ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಬಡ ಬಗ್ಗರಿಗೆ, ಅವಶ್ಯಕತೆ ಇರುವವರಿಗೆ ಸಹಾಯ ಮಾಡಲು ಮನವಿ”
ಕೊರೋನಾ ವೈರಸ್ ಲಾಕ್ಡೌನ್ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಿಪ್ಪಾಣಿಯ ಅಕ್ಕೋಳ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮದ ಮುಖಂಡರು, ಅಧಿಕಾರಗಳು ಹಾಗೂ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ಸಭೆ ನಡೆಸಿ, ಕೋವಿಡ್ 19 ಹರಡದಂತೆ ತಡೆಗಟ್ಟಲು ತೆಗೆದುಕೊಳ್ಳಲಾದ ಕ್ರಮಗಳ ಕುರಿತು ಮಾಹಿತಿ ಪಡೆದುಕೊಳ್ಳಲಾಯಿತು ಹಾಗೂ ಕೊರೋನಾ ಮುನ್ನೆಚ್ಚರಿಕೆ ಕುರಿತಾದ ಮಾಹಿತಿ ಜನರಿಗೆ ತಲುಪಿಸುವಂತೆ ಸೂಚಿಸಿ, ಮಾನ್ಯ ಪ್ರಧಾನಮಂತ್ರಿಗಳು ಕರೆ ನೀಡಿರುವಂತೆ ಕೊರೋನಾ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವೆಲ್ಲರೂ ಬಡ ಬಗ್ಗರಿಗೆ, ಅವಶ್ಯಕತೆ ಇರುವವರಿಗೆ ಸಹಾಯ ಮಾಡಲು ಮನವಿ ಮಾಡಿ, ಯಾರು ಕೂಡ ಹಸಿವಿನಂದ ಬಳದಂತೆ ನೋಡಿಕೊಳ್ಳಲು ಕರೆ ನೀಡಿದರು.