ಅನಗತ್ಯವಾಗಿ ಗುಂಪು ಗುಂಪಾಗಿ ಕುಳಿತ್ತಿದ್ದವರಿಗೆ ಲಾಠಿ ರುಚಿ: ಐದು ಬೈಕ್ ಸಿಜ್ ಮಾಡಿದ ಪೋಲಿಸರು”
ಚಡಚಣ: ಕೋವಿಡ್-19 ಮಹಾಮಾರಿಯ ಮರಣಮೃದಂಗದ ರುದ್ರ ನರ್ತನದ ಹಿನ್ನೆಲೆಯಲ್ಲಿ ಭಾರತದಲ್ಲಿ ಜನರ ಆರೋಗ್ಯದ ಹಿತದೃಷ್ಟಿಯಿಂದ ಸಧ್ಯ ದೇಶಾದ್ಯಂತ ಪ್ರಧಾನಿ ಮೋದಿ’ರವರು ಲಾಕ್ ಡೌನ್ ಹಾಗೂ ಸಿಲ್ ಡೌನ್ ಆದೇಶ ಜಾರಿಯಲ್ಲಿದೆ…
ಕೊರೋನಾ ಸೊಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನರು ಯಾರು ಮನೆಗಳಿಂದ ಹೊರಬರದಂತೆ ಅದೇಷ್ಟು ಹೇಳಿದ್ರೂ, ಜನರು ಸುಖಾಸುಮ್ಮನೆ ಗುಂಪು ಗುಂಪಾಗಿ ಓಡಾಟ ಮಾತ್ರ ನಿಲ್ಲಿಸುತ್ತಿಲ್ಲ…
ಚಡಚಣ ತಾಲ್ಲೂಕಿನ ದೇವರ ನಿಂಬರಗಿ ಗ್ರಾಮದ ಶಾಲೆಯೊಂದರ ಆವರಣದಲ್ಲಿ ಗುಂಪು ಗುಂಪಾಗಿ ಕುಳಿತ್ತಿದ್ದ ಗ್ರಾಮಸ್ಥರಿಗೆ ಲಾಠಿ ರುಚಿ ತೋರಿಸಿ, ಐದು ಬೈಕ್ ಸಿಜ್ ಮಾಡಿ ಚಡಚಣ ಪೋಲಿಸ್ರೂ ವಶ ಪಡೆಸಿಕೊಂಡ ಘಟನೆ ನಡೆದಿದೆ…