Breaking News

ಮಾ.11 ರಂದು ಖೋ-ಖೋ ತಂಡದ ಆಯ್ಕೆ

Spread the love

ಬಾಗಲಕೋಟೆ : ಬಿ. ವಿ. ವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯ ಮತ್ತು ಬಾಗಲಕೋಟೆಯ ವಿಶ್ವವಿದ್ಯಾಲಯ, ಜಮಖಂಡಿಯ ಸಹಯೋಗದಲ್ಲಿ ಪ್ರಸಕ್ತ ಸಾಲಿನ ಏಕವಲಯ ಮಹಿಳೆಯರ ಖೋ – ಖೋ ಪಂದ್ಯಾವಳಿಗಳು ಹಾಗೂ ವಿಶ್ವ ವಿದ್ಯಾಲಯದ ತಂಡದ ಆಯ್ಕೆಯ ಪ್ರಕ್ರಿಯನ್ನು ಇದೆ ಮಾ. 11 ರಂದು ಮಹಾವಿದ್ಯಾಲಯ ಮೈದಾನದಲ್ಲಿ ಬೆ. 10ಕ್ಕೆ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಬಿವಿವಿ ಸಂಘದ ಕಾರ್ಯಧ್ಯಕ್ಷರಾದ ವೀರಣ್ಣ ಸಿ. ಚರಂತಿಮಠ ಮಾಡಲಿದ್ದಾರೆ. ಧಾರಾವಾಡದ ಎಕ್ಸಲೆಂಟ್ ನೀಟ್ ಅಕಾಡೆಮಿ ಅಧಿಕಾರಿ ಹಾಗೂ ಕರ್ನಾಟಕ ರಾಜ್ಯದ ಖೋ ಖೋ ಸಂಸ್ಥೆಯ ಉಪಾಧ್ಯಕ್ಷರಾದ ಡಾ. ಜಗದೀಶ ಚಿತ್ತರಗಿ, ಜಮಖಂಡಿ ವಿವಿಯ ಕ್ರೀಡಾ ಸಂಯೋಜಕರಾದ ಕೆ. ಎಮ್. ಶಿರಹಟ್ಟಿ ಮತ್ತು ವಿವಿಯ ದೈಯಿಕ ಶಿಕ್ಷಣದ ನಿರ್ದೇಶಕರ ಸಂಘದ ಅಧ್ಯಕ್ಷರಾದ ಡಾ. ಶಾರದಾ ನಿಂಬರಗಿ ಮುಖ್ಯ ಅತಿಥಿಯ ಸ್ಥಾನವನ್ನು ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಗುರುಬಸವ ಎಸ್. ಸೂಳಿಭಾವಿ ವಹಿಸಲಿದ್ದಾರೆ. ಸಾಯಂಕಾಲ ನಡೆಯುವ ಬಹುಮಾನ ವಿತರಣಾ ಹಾಗೂ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವಿದ್ಯಾಗಿರಿಯ ಬಸವೇಶ್ವರ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಡಾ. ಸಂಗಮೇಶ ಬಿರಾದರ,ಗುಳೆದಗುಡ್ಡದ ಎಸ್.ಎಮ್.ಬಿ.ಕಲಾ ಆರ್.ಆರ್.ಬಿ.ವಾಣಿಜ್ಯ ಹಾಗೂ ಎಸ್.ಕೆ.ಆರ್‌.ವಿಜ್ಞಾನ ಮಹಾವಿದ್ಯಾಲಯದ ಡಾ. ಚಿದಾನಂದ ನಂದಾರ್,ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಡಾ. ಸದಾಶಿವ ಎಸ್. ಕೋಟ್ಯಾಳ ಇರಲಿದ್ದು. ಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಸ್. ಆರ್. ಮುಗನೂರಾಮಠ ಅಧ್ಯಕ್ಷೀಯ ಸ್ಥಾನವನ್ನು ವಹಿಸಲಿದ್ದಾರೆ. ಎಂದು ಐಕ್ಯೂಎಸಿ ಸಂಯೋಜಕರಾದ ಎ. ಯು. ರಾಠೋಡ ,ದೈಹಿಕ ಶಿಕ್ಷಣದ ನಿರ್ದೇಶಕರಾದ ಎಮ್. ಎಮ್. ದೇವನಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಪಿಯುಸಿ ಫಲಿತಾಂಶ: ರಾಜ್ಯ ಮಟ್ಟದಲ್ಲಿ ಬಿವಿವಿ ಸಂಘಕ್ಕೆ ಮೂರು ರ್ಯಾಂಕ್

Spread the loveಬಾಗಲಕೋಟೆ: ಪಿಯುಸಿ ಫಲಿತಾಂಶದಲ್ಲಿ ರಾಜ್ಯ ಮಟ್ಟದಲ್ಲಿ ಮೂರು ರ್ಯಾಂಕ್ ಪಡೆಯುವುದರ ಮೂಲಕ ಬಿವಿವಿ ಸಂಘದ ವಿದ್ಯಾರ್ಥಿಗಳು ಉತ್ತಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ