Home / ರಾಜಕೀಯ / ಬೆಳಗಾವಿ: ಹಿಂದೂ-ಮುಸ್ಲಿಮರಿಂದ ಉರುಸ್ ಆಚರಣೆ

ಬೆಳಗಾವಿ: ಹಿಂದೂ-ಮುಸ್ಲಿಮರಿಂದ ಉರುಸ್ ಆಚರಣೆ

Spread the love

ಬೆಳಗಾವಿ: ಇಲ್ಲಿನ ಪೊಲೀಸ್‌ ಕೇಂದ್ರಸ್ಥಾನದಲ್ಲಿರುವ ಹಜರತ್‌ ಸೈಯದ್‌ ಕೈಸರಶಾಹ್‌ವಲಿ ದರ್ಗಾದಲ್ಲಿ ಮೂರು ದಿನಗಳವರೆಗೆ ನಡೆಯಲಿರುವ ಉರುಸ್‌ಗೆ ಚಾಲನೆ ದೊರೆತಿದೆ.

ಈ ಪರಿಸರದಲ್ಲಿ ದರ್ಗಾ ಭಾವೈಕ್ಯತೆ ಕೇಂದ್ರವಾಗಿ ಗುರುತಿಸಿಕೊಂಡಿದೆ.

ಕೋವಿಡ್‌-19 ಹಿನ್ನೆಲೆಯಲ್ಲಿ ಕಳೆದೆರಡು ವರ್ಷ ಸಾಂಕೇತಿಕವಾಗಿ ಉರುಸ್‌ ಆಚರಿಸಲಾಗಿತ್ತು. ಕೊರೊನಾ ಪರಿಣಾಮ ತಗ್ಗಿದ್ದರಿಂದ ಈ ಬಾರಿ ಹಿಂದೂ-ಮುಸ್ಲಿಮರು ಒಟ್ಟಾಗಿ ಸೇರಿ ಸಡಗರದಿಂದ ಉರುಸ್‌ ಆಚರಿಸಿದರು. ಭಾವೈಕ್ಯದ ಸಂದೇಶ ರವಾನಿಸಿದರು.

ಶುಕ್ರವಾರ ರಾತ್ರಿಯಿಂದಲೇ ವಿದ್ಯುತ್‌ ದೀಪಗಳ ಅಲಂಕಾರದಿಂದ ದರ್ಗಾ ಝಗಮಗಿಸುತ್ತಿದ್ದು, ಹಿಂದೂ-ಮುಸ್ಲಿಮರು ಸಾವಿರಾರು ಸಂಖ್ಯೆಯಲ್ಲಿ ಬಂದು ಧಾರ್ಮಿಕ ಕಾರ್ಯ ನೆರವೇರಿಸಿ ಭಾವೈಕ್ಯ ಮೆರೆದರು. ತಮ್ಮ ಇಷ್ಟಾರ್ಥ ಈಡೇರಿಸಿದ ದೇವರ ಹರಕೆ ತೀರಿಸಿ ಭಕ್ತಿ ಸಮರ್ಪಿಸಿದರು. ಬೆಳಗಾವಿ ಜೊತೆಗೆ ನೆರೆಯ ಮಹಾರಾಷ್ಟ್ರ ಮತ್ತು ಗೋವಾದಿಂದಲೂ ಭಕ್ತಸಮೂಹ ಬಂದಿದ್ದು ವಿಶೇಷ.

ಸಮಾಜದಲ್ಲಿ ಸಾಮರಸ್ಯದಿಂದ ಬದುಕಿ: ‘ಎಲ್ಲ ಧರ್ಮಗಳೂ ಸಾಮರಸ್ಯ, ಶಾಂತಿ ಹಾಗೂ ಸಮಾನತೆ ಸಾರಿವೆ. ಹಾಗಾಗಿ ಸಮಾಜದಲ್ಲಿ ಎಲ್ಲರೂ ಸಾಮರಸ್ಯದಿಂದ ಬದುಕಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಫುರ್ಖಾನ್‌ ನಬ್ಬುವಾಲೆ ಹೇಳಿದರು.

ದರ್ಗಾದಲ್ಲಿ ನಡೆದ ಗಂಧ ಏರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಾನಗರಪಾಲಿಕೆ ಸದಸ್ಯ ಬಾಬಾಜಾನ ಮತವಾಲೆ, ‘ಹಲವು ವರ್ಷಗಳಿಂದ ಇಲ್ಲಿ ಸರ್ವಧರ್ಮೀಯರೂ ಒಂದಾಗಿ ಉರುಸ್‌ ಆಚರಿಸುತ್ತಿರುವುದು ಶ್ಲಾಘನೀಯ. ಈ ಪರಂಪರೆಯನ್ನು ಮುಂದುವರಿದುಕೊಂಡು ಹೋಗಬೇಕು’ ಎಂದು ಆಶಿಸಿದರು.

ಮುಖಂಡರಾದ ಜಾವೇದ್‌ ದೇಸಾಯಿ, ವಾಸೀಮ್‌ ಪಟೇಲ್‌, ರಿಜ್ವಾನ್‌ ದಳವಾಯಿ, ಇರ್ಫಾನ್‌ ಮಕಾನದಾರ, ಮಹಮ್ಮದ್‌ರಫಿಕ್‌ ಕುನ್ನಿಭಾವಿ, ಎ.ಎ. ಕಿಲ್ಲೇದಾರ್‌, ಮಹಮ್ಮದ್‌ಸಲೀಮ್‌ ಕಲಾರಕೊಪ್ಪ, ಇಮ್ರಾನ್‌ ಹಬೀಬ್‌, ಮಹಮ್ಮದ್‌ ಲಡಾಭಾಯಿ, ಮೈನುದ್ದೀನ್‌ ಪಟೇಲ್‌, ಸಾದಿಕ್‌ ದೇಸಾಯಿ, ಆವೇಜ್‌ ದೇಸಾಯಿ, ಲತೀಫ್‌ ಮುಲ್ಲಾ, ಎ.ಎ.ಬುಖಾರಿ, ಮೈನುದ್ದೀನ್‌ ಮೊಗಲ್‌ ಇದ್ದರು.


Spread the love

About Laxminews 24x7

Check Also

ಬಂಧನ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ದ್ವಿತೀಯು ಪಿಯು ಪಾಸಾದವರೂ ಅಪ್ಲೈ ಮಾಡಿ

Spread the love ಬೆಂಗಳೂರು: ಬ್ಯಾಂಕ್‌ ಉದ್ಯೋಗಕ್ಕಾಗಿ(Bank Job) ಹುಡುಕಾಟ ನಡೆಸುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಗೋಲ್ಡನ್‌ ಚಾನ್ಸ್‌. ಭಾರತದ ಪ್ರಮುಖ ಖಾಸಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ