Breaking News
Home / ಜಿಲ್ಲೆ / ಬೆಳಗಾವಿ / ಚಿಕ್ಕೋಡಿ / ಚಿಕ್ಕೋಡಿ ನಗರದಲ್ಲಿ ನಡೆದ ಆರ್ ಎಸ್ ಎಸ್ ಸ್ವಯಂಸೇವಕರ ಪಥ ಸಂಚಲನ

ಚಿಕ್ಕೋಡಿ ನಗರದಲ್ಲಿ ನಡೆದ ಆರ್ ಎಸ್ ಎಸ್ ಸ್ವಯಂಸೇವಕರ ಪಥ ಸಂಚಲನ

Spread the love

ಚಿಕ್ಕೋಡಿ ನಗರದಲ್ಲಿ ನಡೆದ ಆರ್ ಎಸ್ ಎಸ್ ಸ್ವಯಂಸೇವಕರ ಪಥ ಸಂಚಲದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿರಿಯ ನಾಗರಿಕರ ಸಬಲೀಕರಣ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ಖಾತೆ ಸಚಿವರಾದ ಸೌ.ಶಶಿಕಲಾ ಜೊಲ್ಲೆ,ಜಿ ಇವರೊಂದಿಗೆ ಚಿಕ್ಕೋಡಿ ಲೋಕಸಭೆ ಸಂಸದರಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ,ಜಿ ಹಾಗೂ ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರಾದ ಕು. ಜ್ಯೋತಿಪ್ರಸಾದ ಜೊಲ್ಲೆ ಮತ್ತು ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ ಯವರು ಭಾಗವಹಿಸಿದರು.

ವಿವಿಧ ವಾದ್ಯಗಳೊಂದಿಗೆ, ಶಿಸ್ತುಬದ್ಧವಾಗಿ ಗಣವೇಷಧಾರಿಗಳಾಗಿ ಆಕರ್ಷಕ ಪಥಸಂಚಲನ ನಡೆಸಲಾಯಿತು. ಮಹಿಳೆಯರು ಆರತಿ ತಟ್ಟೆ ಹಿಡಿದು, ಬೀದಿಯುದ್ದಕ್ಕೂ ವರ್ಣ ರಂಜಿತ ರಂಗವಲ್ಲಿ ಬಿಡಿಸಿದ್ದರು, ಪುಟಾಣಿ ಮಕ್ಕಳು ವೀರರ ಛದ್ಮವೇಶ ಧರಿಸಿ ದೇಶ ಭಕ್ತಿ ಮೆರೆದರು.

ನಗರದ ಆರ್.ಡಿ ಮೈದಾನದಿಂದ ಆರಂಭಗೊಂಡ ಪಥಸಂಚಲನ ಮಾಹಾವೀರ ವೃತ್ತ, ಕೇಂದ್ರ ಬಸ್ ನಿಲ್ದಾಣ, ಕಿತ್ತೂರ್ ರಾಣಿ ಚೆನ್ನಮ್ಮಾ ರಸ್ತೆ, ಪುರಸಭೆ ಕಾರ್ಯಾಲಯ, ಹಳೆಯ ಕೋರ್ಟ್ ಗಲ್ಲಿ, ಶ್ರೀ ದತ್ತ ದೇವಸ್ಥಾನ, ಓತಾರಿ ಗಲ್ಲಿ, ಜೈನ ಪೇಠ, ಡಂಬಳ ಕೂಟ, ರವಿವಾರ ಪೇಠ, ಶ್ರೀ ಕೃಷ್ಣ ಚೌಕ, ಗುರುವಾರ ಪೇಠದಿಂದ ಸಾಗಿ ಕೆ.ಸಿ ರಸ್ತೆ ಮುಖಾಂತರ ಆರ್ ಡಿ ಮೈದಾನ ತಲುಪಿದರು

ಈ ಸಂಚಲನದಲ್ಲಿ ರಾಜ್ಯಸಭಾ ಸದಸ್ಯರಾದ ಶ್ರೀ ಪ್ರಭಾಕರ್ ಕೋರೆ ಜಿ,ವಿಧಾನ ಪರಿಷತ್ ಸದಸ್ಯ ಹಾಗೂ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಜಿ, ಶಾಸಕರಾದ ಶ್ರೀ ದುರ್ಯೋಧನ ಐಹೊಳೆ ಜಿ, ಶ್ರೀ ಜಗದೀಶ ಕವಟಗಿಮಠ ಜಿ,ಶ್ರೀ ಸಂಜಯ ಅಡಕೆ ಜಿ, ಶ್ರೀ ಶ್ರೀಕಾಂತ ಕುಲಕರ್ಣಿ ಜಿ, ಶ್ರೀ ಅಮೃತ ಕುಲಕಣಿ೯ ಜಿ, ಶ್ರೀ ರಾಜೀವ ಭಟ್ ಜಿ, ಶ್ರೀ ಪ್ರಕಾಶ ಅನವೇಕರ್ ಜಿ, ಶ್ರೀ ಸಂಜು ಅರಗೆ ಜಿ, ಶ್ರೀ ಸತೀಶ ಅಪ್ಪಾಜೀಗೋಳ ಜಿ, ಮಹೇಶ ಭಾತೆ ಜಿ,ಹಾಗೂ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿ

Spread the love ಬೆಂಗಳೂರು: ನಿರೀಕ್ಷೆಯಂತೆ ಬಿಜೆಪಿ ಮಾಜಿ ಸಂಸದ ಕರಡಿ ಸಂಗಣ್ಣ ಸೇರಿದಂತೆ ನಿವೃತ್ತ ಐಎಎಸ್ ಅಧಿಕಾರಿ ಎ.ಎಸ್. ಪುಟ್ಟಸ್ವಾಮಿ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ