Breaking News
Home / ಜಿಲ್ಲೆ / ಬೆಳಗಾವಿ / ಅಥಣಿ / ಲಾಕಡೌನ್ನಲ್ಲಿ ಔಷಧಿ ಪೂರೈಸುವ ‘ಸಹಾಯ’ ವಾರಿಯರ್ಸ..

ಲಾಕಡೌನ್ನಲ್ಲಿ ಔಷಧಿ ಪೂರೈಸುವ ‘ಸಹಾಯ’ ವಾರಿಯರ್ಸ..

Spread the love

ಅಥಣಿ : ಮಹಾಮಾರಿ ಕೋರೋನ ವ್ಯಾಪಿಸಿರುವುದರಿಂದ ನಿತ್ಯ ಜನತೆ ಹತ್ತು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಜೊತೆಗೆ ಸರ್ಕಾರಿ ಅಧಿಕಾರಿಗಳು ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ,ಪುರಸಭೆ, ಹೀಗೆ ಸರಕಾರವೇ ಜನತೆಯ ಆರೋಗ್ಯ ರಕ್ಷಣೆಯ ಜೊತೆಗೆ ಸಹಾಯಕ್ಕಾಗಿ ನಿಂತಿದೆ  ಜೊತೆಗೆ ಅನೇಕ ಸಂಘ-ಸಂಸ್ಥೆಗಳು  ಸರಕಾರದ ಜೊತೆ ಕೈಜೋಡಿಸಿ ಜನತೆಯ ಸಂಕಷ್ಟ ನಿವಾರಿಸುವಲ್ಲಿ ಸಹಕಾರಿಯಾಗಿವೆ. ಕೊರೋನಾ ಸಂದರ್ಭದಲ್ಲಿ ಜನತೆಯ ಮೂಲಭೂತ ಅವಶ್ಯಕತೆಗಳ ಪೂರೈಕೆಗೆ ಸರಕಾರ ಹಲವಾರು ಕ್ರಮಗಳ ಮೂಲಕ ಹರಸಾಹಸ ಪಡುತ್ತಿರುವಾಗ ಅಥಣಿಯಲ್ಲೊಂದು ಸಹಾಯ ಫೌಂಡೇಶನ್ ಎಂಬ ಸಂಸ್ಥೆ ಇಂತಹ ಲಾಕಡೌನ್ ವೇಳೆ ವಿನೂತನ‌ವಾಗಿ ಅನಾರೋಗ್ಯ ಪಿಡಿತರಿಗೆ ಮನೆಗೆ ಔಷಧಿ ಪೂರೈಸುವ  ಮೂಲಕ  ಅಥಣಿ ಪಟ್ಟಣದ ಜನತೆಗೆ ಆಪತ್ಬಾಂಧವರಾಗಿದ್ದಾರೆ.


ಕಾರ್ಯ ಹೇಗೆಂದರೆ- ಸ್ಥಳೀಯ ಔಷಧ ಅಂಗಡಿಗಳು ದಿನನಿತ್ಯ ಮಧ್ಯಾಹ್ನ 12 ರಿಂದ 04 ಗಂಟೆವರೆಗೆ ತೆರೆಯುವಂತೆ ಅಧಿಕಾರಿಗಳು ಸಮಯ ನಿಗದಿಗೊಳಿದ್ದಾರೆ.ಆದರೆ ಇನ್ನುಳಿದ ಸಮಯದಲ್ಲಿ  ತುರ್ತಾಗಿ ಔಷಧಿ ಬೇಕಾದಾಗ ಸಹಾಯ ಪೌಂಡೇಶನ್ ನವರಿಗೆ ಒಂದು ಫೋನಕರೆ ಮಾಡಿದರೆ ಸಾಕು ಬೇಕಾದ ಔಷಧವನ್ನು ಮನೆಗೆ ಪೂರೈಸುತ್ತಾರೆ .ಇದಕ್ಕೆ ಯಾವುದೇ ಹಣವನ್ನೂ ಪಡೆಯುವುದಿಲ್ಲ. ಹೀಗೆ  ಜನಸೇವೆ ಮಾಡುತ್ತಿರುವ ಯುವಕರೇ ಇರುವ ಸಹಾಯ ಫೌಂಡೇಶನ್ ವಿಶಿಷ್ಟವಾಗಿ ಕಾರ್ಯ ನಿರ್ವಹಿಸುತ್ತಿದೆ. ಈಗಾಗಲೇ ಅಥಣಿಯ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಪ್ರಕಟಣೆ ನೀಡಿ ತಮ್ಮ ಸಹಾಯವಾಣಿ ಸಂಖ್ಯೆಗಳನ್ನು ಪ್ರಚಾರ ಮಾಡಿದ್ದು ಈಗಾಗಲೇ ಸಾಕಷ್ಟು ಜನತೆ ಸಹಾಯ ಫೌಂಡೇಶನ್ ಸಂಸ್ಥೆಯಿಂದ ಔಷಧಿಯ ಸಹಾಯ ಪಡೆಯುತ್ತಿದ್ದಾರೆ.

ಇದಲ್ಲದೆ ಈ ಹಿಂದೆ ಕೃಷ್ಣಾ ನದಿಗೆ ಭೀಕರವಾದ ಪ್ರವಾಹ ಬಂದ ಸಂದರ್ಭದಲ್ಲಿಯೂ ಕೂಡ ಸುಮಾರು 1.20 ಲಕ್ಷ ರೂ  ಸಾರ್ವಜನಿಕರಿಂದ ದೇಣಿಗೆ ರೂಪದಲ್ಲಿ ಹಣವನ್ನು ಸಂಗ್ರಹಿಸಿ ಅದರಿಂದ ಅವಶ್ಯಕ ವಸ್ತು ಖರಿದಿಸಿ ಸುಮಾರು 07 ದಿನಗಳ ಕಾಲ ನೆರೆ ಪೀಡಿತ ಸ್ಥಳಕ್ಕೆ ಹೋಗಿ ಹಂಚಿದ್ದಾರೆ ಜೊತೆಗೆ ನೆರೆ ಸಂದರ್ಭದಲ್ಲಿ ಪ್ರವಾಹ ಪೀಡಿತರನ್ನು ತಮ್ಮ ಜೀವದ ಹಂಗು ತೊರೆದು ಸಂರಕ್ಷಿಸಿದ ನೆರೆ ಜೀವರಕ್ಷಕರನ್ನು ಸರಕಾರ ಸ್ಮರಿಸದಿದ್ದನ್ನು ಮನಗಂಡು ಜಿಲ್ಲೆಯಲ್ಲಿಯೇ ಮೊದಲಬಾರಿಗೆ ವಿನೂತನ ಎಂಬಂತೆ ‘ನೆರೆ ಜೀವರಕ್ಷಕರಿಗೆ ಸನ್ಮಾನ’ ಎಂಬ ಕಾರ್ಯಕ್ರಮದ ಮೂಲಕ ಅವರನ್ನು ಸನ್ಮಾಸಿದ ಖ್ಯಾತಿಯೂ ಕೂಡ ಸಹಾಯ ಫೌಂಡೇಶನದ್ದಾಗಿದೆ.

ಜೊತೆಗೆ ಸಹಾಯ ಫೌಂಡೇಶನ್ ಸಾರ್ವಜನಿಕವಾಗಿ ಸಮಸ್ಯೆಗಳು ಉಂಟಾದಾಗ ಸರಕಾರದ ಜೊತೆಗೆ ಜನತೆಗೆ ಸಾಧ್ಯವಿದ್ದಷ್ಟು ಸೇವೆ ಮಾಡುವ ಉದ್ದೇಶವನ್ನು ಸಹಾಯ ಫೌಂಡೇಶನ್ ಹೊಂದಿದ್ದು ಪಟ್ಟಣದಲ್ಲಿ ತನ್ನ ಅಳಿಲು ಸೇವೆ ಸಲ್ಲಿಸುತ್ತಿದೆ.

ಕೊರೊನಾ ಸಂದರ್ಭದಲ್ಲಿ ಅಥಣಿ ಪಟ್ಟಣದ ಜನತೆ ನಮ್ಮ ಸಹಾಯವಾಣಿ 9035206059 ಹಾಗೂ 9964761435 ಸಂಖ್ಯೆಗೆ ಕರೆ ಮಾಡಿ ನಮ್ಮ ಸಂಸ್ಥೆಯಿಂದ ಪೂರೈಸುವ ಸೇವೆಯನ್ನು ಪಡೆಯಬಹುದು- ಸಂತೋಷ ಬಡಕಂಬಿ (ಕಾರ್ಯದರ್ಶಿ, ಸಹಾಯ ಫೌಂಡೆಶನ್. ಅಥಣಿ).

ಮನೆಯಲ್ಲಿ ಮಧುಮೇಹ ಪೀಡಿತರಾದ ನಮ್ಮ ತಂದೆ ಅವರಿಗೆ ಅವಶ್ಯಕವಾಗಿ ಬೇಕಾದ ಔಷಧಿಯನ್ನು ರಾತ್ರಿ 11 ಗಂಟೆಗೆ ಫೋನ್ ಮಾಡಿ ಹೇಳಿದಾಗ ಅದನ್ನು ಶೀಘ್ರವಾಗಿ ತಂದು ಮುಟ್ಟಿಸಿ ತಂದೆಯನ್ನು ಕಾಪಾಡಿದ್ದಾರೆ-
ವೀನಾ ಕರಾಡೆ(ಸ್ಥಳೀಯ ನಿವಾಸಿ, ಅಥಣಿ)

ನೆರೆ ಸಂದರ್ಭದಲ್ಲಿ ಸಹಾಯ, ಬಡ ಮಕ್ಕಳಿಗೆ ಉಚಿತ ಬ್ಯಾಂಕಿಂಗ್ ತರಬೇತಿ ಹಲವಾರು ಮಾರ್ಗದರ್ಶನದಂತಹ ವಿನೂತನ ಕಾರ್ಯಕ್ರಮಗಳ‌ ಮೂಲಕ ಅಥಣಿ ಜನತೆಗೆ ಸಹಾಯ ಫೌಂಡೇಶನ್ ಅಚ್ಚುಮೆಚ್ಚಾಗಿದ್ದಾರೆ-
ಬಸವರಾಜ ಬುಟಾಳಿ(ಮಾಜಿ ಜಿ.ಪಂ ಸದಸ್ಯ, ಅಥಣಿ ಗ್ರಾ).

ಪೊಟೊ ಶೀರ್ಷಿಕೆ- ಸಹಾಯ ಫೌಂಡೇಶನ್ ನ ಔಷಧಿಗಾಗಿ WhatsApp ಸಹಾಯವಾಣಿ ಸೇವೆಯ ಕರಪತ್ರ


Spread the love

About Laxminews 24x7

Check Also

ನೇಹಾ ಕೊಲೆ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ

Spread the loveಹುಬ್ಬಳ್ಳಿ : ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ನೇಹಾ ಹಿರೇಮಠ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಫಯಾಝ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ