Home / ಜಿಲ್ಲೆ / ಬೆಳಗಾವಿ / ಗೋಕಾಕ / ವಿಕಲಚೇತನರಿಗೆ ಅವಕಾಶ ನೀಡಬೇಕೇ ವಿನಹ ಅನುಂಕಪ ತೋರಿಸ ಬೇಕಿಲ್ಲ : ರೇವತಿ ಮಠದ ಅಭಿಮತ

ವಿಕಲಚೇತನರಿಗೆ ಅವಕಾಶ ನೀಡಬೇಕೇ ವಿನಹ ಅನುಂಕಪ ತೋರಿಸ ಬೇಕಿಲ್ಲ : ರೇವತಿ ಮಠದ ಅಭಿಮತ

Spread the love

ಗೋಕಾಕ ಡಿ 4 : ವಿಕಲಚೇತನರಿಗೆ ಅವಕಾಶ ನೀಡಬೇಕೇ ವಿನಹ ಅನುಂಕಪ ತೋರಿಸ ಬೇಕಿಲ್ಲ ಅವರಿಗೆ ನಿರಂತರ ಪ್ರೋತ್ಸಾಹ ಮತ್ತು ಬೆಂಬಲ ಅತಿ ಅಗತ್ಯ ಎಂದು ಶಿಕ್ಷಣ ಇಲಾಖೆಯ ಯೋಜನಾ ಸಮನ್ವಯ ಅಧಿಕಾರಿ ಶ್ರೀಮತಿ ರೇವತಿ ಮಠದ ಹೇಳಿದರು.

ನಗರದ ಅಡಿಬಟ್ಟಿ ಬಡಾವಣೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗೋಕಾಕ, ಕನ್ನಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಲಯನ್ಸ್ ಕಬ್ಲ್ ಇವುಗಳ ಸಂಯುಕ್ತಾಶ್ರಯದಲ್ಲಿ
ಹಮ್ಮಿಕೊಂಡ ವಿಶ್ವ ಅಂಗವಿಕಲರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಕಲಚೇತನರಿಗೆ ಅನುಕಂಪದ ಅವಶ್ಯಕತೆ ಇಲ್ಲ, ಆದರೆ ಅವಕಾಶಗಳ ನೀಡಬೇಕು.ವಿಕಲಚೇತನರು ಒಂದಿಲ್ಲೊಂದು ವಿಚಾರದಲ್ಲಿ ಅದಮ್ಯ ಕೌಶಲ್ಯನ್ನು ಹೊಂದಿರುತ್ತಾರೆ, ಅವರಿಗೆ ಎಲ್ಲರಂತೆ ಎಲ್ಲಾ ವಿಭಾಗಗಳಲ್ಲಿ ಅವಕಾಶ ಮಾಡಿ ಕೊಟ್ಟಾಗ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡುತ್ತಾರೆ, ಆರೋಗ್ಯ ಇಲಾಖೆಯಿಂದ ದೃಷ್ಟಿ ದೋಷ ಉಳ್ಳವರಿಗೆ ಕನ್ನಡಕ, ಶ್ರವಣ ದೋಷವನ್ನು ಉಳ್ಳವರಿಗೆ ಕಾಕ್ಲಿಯರ್ ಇಂಪ್ಲಾಂಟ್ ನಂತಹ ಸೂಕ್ತ ಸಾಧನ ಸಲಕರಣಗಳನ್ನು ಒದಗಿಸುವುದು, ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕಾಹಾರ ಒದಗಿಸುವುದು,ಸಂಘ ಸಂಸ್ಥೆಗಳ ಸಹಕಾರದಿಂದ ಕೃತಕ ಅಂಗಾಂಗ ಜೋಡಣೆ ಯನ್ನು ಒದಗಿಸುವ ಕಾರ್ಯದಲ್ಲಿ ಮುಂದಾದರೆ ವಿಕಲಚೇತನರಿಂದ ವಿಶೇಷ ಕೊಡುಗೆಯನ್ನು ಆಶಿಸಬಹುದು ಎಂದ ಅವರು ಗೋಕಾಕ ವಲಯದಲ್ಲಿ 410 ವಿಕಲಚೇತನ ಮಕ್ಕಳು ವಿವಿಧ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ವಿಕಲಚೇತನ ಮಕ್ಕಳಿಗೆ ಸೂಕ್ತ ಸೌಲಭ್ಯ ಕಲ್ಪಿಸಿದರೆ ಅವರು ಶಾಲೆ ಕಲಿತು ಪ್ರತಿಭಾವಂತರಾಗುತ್ತಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಲಯನ್ಸ್ ಕಬ್ಲ್ ವತಿಯಿಂದ ವಿಕಲಚೇತನ ಮಕ್ಕಳಿಗೆ ಸ್ಕೂಲ್ ಬ್ಯಾಗಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣಾಧಿಕಾರಿ ಎಲ್.ಕೆ ತೋರಣಗಟ್ಟಿ, ಲಯನ್ಸ್ ಕಬ್ಲ್ ಅಧ್ಯಕ್ಷ ಡಾ.ಅಶೋಕ ಪಾಟೀಲ, ಶಂಕರ ದೊಡಮನಿ, ಮಹೇಂದ್ರ ಪೋರವಾಲ, ಸುರೇಶ್ ಶಿಂದಿಹಟ್ಟಿ, ಶಿಕ್ಷಣ ಇಲಾಖೆಯ ಎ.ವಿ.ದಳವಾಯಿ, ಆರ್.ಬಿ.ಡವಳೇಶ್ವರ, ಎ.ಎಸ್ ಜರಾಳೆ, ಸಂಗಮೇಶ್ ಕೊಂತಿ, ಕೆ.ಎಸ್.ದಡ್ಡಿ, ಎ.ಎಸ್.ಕಬ್ಬೂರ, ವ್ಹಿ.ಎನ್.ಖನಗಾವಿ , ಎಮ್.ಎಚ್.ವೆಂಕಾಪೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು


Spread the love

About Laxminews 24x7

Check Also

ಚಿಕ್ಕೋಡಿ: ಎಂದೂ ಬತ್ತದ ರಾಮಲಿಂಗೇಶ್ವರ ಬಾವಿ

Spread the love ಚಿಕ್ಕೋಡಿ: ತಾಲ್ಲೂಕಿನ ಉಮರಾಣಿ ಹೊರವಲಯದಲ್ಲಿರುವ ರಾಮಲಿಂಗ ದೇವಸ್ಥಾನ ಪೌರಾಣಿಕ ಹಾಗೂ ಐತಿಹಾಸಿಕ ಮಹತ್ವ ಹೊಂದಿದೆ. ಇಡೀ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ