Breaking News
Home / ಜಿಲ್ಲೆ / ಬೆಂಗಳೂರು / ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ: ವರ್ಗಾವಣೆ ನೀತಿಯಲ್ಲಿ ಮಾರ್ಪಾಡು ಮಾಡಿ ಆದೇಶ ಹೊರಡಿಸಿದ ಸಿಎಂ ಬಸವರಾಜ ಬೊಮ್ಮಾಯಿ

ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ: ವರ್ಗಾವಣೆ ನೀತಿಯಲ್ಲಿ ಮಾರ್ಪಾಡು ಮಾಡಿ ಆದೇಶ ಹೊರಡಿಸಿದ ಸಿಎಂ ಬಸವರಾಜ ಬೊಮ್ಮಾಯಿ

Spread the love

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraja Bommai) ಅವರ ಕಚೇರಿಗೆ ವರ್ಗಾವಣೆ ಸರ್ಕಾರಿ ಅಧಿಕಾರಿಗಳು ವರ್ಗಾವಣೆ ಕೋರಿ ಹೆಚ್ಚಿನ ಸಂಖ್ಯೆಯಲ್ಲಿ ಮನವಿ ಸಲ್ಲಿಸುತ್ತಿರುವುದು ಖುದ್ದು ಸಿಎಂಗೆ ದೊಡ್ಡ ತಲೆ ನೋವು ಆಗಿದೆ.

 

ಈ ನಡುವೆ ವರ್ಗಾವಣೆ ನೀತಿಯ ಪ್ರಕಾರ (transfer policy) ಎಲ್ಲಾ ವೃಂದದ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ವರ್ಗಾವಣೆ ಅವಧಿ ಮುಗಿದಿರುವುದರಿಂದ ಕಡತಗಳನ್ನು ಮುಖ್ಯಮಂತ್ರಿಗಳ ಅನುಮೋದನೆಗೆ ಸಲ್ಲಿಸಲಾಗುತ್ತಿದೆ (Chief Minister for approval.). ಈ ಅವಕಾಶವನ್ನು ನಿವೃತ್ತಿಯಿಂದ ತೆರನಾದ ಹಾಗೂ ಖಾಲಿ ಹುದ್ದೆಗಳನ್ನು ತುಂಬಲು ಮಾಡಿಕೊಡಲಾಗಿತ್ತು, ಆದರೆ ಈ ಕಚೇರಿಗೆ ಸಲ್ಲಿಸಲಾಗುವ ಬಹುತೇಕ ವರ್ಗಾವಣೆ ಪ್ರಕರಣಗಳು ನಿಯಮಿತ ವರ್ಗಾವಣೆ ಸ್ವರೂಪದಾಗಿದ್ದು, ಇವುಗಳನ್ನು ಕಡಿಮೆ ಮಾಡದಿದ್ದಲ್ಲಿ, ಇಲಾಖೆಗಳಲ್ಲಿನ ಕೆಲಸಗಳ ಪ್ರಗತಿ ಕುಂಠಿತವಾಗಲು ಕಾರಣವಾಗುತ್ತದೆ. ಆದ್ದರಿಂದ ಈ ಕೆಳಕಂಡ ಮಾರ್ಪಾಡು ವರ್ಗಾವಣೆ ನೀತಿಯಲ್ಲಿ ತರಲು ಕ್ರಮ ಕೈಗೊಳ್ಳಾಗುವುದು ಅಂತ ಆದೇಶ ಹೊರಡಿಸಿದೆ.

ವರ್ಗಾವಣೆ ನೀತಿಯಲ್ಲಿ ಮಾರ್ಪಾಡು ಹೀಗಿದೆ:
1. ಗ್ರೂಪ್ ಬಿ, ಸಿ, ಡಿ ಖಾಲಿ ಹುದ್ದೆಗಳಿಗೆ ಇಲಾಖಾ ಸಚಿವರ ಹಂತದಲ್ಲೇ ಅನುಮೋದಿಸಿ ಆದೇಶಿಸಬೇಕು.

2. ತೆರವಾಗುವ ಹುದ್ದೆಗಳಿಗೆ ಯಾವುದೇ ವರ್ಗಾವಣೆ ಮಾಡುವಂತಿಲ್ಲ. ಮತ್ತು

3. ಗ್ರೂಪ್-ಎ ಖಾಲಿ ಹುದ್ದೆಗಳ ಸ್ಥಳ ನಿಯುಕ್ತಿಗೆ ಸಂಬಂಧಪಟ್ಟ ಪ್ರಸ್ತಾವನೆ ಮಾತ್ರ ಸಿಎಂ ಕಚೇರಿಗೆ ಸಲ್ಲಿಸಬೇಕು.


Spread the love

About Laxminews 24x7

Check Also

ಮೊಸಳೆಗಳಿವೆ ಎಚ್ಚರಿಕೆ!

Spread the love ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಮನುಷ್ಯ ಮತ್ತು ಮೊಸಳೆಗಳ ಸಂಘರ್ಷ ಬೇಸಿಗೆಯಲ್ಲಿ ಅಧಿಕ. ಕೃಷ್ಣಾ ನದಿಯಲ್ಲಿ ನೀರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ