ಹಾಸನ; ಕರೋನಾ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್ ಆಗಿದೆ,ಜಿಲ್ಲಾಡಳಿತ ಕರೋನಾ ಭೀತಿ ತಪ್ಪಿಸಲು ಬಾರೀ ಹರಸಾಹಸ ಪಡುತ್ತಿದೆ ಆದರೆ….!! ಅರಸೀಕೆರೆ ನಗರಸಭೆ ಸಿಬ್ಬಂದಿಗಳು ಕರ್ತವ್ಯದ ಸಮಯದಲ್ಲಿ ಟಿಕ್ ಟಾಕ್ ನಲ್ಲಿ ತೊಡಗಿದ್ದು ಸರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದರೆ.
ಹೌದು ..ಜಗತ್ತು ಕೊರೋನ ಮಹಾಮಾರಿಗೆ ತತ್ತರಿಸಿದೆ ಅಲ್ಲದೆ ಜನ ಮನೆಯಿಂದ ಹೊರಬರಬಾರದು ಎಂದು ಲಾಕ್ ಡೌನ್ ಮಾಡಲಾಗಿದೆ ಸಾಮಾಜಿಕ ಅಂತರ ಪಾಲಿಸಿ ಎಂದು ಸ್ವತಃ ನಗರಸಭೆ ಪುರಸಭೆ ಆಟೋಗಳ ಮೂಲಕ ಪ್ರಚಾರದ ಮೂಲಕ ಸಾವಿರಾರು ರೂ ವ್ಯಯಿಸುತ್ತಿದೆ….!!! ಆದರೆ ಜಿಲ್ಲೆಯ ಅರಸೀಕೆರೆಯ ನಗರಸಭೆ ಸಿಬ್ಬಂದಿಗಳೆಲ್ಲರೂ ಟಿಕ್ ಟಾಕ್ ಮಾಡುತ್ತ ಜನರಿಗೆ ತಪ್ಪು ಸಂದೇಶ ರವಾನಿಸಿ ತಮ್ಮ ಕರ್ತವ್ಯ ನಿಷ್ಠೆ ಪ್ರದರ್ಶನ ಮಾಡಿದ್ದು ಸಾರ್ವಜನಿಕರ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ.
ಆಶ್ರಯ ಮನೆ ಯೋಜನಾಧಿಕಾರಿ ಹರೀಶ್, ಬಿಲ್ ಕಲೆಲ್ಟರ್ ಸುನೀಲ್, ಎಫ್ ಡಿಎ ಸಂಜು, ಕಂಪ್ಯೂಟರ್ ಆಪರೇಟರ್ಸ್ ಸುಮಾ ಮತ್ತು ಅನಿತಾ ಟಿಕ್ ಟಾಕ್ ನಲ್ಲಿ ತೊಡಗಿರುವ ವಿಡೊಯೋ ಇದೀಗಾ ಸಾಮಾಜಿಕ ಜಾಲತಾಣ ದಲ್ಲಿ ಹರಿದಾಡುತ್ತಿದ್ದು ಬಹಳ ಫೇಮಸ್ ಆಗಿದ್ದಾರೆ..
ಸಾರ್ವಜನಿಕ ಬದುಕಿನಲ್ಲಿ ಸರ್ಕಾರಿ ಅಧಿಕಾರಿಗಳ ಕರ್ತವ್ಯ ಪಾಲನೆ ಬಹುಮುಖ್ಯ ಆದರೆ ಕರ್ತವ್ಯದ ಸಮಯದಲ್ಲಿ ಎಲ್ಲರೂ ಟಿಕ್ ಟಾಕ್ ಮಾಡುತ್ತಾ ಕಾಲ ಕಳೆಯುತ್ತಿರುವುದು ; ಹಾಗೂ ಇಡೀ ನಗರಸಭೆ ಸಿಬ್ಬಂದಿಗಳೆಲ್ಲರೂ ಟಿಕ್ ಟಾಕ್ ಮಾಡುತ್ತಾ ಕಾಲ ಕಳೆಯುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಸರ್ವಜನಿಕರದ್ದು.
ದುರಂತ ಎಂದರೆ ಮಾಸ್ಕ್ ಬಳಸಲು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸರ್ಕಾರ ಪ್ರತಿದಿನ ಕೋಟ್ಯಾಂತರ ರೂ ವ್ಯಯಿಸುತ್ತಿದ್ದೆ ಆದರೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸರ್ಕಾರಿ ನೌಕರರು ತಮ್ಮ ಜವಾಬ್ದಾರಿ ಮರೆತು ಈ ರೀತಿಯ ವರ್ತನೆ ವ್ಯಾಪಾಕ ಖಂಡನೆಗೆ ಗುರಿಯಾಗಿದೆ