Home / ಜಿಲ್ಲೆ / ಬೆಳಗಾವಿ / ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಹಿಡಕಲ್‌ ಜಲಾಶಯದಲ್ಲಿ ನೀರಿನ ಮಟ್ಟ 3.08 ಅಡಿ ಏರಿಕೆ

ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಹಿಡಕಲ್‌ ಜಲಾಶಯದಲ್ಲಿ ನೀರಿನ ಮಟ್ಟ 3.08 ಅಡಿ ಏರಿಕೆ

Spread the love

ಬೆಳಗಾವಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಮುಂದುವರಿದಿದ್ದು, ಜಿಲ್ಲೆಯ ಹಿಡಕಲ್‌ನ ರಾಜಾ ಲಖಮಗೌಡ ಜಲಾಶಯದ ಒಳಹರಿವೂ ಹೆಚ್ಚಿದೆ. ಗುರುವಾರ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ

2,175 ಅಡಿ ಸಾಮರ್ಥ್ಯದ ಈ ಜಲಾಶಯದಲ್ಲಿ ಬುಧವಾರ 2,090.58 ಅಡಿಯವರೆಗೆ ನೀರು ಸಂಗ್ರಹವಿತ್ತು.

ಗುರುವಾರ ಬೆಳಿಗ್ಗೆ 10ರ ಸುಮನಾರಿಗೆ ಅದು 2,093.66 ಅಡಿಗೆ ಏರಿಕೆಯಾಗಿದೆ. ಒಳಹರಿವಿನ ಪ್ರಮಾಣವೂ 5,592 ಕ್ಯುಸೆಕ್‌ನಿಂದ 10,675 ಕ್ಯುಸೆಕ್‌ಗೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ‘ಮಾಹಿತಿ ನೀಡಿದ್ದಾರೆ.

ಇನ್ನೊಂದೆಡೆ, ಸವದತ್ತಿ ತಾಲ್ಲೂಕಿನ ನವಿಲುತೀರ್ಥದ ರೇಣುಕಾಸಾಗರ ಜಲಾಶಯದಲ್ಲಿ ಬುಧವಾರ 2,053.50 ಅಡಿ ನೀರು ಸಂಗ್ರಹವಿತ್ತು. ಗುರುವಾರ ಅದು 2,054.50 ಅಡಿಗೆ ಏರಿಕೆಯಾಗಿದೆ. ಅಂದರೆ, ಗುರುವಾರಕ್ಕೆ ಒಂದು ಅಡಿ ನೀರು ಏರಿಕೆಯಾಗಿದೆ. ಒಳಹರಿವಿನ ಪ್ರಮಾಣವೂ 1,664 ಕ್ಯುಸೆಕ್‌ನಿಂದ 7,729 ಕ್ಯುಸೆಕ್‌ಗೆ ಏರಿಕೆಯಾಗಿದೆ. ಈ ಜಲಾಶಯದ ಗರಿಷ್ಠ ನೀರು ಸಂಗ್ರಹ ಮಟ್ಟ 2,079.50 ಅಡಿ ಇದೆ.

ಬೆಳಗಾವಿ ನಗರ ಹಾಗೂ ಜಿಲ್ಲೆಯ ವಿವಿಧೆಡೆ ಗುರುವಾರ ಬೆಳಿಗ್ಗೆಯಿಂದ ಮಳೆ ಬಿಡುವು ನೀಡಿದೆ.

*ತಾಲ್ಲೂಕುವಾರು ಎಷ್ಟು ಮಳೆ:

ಜುಲೈ 1ರಿಂದ 7ರವರೆಗಿನ ಒಂದು ವಾರದ ಅವಧಿಯಲ್ಲಿ ಜಿಲ್ಲೆಯಲ್ಲಿ 257.83 ಸೆ.ಮೀ ಮಳೆ ಬಿದ್ದಿದೆ.

ಖಾನಾಪುರ ತಾಲ್ಲೂಕಿನಲ್ಲಿ 75.6 ಸೆ.ಮೀ, ಬೆಳಗಾವಿ 45.5 ಸೆ.ಮೀ, ಚನ್ನಮ್ಮನ ಕಿತ್ತೂರು- 27 ಸೆ.ಮೀ, ಹುಕ್ಕೇರಿ- 15.9 ಸೆ.ಮೀ ಚಿಕ್ಕೋಡಿ- 12.9 ಸೆ.ಮೀ ಬೈಹೊಂಗಲ 12.9 ಸೆ.ಮೀ. ಮಳೆ ಬಿದ್ದಿದೆ.

ಖಾನಾಪುರ ಪಟ್ಟಣದಲ್ಲಿ ಬುಧವಾರ (ಜುಲೈ 6) ಒಂದೇ ದಿನ 82.4 ಸೆ.ಮೀ ಮಳೆ ಬಿದ್ದಿದ್ದು ಜಿಲ್ಲೆಯಲ್ಲಿ ಈವರೆಗೆ ಒಂದೇ ದಿನದಲ್ಲಿ ಬಿದ್ದ ಅತಿ ಹೆಚ್ಚು ಮಳೆ ಎಂದು ಪರಿಗಣಿಸಲಾಗಿದೆ. ಅತಿ ಕಡಿಮೆ ಎಂದರೆ; ರಾಯಬಾಗದಲ್ಲಿ 6.4 ಸೆ.ಮೀ ಮಾತ್ರ ಮಳೆ ಬಿದ್ದಿದೆ.

*ಕಿರು ಸೇತುವೆ ಮುಳುಗಡೆ

ದೂಧಗಂಗಾ ನದಿ ನೀರಿನ ಹರಿವು ಗುರುವಾರ ಮತ್ತಷ್ಟು ಹೆಚ್ಚಾಗಿದ್ದು, ಚಿಕ್ಕೋಡಿ ತಾಲ್ಲೂಕಿನ ಮಲಿಕವಾಡ ಬಳಿಯ ಕಿರು ಸೇತುವೆ ಮೇಲೆ ನೀರು ಹರಿಯುತ್ತಿದೆ.


Spread the love

About Laxminews 24x7

Check Also

ಕರ್ನಾಟಕ ‘SSLC ಪರೀಕ್ಷೆ-2’ರ ‘ಪರಿಷ್ಕೃತ ವೇಳಾಪಟ್ಟಿ’ ಪ್ರಕಟ

Spread the love ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಎಸ್ ಎಸ್ ಎಲ್ ಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ