತಮ್ಮ ಕ್ಷೇತ್ರದಲ್ಲಿ ಜನರೊಂದಿಗೆ, ಕಾರ್ಯಕರ್ತರೊಂದಿಗೆ ತೊಡಗಿಸಿಕೊಳ್ಳುವಂತೆ ಸೂಚಿಸಿದೆ ಎನ್ನಲಾಗಿದೆ. ಸೋಲುವ ಶಾಸಕರಿಗೆ ಈಗಲೇ ಎಚ್ಚರಿಕೆ ವಹಿಸುವಂತೆ ಎಚ್ಚರಿಸಿದೆ ಎಂದು ತಿಳಿದು ಬಂದಿದೆ.

ಇದಷ್ಟೇ ಅಲ್ಲದೇ ವರದಿಯನ್ನು ಆಧರಿಸಿ, ತಮ್ಮ ನ್ಯೂನ್ಯತೆ, ಕ್ಷೇತ್ರಗಳಲ್ಲಿನ ಗೊಂದಲ ಸರಿಪಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಸೋಲುವ ಹಾಲಿ ಶಾಸಕರಿಗೆ ಈ ಸೂಚನೆಯನ್ನು ಕಾಂಗ್ರೆಸ್ ವರಿಷ್ಠರು ನೀಡಿದ್ದಾರೆ ಎನ್ನಲಾಗಿದೆ. ಹಾಗಾದ್ರೇ.. ಸೋಲುವ ಭೀತಿಯಲ್ಲಿರುವಂತ ಹಾಲಿ ಶಾಸಕರು ಯಾರ್ ಯಾರ್ ಎನ್ನುವ ಪಟ್ಟಿ ಈ ಕೆಳಗಿದೆ.

 

ಸೋಲುವ ಭೀತಿ ಹೊಂದಿರುವ ಶಾಸಕರು ಹಾಗೂ ಅವರ ಕ್ಷೇತ್ರಗಳು

  • ದೊಡ್ಡ ಬಳ್ಳಾಪುರ – ವೆಂಕಟರಮಣಯ್ಯ
  • ಕಂಪ್ಲಿ – ಗಣೇಶ್
  • ಹಡಗಲಿ – ಪರಮೇಶ್ವರ್ ನಾಯಕ್
  • ಕುಣಿಗಲ್ – ಡಾ.ರಂಗನಾಥ್
  • ಖಾನಾಪುರ – ಅಂಜಲಿ ನಿಂಬಾಳ್ಕರ್
  • ಕೆಜಿಎಫ್ – ರೂಪಾ
  • ಗೌರಿಬಿದನೂರು – ಶಿವಶಂಕರರೆಡ್ಡಿ
  • ಶೃಂಗೇರಿ – ರಾಜೇಗೌಡ
  • ಆನೇಕಲ್ – ಶಿವಣ್ಣ
  • ಪುಲಕೇಶಿನಗರ – ಅಖಂಡ ಶ್ರೀನಿವಾಸ್ ಮೂರ್ತಿ
  • ಶಿವಾಜಿನಗರ – ರಿಜ್ವಾನ್ ಅರ್ಷದ್
  • ಕಲಬುರಗಿ ಉತ್ತರ – ಫಾತಿಮಾ
  • ಹರಿಹರ – ರಾಮಪ್ಪ
  • ಕುಂದಗೋಳ – ಕುಸುಮಾ ಶಿವಳ್ಳಿ

Spread the love

About Laxminews 24x7

Check Also

ಕರ್ನಾಟಕ ‘SSLC ಪರೀಕ್ಷೆ-2’ರ ‘ಪರಿಷ್ಕೃತ ವೇಳಾಪಟ್ಟಿ’ ಪ್ರಕಟ

Spread the love ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಎಸ್ ಎಸ್ ಎಲ್ ಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ