Breaking News
Home / ಜಿಲ್ಲೆ / ಫ್ರೀ ಕಾಶ್ಮೀರ ಎಂಬ ಭಿತ್ತಿಪತ್ರ ಪ್ರದರ್ಶಿಸಿದ ಆರೋಪ ಹೊತ್ತಿರುವ ಯುವತಿ ಪರ ವಕಾಲತ್ತು ವಹಿಸಲು ಹಲವಾರು ವಕೀಲರು ಮುಂದೆ ಬಂದಿದ್ದಾರೆ.

ಫ್ರೀ ಕಾಶ್ಮೀರ ಎಂಬ ಭಿತ್ತಿಪತ್ರ ಪ್ರದರ್ಶಿಸಿದ ಆರೋಪ ಹೊತ್ತಿರುವ ಯುವತಿ ಪರ ವಕಾಲತ್ತು ವಹಿಸಲು ಹಲವಾರು ವಕೀಲರು ಮುಂದೆ ಬಂದಿದ್ದಾರೆ.

Spread the love

ಮೈಸೂರು,ಜ.20- ಫ್ರೀ ಕಾಶ್ಮೀರ ಎಂಬ ಭಿತ್ತಿಪತ್ರ ಪ್ರದರ್ಶಿಸಿದ ಆರೋಪ ಹೊತ್ತಿರುವ ಯುವತಿ ಪರ ವಕಾಲತ್ತು ವಹಿಸಲು ಹಲವಾರು ವಕೀಲರು ಮುಂದೆ ಬಂದಿದ್ದಾರೆ. ನಳಿನಿ ಪರ ವಕಾಲತ್ತು ವಹಿಸಲು ಬೆಂಗಳೂರು, ಮಂಡ್ಯ, ಚಾಮರಾಜನಗರ, ಶಿವಮೊಗ್ಗ, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಿಂದ ವಕೀಲರು ಆಗಮಿಸಿ 250ಕ್ಕೂ ಹೆಚ್ಚು ಸಹಿ ಇರುವ ವಕಾಲತ್ತು ಪತ್ರವನ್ನು ಇಂದು ಮೈಸೂರಿನ 2ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಿಗೆ ಸಲ್ಲಿಸಿದ್ದಾರೆ.

ನಳಿನಿ ಪರ ವಕಾಲತ್ತು ವಹಿಸದಂತೆ ಮೈಸೂರಿನ ವಕೀಲರ ಸಂಘ ಈ ಪ್ರಕರಣದಿಂದ ಹಿಂದೆ ಸರಿದಿತ್ತು. ಇದೀಗ ಇಂದಿನ ಬೆಳವಣಿಗೆ ಕುರಿತಂತೆ ಚರ್ಚೆ ನಡೆಸಲು ಮೈಸೂರು ವಕೀಲರ ಸಂಘ ಸಭೆ ನಡೆಸಲು ಮುಂದಾಗಿದೆ.


Spread the love

About Laxminews 24x7

Check Also

ಸುವರ್ಣಸೌಧದಲ್ಲಿ‌ ಸ್ಪೀಕರ್, ಸಭಾಪತಿಗಳು ಹಸಿರೀಕರಣಕ್ಕೆ ಪಣ ತೊಟ್ಟಿದ್ದಾರೆ

Spread the loveಬೆಳಗಾವಿ: ಸುವರ್ಣಸೌಧದಲ್ಲಿ ಪರಿಸರ ಕಾಳಜಿ ಮೆರೆಯುವ ನಿಟ್ಟಿನಲ್ಲಿ ಸ್ಪೀಕರ್ ಯು ಟಿ ಖಾದರ್ ಚಳಿಗಾಲದ‌ ಅಧಿವೇಶನದಲ್ಲಿ ವಿನೂತನ ಪ್ರಯೋಗವೊಂದನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ