Home / ರಾಜಕೀಯ / ದೇಶಾಧ್ಯಂತ ಪಾದಯಾತ್ರೆ ಕೈಗೊಂಡ ಮಹಾರಾಷ್ಟ್ರದ ಯುವಕ

ದೇಶಾಧ್ಯಂತ ಪಾದಯಾತ್ರೆ ಕೈಗೊಂಡ ಮಹಾರಾಷ್ಟ್ರದ ಯುವಕ

Spread the love

ಪ್ಲಾಸ್ಟಿಕ್ ಮುಕ್ತ ಭಾರತ, ಗುರುಕುಲ ವ್ಯವಸ್ಥೆ ಪುನರ್ ಆರಂಭ ಹಾಗೂ ದೇಶದಲ್ಲಿ ಭ್ರಾತೃತ್ವ ಭಾವನೆ ಎಲ್ಲರಲ್ಲಿಯೂ ಬರಬೇಕು ಎಂಬ ಉದ್ದೇಶದಿಂದ ಮಹಾರಾಷ್ಟ್ರದ ಯುವಕನೊರ್ವ ದೇಶಾಧ್ಯಂತ ಪಾದಯಾತ್ರೆ ಕೈಗೊಂಡಿದ್ದಾನೆ. ಸಧ್ಯ ಬೆಳಗಾವಿಗೆ ಆಗಮಿಸಿರುವ ಈ ಯುವಕನಿಗೆ ಕನ್ನಡಪರ ಸಂಘಟನೆಗಳು ಆತ್ಮೀಯವಾಗಿ ಬರಮಾಡಿಕೊಂಡಿವೆ.

ಹೌದು ನೀವು ನೋಡುತ್ತಿರುವ ಈ ಯುವಕನ ಹೆಸರು ರೋಹನ್ ಅಗರವಾಲ್ ಅಂತಾ. ಈತ ಮಹಾರಾಷ್ಟ್ರದ ನಾಗ್ಪುರದವನು. ಇನ್ನು ಕೇವಲ 19 ವರ್ಷ ವಯಸ್ಸು. ತನ್ನ ಕಾಲೇಜು, ತನ್ನ ಮನೆ ಮತ್ತು ಕುಟುಂಬ ಅಂತಾ ಇರೋ ಇಂದಿನ ಕಾಲದಲ್ಲಿ ಈ ಯುವಕ ದೇಶದಲ್ಲಿ ಪ್ಲಾಸ್ಟಿಕ್ ಮುಕ್ತ ಭಾರತ, ಗುರುಕುಲ ವ್ಯವಸ್ಥೆ ಪುನರ್ ಆರಂಭ ಹಾಗೂ ದೇಶದಲ್ಲಿ ಭ್ರಾತೃತ್ವ ಭಾವನೆ ಮೂಡುವ ಬಗ್ಗೆ ಜಾಗೃತಿ ಮೂಡಿಸಲು ಪಾದಯಾತ್ರೆ ಕೈಗೊಂಡಿದ್ದಾನೆ. ವಾರಣಾಸಿಯಿಂದ ಪಾದಯಾತ್ರೆ ಆರಂಭಿಸಿ ಈಗಾಗಲೇ 403 ದಿನಗಳಲ್ಲಿ 15 ರಾಜ್ಯಗಳನ್ನು ಸುತ್ತಾಡಿ, ರವಿವಾರ ಬೆಳಗಾವಿಗೆ ಆಗಮಿಸಿದ್ದಾನೆ. ನಗರದ ವೀರರಾಣಿ ಚನ್ನಮ್ಮಾಜಿ ವೃತ್ತದಲ್ಲಿ ವಿವಿಧ ಕನ್ನಡ ಸಂಘಟನೆಗಳ ಮುಖಂಡರು ರೋಹನ್‍ಗೆ ಹೂವಿನ ಮಾಲೆ ಹಾಕಿ ಅತ್ಯಂತ ಅದ್ಧೂರಿಯಾಗಿ ಬರಮಾಡಿಕೊಂಡರು.

ಇದೇ ವೇಳೆ ಮಾತನಾಡಿದ ರೋಹನ್ ನಾನು ಈಗಾಗಲೇ ಈಗಾಗಲೇ 15 ರಾಜ್ಯಗಳನ್ನು ಪಾದಯಾತ್ರೆ ಮೂಲಕ ಸುತ್ತಿ ಬಂದಿದ್ದು. ಈಗ ಬೆಳಗಾವಿಗೆ ಬಂದಿದ್ದೇನೆ. ಕರ್ನಾಟಕ ರಾಜ್ಯೋತ್ಸವ ನಡೆಯುವ ದಿನ ನಾನು ಇಲ್ಲಿಗೆ ಬಂದಿರುವುದು ನನಗೆ ಸಂತೋಷವಾಗುತ್ತಿದೆ. ಮುಂದೆ ಎರಡು ವರ್ಷದ ಬಳಿಕ ದೆಹಲಿಯಿಂದ ಸೈಬೇರಿಯಾ ದೇಶಕ್ಕೆ ಹೋಗುವ ಯೋಜನೆ ಹಾಕಿಕೊಂಡಿದ್ದಾನೆ ಎಂದು ಹೆಚ್ಚಿನ ಮಾಹಿತಿ ನೀಡಿದ್ದಾನೆ.
ಬೈಟ್:
ವಾ.ಓ: ಬಳಿಕ ಕನ್ನಡ ಹೋರಾಟಗಾರ ಶ್ರೀನಿವಾಸ್ ತಾಳೂಕರ್ ಮಾತನಾಡಿ ಪ್ಲಾಸ್ಟಿಕ್ ಮುಕ್ತ ಭಾರತ ಆಗಬೇಕು ಹಾಗೂ ಗುರುಕುಲ ವ್ಯವಸ್ಥೆ ಉಳಿಸಬೇಕು ಎಂಬ ಧ್ಯೇಯೋದ್ದೇಶ ಇಟ್ಟುಕೊಂಡು ಇಡೀ ದೇಶಾಧ್ಯಂತ ಪಾದಯಾತ್ರೆ ಮಾಡುತ್ತಿರುವ ಈ ಯುವಕನ ಕಾರ್ಯ ಶ್ಲಾಘನೀಯ. ಅತನಿಗೆ ಕನ್ನಡ ಶಾಲು ಹಾಕಿ ಒಂದು ಚಿಕ್ಕ ಸನ್ಮಾನ ಮಾಡಿದ್ದೇವೆ. ರಾಜ್ಯೋತ್ಸವ ಸಂದರ್ಭದಲ್ಲಿಯೇ ಈ ಯುವಕ ನಮ್ಮ ಬೆಳಗಾವಿಗೆ ಬಂದಿರುವುದು ಮತ್ತಷ್ಟು ನಮಗೆ ಖುಷಿ ತಂದಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕನ್ನಡ ಹೋರಾಟಗಾರರಾದ ಕಸ್ತೂರಿ ಭಾಂವಿ, ಅನಸೂಯಾ ಅಸೂರಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಒಟ್ಟಿನಲ್ಲಿ ಒಂದು ಒಳ್ಳೆಯ ಸಂಕಲ್ಪ ಮಾಡಿಕೊಂಡು ದೇಶಾಧ್ಯಂತ ಜಾಗೃತಿ ಮೂಡಿಸುತ್ತಿರುವ ಈ ಮಹಾರಾಷ್ಟ್ರದ ಯುವಕನ ಕಾರ್ಯಕ್ಕೆ ನಾವು ಹ್ಯಾಟ್ಸಪ್ ಹೇಳೋಣ. ಇದರ ಜೊತೆಗೆ ಈತನ ಮುಂದಿನ ಪ್ರಯಾಣ ಸುಖಕರವಾಗಿರಲಿ ಎಂದು ಹಾರೈಸೋಣ.


Spread the love

About Laxminews 24x7

Check Also

ಕರ್ನಾಟಕ ‘SSLC ಪರೀಕ್ಷೆ-2’ರ ‘ಪರಿಷ್ಕೃತ ವೇಳಾಪಟ್ಟಿ’ ಪ್ರಕಟ

Spread the love ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಎಸ್ ಎಸ್ ಎಲ್ ಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ