Breaking News
Home / Uncategorized / ಹಾಸನದಲ್ಲಿ 14 ದಿನಗಳ ಚಿಕಿತ್ಸೆ ಬಳಿಕವೂ ಗುಣಮುಖರಾಗ್ತಿಲ್ವಂತೆ ಸೋಂಕಿತರು!

ಹಾಸನದಲ್ಲಿ 14 ದಿನಗಳ ಚಿಕಿತ್ಸೆ ಬಳಿಕವೂ ಗುಣಮುಖರಾಗ್ತಿಲ್ವಂತೆ ಸೋಂಕಿತರು!

Spread the love

ಹಾಸನ: ಜಿಲ್ಲೆಗೆ ಕಾಲಿಟ್ಟ ಕೊರೊನಾ ಕೆಲವೇ ದಿನಗಳಲ್ಲಿ ಶತಕ ದಾಟಿದೆ. ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಆರೋಗ್ಯದಲ್ಲೂ ಹೆಚ್ಚಿನ ಚೇತರಿಕೆ ಕಾಣಿಸದಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ಇದೆಲ್ಲದರ ಮಧ್ಯೆ ಜನಪ್ರತಿನಿಧಿಗಳು ಕೊರೊನಾ ವಿಷಯದಲ್ಲೂ ರಾಜಕೀಯ ಮಾಡ್ತಿದ್ದಾರೆ ಎಂಬ ಆರೋಪವೊಂದು ಕೇಳಿಬಂದಿದೆ.

ಹಾಸನ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಗುಣಮುಖವಾಗಲು ಹೆಚ್ಚು ಸಮಯ ಹಿಡಿಯುತ್ತಿರುವುದು ಹೊಸ ಆತಂಕಕ್ಕೆ ಕಾರಣವಾಗುತ್ತಿದೆ. ಸಾಮಾನ್ಯವಾಗಿ ಸೋಂಕಿತರಿಗೆ ಚಿಕಿತ್ಸೆ ನೀಡಿದ 14 ದಿನಗಳೊಳಗೆ ಚಿಕಿತ್ಸೆಗೆ ಸ್ಪಂದಿಸಿ ಗುಣಮುಖವಾಗುವ ಹಂತ ತಲುಪುತ್ತಿದ್ರು. ಆದರೆ ಹಾಸನದಲ್ಲಿ ಈಗಾಗಲೇ ಕೊರೊನಾಗೆ ಚಿಕಿತ್ಸೆ ಶುರು ಮಾಡಿ 14 ದಿನ ಕಳೆದಿದ್ರೂ ರೋಗಿಗಳಲ್ಲಿ ಚೇತರಿಕೆ ಕಾಣ್ತಿಲ್ಲ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ, ಜಿಲ್ಲಾಧಿಕಾರಿ ಆರ್. ಗಿರೀಶ್ ಆತಂಕ ವ್ಯಕ್ತಪಡಿಸಿದ್ದಾರೆ.

ಹಾಸನದಲ್ಲಿ ಕೊರೊನಾ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗ್ತಿದ್ದು ಸೋಂಕಿತರ ಸಂಖ್ಯೆ 136ನ್ನು ಮುಟ್ಟಿದೆ. ಜಿಲ್ಲೆಯಲ್ಲಿ ಪಿಪಿಇ ಕಿಟ್, ವೆಂಟಿಲೇಟರ್‍ಗಳ ಕೊರತೆ ಇದೆ. ಈ ಸಮಯದಲ್ಲಿ ಸರ್ಕಾರದ ಹಣವನ್ನು ಸೂಕ್ತ ರೀತಿಯನ್ನು ಬಳಸಿಕೊಂಡು ಕೊರೊನಾ ವಿರುದ್ಧ ಹೋರಾಡಬೇಕಿದೆ. ಆದರೆ ಜಿಲ್ಲೆಯಲ್ಲಿ ರಾಜಕೀಯ ತಿಕ್ಕಾಟ ಜೋರಾಗಿದೆ. ಇವರ ರಾಜಕೀಯ ಆಟಾಟೋಪಕ್ಕೆ ಈಗ ಜಿಲ್ಲೆಯ ಜನತೆ ಬೆಲೆ ತೆರಬೇಕಾ ಅನ್ನೋ ಪ್ರಶ್ನೆ ಎದ್ದಿದೆ.

ಹಾಸನದ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿ ಮೂರಕ್ಕೂ ಸೇರಿ ಜಿಲ್ಲೆಗೆ ಸುಮಾರು 112 ಕೋಟಿ ಹಣ ಬಂದಿದೆ. ಈ ಹಣವನ್ನು ಬಳಸಿಕೊಳ್ಳಲು ಮೇ 31ರೊಳಗೆ ಜಿಲ್ಲಾ ಪಂಚಾಯ್ತಿ ಸಭೆ ಕರೆದು ಅನುಮೋದನೆ ನೀಡಬೇಕೆಂಬ ನಿಯಮವಿದೆ. ಆದರೆ ಜಿಲ್ಲಾ ಪಂಚಾಯ್ತಿ ಸಭೆಗೆ ಎಷ್ಟೇ ಕರೆದ್ರೂ ಜೆಡಿಎಸ್ ಸದಸ್ಯರು ಬರ್ತಿಲ್ಲವಂತೆ. ಇದರಿಂದ ಸಭೆಯಲ್ಲಿ ಕೋರಂ ಕೊರತೆಯಾಗಿ 112 ಕೋಟಿ ಹಣಕ್ಕೆ ಸಂಬಂಧಿಸಿದಂತೆ ಯಾವುದೇ ಅನುಮೋದನೆಯಾಗಿಲ್ಲ. ಈ ಹಿನ್ನೆಲೆಯಲ್ಲಿ 112 ಕೋಟಿ ಹಣ ಸರ್ಕಾರಕ್ಕೆ ವಾಪಸ್ ಆಗುವ ಆತಂಕ ಎದುರಾಗಿದೆ.

ಹಾಸನ ಜಿಲ್ಲಾ ಪಂಚಾಯ್ತಿಯಲ್ಲಿ ಜೆಡಿಎಸ್‍ನ 23, ಕಾಂಗ್ರೆಸ್‍ನ 16, ಬಿಜೆಪಿಯ ಒಬ್ಬರು ಸದಸ್ಯರಿದ್ದಾರೆ. ಮೇ 26ರಂದು ಕರೆದಿದ್ದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಗೆ ಜೆಡಿಎಸ್‍ನ 23 ಸದಸ್ಯರು ಸಾಮೂಹಿಕವಾಗಿ ಗೈರಾಗಿದ್ರು. ಇದರಿಂದ ಸಭೆಯಲ್ಲಿ ಕೋರಂ ಕೊರತೆಯಾಗಿ 112 ಕೋಟಿ ಹಣಕ್ಕೆ ಸಂಬಂಧಿಸಿದಂತೆ ಯಾವುದೇ ಅನುಮೋದನೆಯಾಗಿಲ್ಲ. ಇದಕ್ಕೆಲ್ಲಾ ಮಾಜಿ ಸಚಿವ ಎಚ್‍ಡಿ.ರೇವಣ್ಣ ಕಾರಣ ಎಂದು ಎಂಎಲ್‍ಸಿ ಗೋಪಾಲಸ್ವಾಮಿ ಆರೋಪಿಸುತ್ತಿದ್ದಾರೆ.


Spread the love

About Laxminews 24x7

Check Also

ರಾಜ್ಯದ ಈ ಊರಲ್ಲಿ ಒಂದೇ ಕುಟುಂಬದ 85 ಮಂದಿ ಏಕಕಾಲದಲ್ಲಿ ಮತದಾನ ! ಎಲ್ಲಿ ಗೊತ್ತಾ?

Spread the loveರಾಜ್ಯದ ಈ ಊರಲ್ಲಿ ಒಂದೇ ಕುಟುಂಬದ 85 ಮಂದಿ ಏಕಕಾಲದಲ್ಲಿ ಮತದಾನ ! ಎಲ್ಲಿ ಗೊತ್ತಾ? ಚಿಕ್ಕಬಳ್ಳಾಪುರು: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ