Breaking News
Home / ಜಿಲ್ಲೆ / ಬೆಂಗಳೂರು / ಜೂನಿಯರ್ ಆರ್ಟಿಸ್ಟ್‌ಗಳಿಗೆ ಪಡಿತರ ಕಿಟ್ ವಿತರಣೆ; ಮಾನವೀಯತೆ ಮೆರೆದ ಹಿರಿಯ ನಟಿ ಲೀಲಾವತಿ ಹಾಗೂ ನಟ ವಿನೋದ್ ರಾಜ್

ಜೂನಿಯರ್ ಆರ್ಟಿಸ್ಟ್‌ಗಳಿಗೆ ಪಡಿತರ ಕಿಟ್ ವಿತರಣೆ; ಮಾನವೀಯತೆ ಮೆರೆದ ಹಿರಿಯ ನಟಿ ಲೀಲಾವತಿ ಹಾಗೂ ನಟ ವಿನೋದ್ ರಾಜ್

Spread the love

ಬೆಂಗಳೂರು: ಕೊರೊನಾ ದೇಶದೆಲ್ಲೇಡೆ ಹಬ್ಬಿದ್ದು, ಸಾವು-ನೋವು ಸಂಭವಿಸಿದೆ. ಹೀಗಿರುವಾಗಲೇ ರಾಜ್ಯ ಸರ್ಕಾರ ಪತಿಸ್ಥಿತಿಯನ್ನು ಹತೋಟಿಗೆ ತರಲು ಲಾಕ್​ಡೌನ್ ಘೋಷಣೆ ಮಾಡಿದ್ದು, ಜನರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಸಿನಿಮಾ ರಂಗದವರು ಕೂಡ ಈ ಸಂಕಷ್ಟದಿಂದ ಹೊರತಾಗಿಲ್ಲ. ಹೀಗಾಗಿ ಅನೇಕರು ಸಾಮಾಜಿಕ ಕಾರ್ಯಕ್ಕೆ ಮುಂದಾಗಿದ್ದು, ಸಹಾಯ ಹಸ್ತ ನೀಡುತ್ತಿದ್ದಾರೆ. ಈ ರೀತಿ ನೆರವಿಗೆ ದಾವಿಸಿದವರಲ್ಲಿ ಹಿರಿಯ ನಟಿ ಲೀಲಾವತಿ ಹಾಗೂ ಅವರ ಪುತ್ರ ನಟ ವಿನೋದ್ ರಾಜ್ ಕೂಡ ಒಬ್ಬರು. ಇದೀಗ ಸಿನಿಮಾ ಸಹ ಚಿತ್ರರಂಗದ ಜ್ಯೂನಿಯರ್ ಕಲಾವಿದರಿಗೆ ನೆರವಾಗುವ ಮೂಲಕ ಮಾದರಿಯಾಗಿದ್ದಾರೆ.

ಹಿರಿಯ ನಟಿ ಲೀಲಾವತಿ ಚಿತ್ರರಂಗದಲ್ಲಿ ವೈಟ್ ಅಂಡ್ ಬ್ಲಾಕ್ ಕಾಲದಿಂದ ಆಗಿನ ಕಲರ್ ಫುಲ್ ದುನಿಯಾದವರೆಗೆ ಬಹು ಬೇಡಿಕೆಯಿದ್ದವರು. ಆಗ ಡಾ.ರಾಜ್ ಸೇರಿದಂತೆ ಅನೇಕ ಹಿರಿಯ ಕಲಾವಿದರೊಂದಿಗೆ ತೆರೆ ಹಂಚಿಕೊಂಡಿದ್ದ ಲೀಲಾವತಿ ಚಂದನವನದಲ್ಲಿ ಮಿಂಚಿದ್ದರು. ಇವರ ಮಗ ವಿನೋದ್ ರಾಜ್ ಸಹ ಡ್ಯಾನ್ಸ್ ರಾಜ ಡ್ಯಾನ್ಸ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ನೃತ್ಯದಲ್ಲಿ ಜನಮಣ್ಣನೆ ಗಳಿಸಿದ್ದರು. ಕಾಲ ಕ್ರಮೇಣ ಚಿತ್ರರಂಗದಿಂದ ದೂರ ಸರಿದ ತಾಯಿ ಮಗ ಕೃಷಿ ಕಾಯಕ ಮಾಡುತ್ತಿದ್ದು, ಸ್ವತಃ ತಾವೇ ಆರ್ಥಿಕ ಸಂಕಷ್ಟದಲ್ಲಿದ್ದರು ಚಿತ್ರರಂಗದ ಬಡ ಜ್ಯೂನಿಯರ್ ಕಲಾವಿದರ ನೆರವಿಗೆ ನಿಲ್ಲುವ ಸಲುವಾಗಿ ಬೆಂಗಳೂರಿನ ಸುಮನಹಳ್ಳಿ ಬಳಿ ಕಿರಿಯ ಕಲಾವಿದರ 200 ಕುಟುಂಬಗಳಿಗೆ ಫುಡ್ ಕಿಟ್ ಹಂಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕೊರೊನಾ ಕಳೆದ ವರ್ಷ ಮಾರ್ಚ್‌ನಲ್ಲಿ ದೇಶಕ್ಕೆ ಕಾಲಿಟ್ಟಿತ್ತು, ಕೊರೊನಾ ನಮ್ಮ ದೇಶಕ್ಕೆ ಬಂದಿದ್ದೆ ತಡ ಎಲ್ಲಾ ಉದ್ಯಮಗಳು ನೆಲಕಚ್ಚಿ ಹೋಗಿದ್ದು, ಒಂದಷ್ಟು ಸಣ್ಣ ಉದ್ಯಮಗಳಂತು ಬಾಗಿಲು ಮುಚ್ಚಿವೆ. ಚಿತ್ರರಂಗ ಸಹ ಇದರಿಂದ ಹೊರತೇನಲ್ಲ, ಚಿತ್ರರಂಗದಲ್ಲಿ ಶೂಟಿಂಗ್ ಬಂದ್ ಆಯ್ತು ಹಿರಿಯ ಕಲಾವಿದರಿಂದ ಹಿಡಿದು ಕಿರಿಯ ಕಲಾವಿದರು ಶೂಟಿಂಗ್ ಇಲ್ಲದೆ, ಆದಾಯ ಇಲ್ಲದೆ ಆರ್ಥಿಕ ಸಂಕಷ್ಟ ಎದುರಿಸುವಂತಾಗಿತ್ತು. ಇನ್ನೇನು ಎಲ್ಲಾ ಸರಿ ಹೋಗಿದೆ ಚಿತ್ರೋದ್ಯಮ ಮತ್ತೆ ಚೇತರಿಸಿಕೊಳ್ಳುತಿದೆ ಎನ್ನುವಷ್ಟರಲ್ಲಿ ಮತ್ತೆ ಎದುರಾದ ಎರಡನೇ ಅಲೆ ಸೋಂಕಿನಿಂದ ಮತ್ತೆ ಚಿತ್ರರಂಗ ಸ್ಥಬ್ದವಾಗಿದೆ. ಹೀಗಿರುವಾಗ ಚಿತ್ರರಂಗವನ್ನೆ ನಂಬಿಕೊಂಡು ಬದುಕು ನಡೆಸುತ್ತಿರುವ ಹಲವು ಜ್ಯೂನಿಯರ್ ಆರ್ಟಿಸ್ಟ್‌ಗಳ ಬದುಕು ಬೀದಿಗೆ ಬರುವಂತಾಗಿದ್ದು, ಇಂತಹ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ನಟ ವಿನೋದ್ ರಾಜ್ ಹಾಗೂ ತಾಯಿ ಹಿರಿಯ ನಟಿ ಲೀಲಾವತಿ ಮುಂದೆ ಬಂದಿದ್ದಾರೆ.

ಇದೇ ವೇಳೆ ಮಾತನಾಡಿದ ವಿನೋದ್ ರಾಜ್ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ ಈ ವೇಳೆ ಕೊರೊನಾ ಮಹಾಮಾರಿ ಮತ್ತೊಂದು ಹೊಡೆತ ಕೊಟ್ಟಿದೆ, ಇಂತಹ ಸಂದರ್ಭದಲ್ಲಿ ಬರೀ ಸರ್ಕಾರವನ್ನ ನೆಚ್ಚಿಕೊಂಡರೆ ಆಗುವುದಿಲ್ಲ. ನಮ್ಮಂತ ನಿಮ್ಮಂತ ದಾನಿಗಳು ಕಷ್ಟದಲ್ಲಿರುವವರ ಸಹಾಯಕ್ಕೆ ದಾವಿಸಬೇಕಿದೆ ಎಂದು ಕೈಮುಗಿದು ಮನವಿ ಮಾಡಿದರು.

ಒಟ್ಟಾರೆ 200 ಕಲಾವಿರ ಕುಟುಂಬಗಳಿಗೆ ಹಿರಿಯ ಜೀವಗಳು ನೆರವಾಗಿದ್ದು, ಮತ್ತಷ್ಟು ನಟ-ನಟಿಯರು ಇಂತಹ ಸಂಕಷ್ಟದಲ್ಲಿರುವ ಸಹ ಕಲಾವಿದರ ನೆರವಿಗೆ ನಿಲ್ಲಬೇಕಿದೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ