Breaking News
Home / ರಾಜಕೀಯ / ಅಕ್ರಮ ಮರಳು ದಂಧೆ ವಿರುದ್ಧ ಧ್ವನಿ ಎತ್ತಿದ್ದ ಯುವಕನಿಗೆ ಚಿತ್ರಹಿಂಸೆ ಕೊಟ್ಟಿರುವ ಪೊಲೀಸರು

ಅಕ್ರಮ ಮರಳು ದಂಧೆ ವಿರುದ್ಧ ಧ್ವನಿ ಎತ್ತಿದ್ದ ಯುವಕನಿಗೆ ಚಿತ್ರಹಿಂಸೆ ಕೊಟ್ಟಿರುವ ಪೊಲೀಸರು

Spread the love

ತಮ್ಮ ಗ್ರಾಮದಲ್ಲಿ ಅಕ್ರಮ ಮರಳು ದಂಧೆ ವಿರುದ್ಧ ಈ ಯುವಕ ಧ್ವನಿ ಎತ್ತಿದ್ದೆ ತಪ್ಪಾಯ್ತಾ..? ಈ ಯುವಕನಿಗೆ ಪೊಲೀಸರು ಕೊಡಬಾರದ ಚಿತ್ರಹಿಂಸೆ ಕೊಟ್ಟಿರುವ ಘಟನೆ ಸವದತ್ತಿ ತಾಲೂಕಿನಲ್ಲಿ ನಡೆದಿದೆ.

ಹೌದು ಹೀಗೆ ನೀವು ನೋಡುತ್ತಿರುವ ಯುವಕನ ಹೆಸರು ಸಿದ್ದಪ್ಪ ಲಕ್ಷ್ಮಣ ಹಿರೂರ ಅಂತಾ, ಸವದತ್ತಿ ತಾಲೂಕಿನ ತೆಗ್ಗಿಹಾಳ ಗ್ರಾಮದ ಯುವಕ ಈತ. ಈತ ತಮ್ಮ ಗ್ರಾಮದಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದೆ, ಅದನ್ನು ತಡೆಗಟ್ಟಿ ಎಂದು ಸವದತ್ತಿ ತಹಶೀಲ್ದಾರ್‍ಗೆ ಫೋನ್ ಮಾಡಿ ತಿಳಿಸಿದ್ದಾರೆ. ಆದರೆ ತಹಶೀಲ್ದಾರ್ ಯಾವುದೇ ಕ್ರಮ ಕೈಗೊಳ್ಳದೇ ಅಕ್ರಮ ಮರಳು ದಂಧೆಕೋರರ ಮಾತು ಕೇಳಿ ಈತನ ಮೇಲೆ ಸುಳ್ಳು ಕೇಸ್ ದಾಖಲಿಸಿ, 4 ದಿನ ಪೊಲೀಸ್ ಠಾಣೆಯಲ್ಲಿ ಇಟ್ಟುಕೊಂಡು ಹಲ್ಲೆ ಮಾಡಿದ್ದಾರೆ, ಅಷ್ಟೇ ಅಲ್ಲದೇ ಕರೆಂಟ್ ಶಾಕ್ ಕೂಡ ಕೊಟ್ಟಿದ್ದಾರೆ.

ಇನ್ನು ಈತನ ಪಾಲಕರಿಗೂ ಕೂಡ ಪೊಲೀಸರು ಜೀವ ಬೆದರಿಕೆ ಹಾಕಿದ್ದಾರಂತೆ. ಇದರಿಂದ ಆಕ್ರೋಶಗೊಂಡಿರುವ ನೊಂದ ಯುವಕ ಸಿದ್ದಪ್ಪ ಲಕ್ಷ್ಮಣ ಹಿರೂರ ಬುಧವಾರ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ತನಗಾದ ಅನ್ಯಾಯಕ್ಕೆ ನ್ಯಾಯ ಕೊಡಿಸಬೇಕು. ನನ್ನ ಮೇಲೆ ದೌರ್ಜನ್ಯ ಮಾಡಿರುವ ಸವದತ್ತಿ ತಹಶೀಲ್ದಾರ್ ಹಾಗೂ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದಾನೆ.


Spread the love

About Laxminews 24x7

Check Also

ಕರ್ನಾಟಕ ‘SSLC ಪರೀಕ್ಷೆ-2’ರ ‘ಪರಿಷ್ಕೃತ ವೇಳಾಪಟ್ಟಿ’ ಪ್ರಕಟ

Spread the love ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಎಸ್ ಎಸ್ ಎಲ್ ಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ