Breaking News
Home / ರಾಜ್ಯ / ವ್ಯಕ್ತಿಯ ಸಾವಿನ ನಂತರ ಆಧಾರ್ ಸಂಖ್ಯೆಯನ್ನ ಸರ್ಕಾರ ಏನು ಮಾಡುತ್ತೆ…? ಇಲ್ಲಿದೆ ಮಾಹಿತಿ

ವ್ಯಕ್ತಿಯ ಸಾವಿನ ನಂತರ ಆಧಾರ್ ಸಂಖ್ಯೆಯನ್ನ ಸರ್ಕಾರ ಏನು ಮಾಡುತ್ತೆ…? ಇಲ್ಲಿದೆ ಮಾಹಿತಿ

Spread the love

ಆಧಾರ್ ಕಾರ್ಡ್ ಅಗತ್ಯ ದಾಖಲೆಯಾಗಿದೆ. ಸರ್ಕಾರಿ ಯೋಜನೆ ಲಾಭ ಸೇರಿದಂತೆ ಖಾಸಗಿಯ ಕೆಲ ಸೇವೆಗಳಿಗೆ ಈಗ ಆಧಾರ್ ಕಡ್ಡಾಯವಾಗಿದೆ. ಕೊರೊನಾ ಲಸಿಕೆಯನ್ನು ಪಡೆಯುವ ಸಂದರ್ಭದಲ್ಲಿ ಆಧಾರ್​ ಕಾರ್ಡ್​ ಅತ್ಯಗತ್ಯ.

ಆಧಾರ್ ಕಾರ್ಡ್ ಪಡೆದ ವ್ಯಕ್ತಿ ಸಾವನ್ನಪ್ಪಿದ್ರೆ ಆತನ ಆಧಾರ್ ಏನಾಗುತ್ತದೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುವುದು ಸಹಜ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಲೋಕಸಭೆಯಲ್ಲಿ ಇತ್ತಿಚೆಗೆ ಸವಿಸ್ತಾರವಾಗಿ ಹೇಳಿದ್ದಾರೆ. ಅವರು ಹೇಳುವ ಪ್ರಕಾರ, ವ್ಯಕ್ತಿಯ ಸಾವಿನ ನಂತರ ಆತನ ಆಧಾರ್ ನಿಷ್ಕ್ರಿಯಗೊಳಿಸಲಾಗುವುದಿಲ್ಲ. ಆಧಾರ್ ರದ್ದುಗೊಳಿಸಲು ಯಾವುದೇ ವ್ಯವಸ್ಥೆ ಇಲ್ಲ ಸತ್ತ ವ್ಯಕ್ತಿಯ ಆಧಾರ್ ಸಂಖ್ಯೆಯನ್ನು ರದ್ದುಗೊಳಿಸಲು ಸದ್ಯಕ್ಕೆ ಯಾವುದೇ ಆಪ್ಷನ್​ ಇಲ್ಲ ಎಂದು ಸಚಿನ ರಾಜೀವ್​ ಚಂದ್ರಶೇಖರ್ ಹೇಳಿದ್ದಾರೆ.

ಜನನ ಮತ್ತು ಮರಣದ ರಿಜಿಸ್ಟ್ರಾರ್ ಜೊತೆಗೆ ಜನನ ಮತ್ತು ಸಾವಿನ ಅಂಕಿಅಂಶಗಳು ಸರ್ಕಾರದ ಬಳಿಗೆ ಸುರಕ್ಷಿತವಾಗಿರುತ್ತೆ. ಯಾವುದೇ ವ್ಯಕ್ತಿಯ ಆಧಾರ್ ಅನ್ನು ನಿಷ್ಕ್ರಿಯಗೊಳಿಸುವಂತಹ ಯಾವುದೇ ವ್ಯವಸ್ಥೆ ಸರ್ಕಾರದ ಬಳಿ ಇಲ್ಲ. ಹಾಗೇನಾದರೂ ಆಧಾರ್ ಸಂಖ್ಯೆಯನ್ನು ಹಂಚಿಕೊಳ್ಳುವ ವ್ಯವಸ್ಥೆ ಜಾರಿಯಾಗಿದ್ದೇ ಆದಲ್ಲಿ, ಜನರು ಯುಐಡಿಎಐನೊಂದಿಗೆ ಸತ್ತವರ ಆಧಾರ್ ಸಂಖ್ಯೆಯನ್ನು ಹಂಚಿಕೊಳ್ಳಲು ಪ್ರಾರಂಭಿಸುತ್ತಾರೆ. ಆಧಾರ್ ನಿಷ್ಕ್ರಿಯಗೊಳಿಸಿದ್ರೆ ಅಥವಾ ಮರಣ ಪ್ರಮಾಣಪತ್ರದೊಂದಿಗೆ ಲಿಂಕ್ ಮಾಡಿದ್ರೆ ಆಧಾರ್ ಮಾಲೀಕರ ಸಾವಿನ ನಂತರ ಅದನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತೆ.


Spread the love

About Laxminews 24x7

Check Also

ಆರೋಪಿ ಫಯಾಜ್‌ ನ್ಯಾಯಾಂಗ ಬಂಧನಕ್ಕೆ!

Spread the loveಹುಬ್ಬಳ್ಳಿ : ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯ ಹತ್ಯೆ(student murder) ಆರೋಪಿ ಫಯಾಜ್‌(Fayaz) ಎಂಬುವವನನ್ನ ಕೋರ್ಟ್‌ ಇಂದು ನ್ಯಾಯಾಂಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ