ಭಾರತದ ಬತ್ತಳಿಕೆಗೆ ಮತ್ತೊಂದು ಅಸ್ತ್ರ, ಕೆ-4 ಪ್ರೇಕ್ಷೆಪಕ ಅಣ್ವಸ್ತ್ರ ಕ್ಷಿಪಣಿ ಪ್ರಯೋಗ ಯಶಸ್ವಿ
ನವದೆಹಲಿ,ಜ.20- ವೈರಿ ಪಡೆಗಳ ಮೇಲೆ ಅತ್ಯಂತ ನಿಖರ ದಾಳಿ ನಡೆಸುವ ಭಾರತದ ನೌಕಾದಳ ಬತ್ತಳಿಕೆಗೆ ಮತ್ತೊಂದು ಅಘಾತ ಸಾಮಥ್ರ್ಯದ ಪ್ರಬಲ ಶಸ್ತ್ರಾಸ್ತ್ರವೊಂದು ಸೇರ್ಪಡೆಯಾಗಿದೆ. ಸಾಗರ ಗರ್ಭದಲ್ಲಿ ಜಲಾಂತರ್ಗಾಮಿಯಿಂದ ಅಣ್ವಸ್ತ್ರ ಸಾಮಥ್ರ್ಯದ ಕೆ-4 ಪ್ರೇಕ್ಷೆಪಕ ಕ್ಷಿಪಣಿ ಪರೀಕ್ಷೆಯನ್ನು ಆಂಧ್ರಪ್ರದೇಶ ಕರಾವಳಿಯಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ.
3,500 ಕಿ.ಲೋ ದೂರದ ವೈರಿ ನೆಲೆಯನ್ನು ನಿಖರವಾಗಿ ತಲುಪ ಬಲ್ಲ ಈ ಖಂಡಾಂತರ ಕ್ಷಿಪಣಿ ನೌಕಾಪಡೆಯ ಐಎನ್‍ಎಸ್ ಹರಿಯಂತ್ ಯುದ್ಧ ಹಡಗು ಮತ್ತು ಸಬ್‍ಮೆರೇನ್‍ನಲ್ಲಿ ಅಳವಡಿಸಬಹುದಾಗಿದೆ. ಆಂಧ್ರದ ಕರಾವಳಿ ಪ್ರದೇಶದಲ್ಲಿ ಸಮುದ್ರದಾಳದಿಂದ ಕೆ-4 ಬ್ಯಾಲಿಸ್ಟಿಕ್ ಮಿಸೈಲ್‍ನ್ನು ಯಶಸ್ವಿಯಾಗಿ ಉಡಾಯಿಸಲಾಯಿತು ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಕ್ಷಣಾ ಸಚಿವಾಲಯದ ಸಂಶೋಧನೆ ಮತ್ತು ಅಭಿವೃದ್ದಿ ಸಂಘಟನೆ(ಡಿಆರ್‍ಡಿಒ) ದೇಶವಾಗಿ ನಿಮ್ಸಿರುವ ಈ ಕ್ಷಿಪಣಿಯನ್ನು ಮತ್ತಷ್ಟು ಪ್ರಯೋಗಕ್ಕೆ ಒಳಪಡಿಸಿದ ನಂತರ ಅಧಿಕೃತವಾಗಿ ನೌಕಾಪಡೆಯ ಹರಿಯಂತ್ ಯುದ್ದ ಹಡಗು ಮತ್ತು ಕ್ಷಿಪಣಿಗೆ ಅಳವಡಿಸಲಾಗುತ್ತದೆ. ಈಗಾಗಲೇ ನೌಕಾಪಡೆಯಲ್ಲಿ ಬಿಒ-5 ಕ್ಷಿಪಣಿಯನ್ನು ರಕ್ಷಣೆಗೆ ಇರಿಸಲಾಗಿದ್ದು, ಇದು 700 ಕಿ.ಮೀ ಶ್ರೇಣಿಯ ಸಾಮಥ್ರ್ಯ ಹೊಂದಿದೆ
.