Breaking News

ನಿರುದ್ಯೋಗಿಗಳ ಉಗ್ರ ಹೋರಾಟಕ್ಕೆ ಮಣಿದ ಸರ್ಕಾರ – 56 ಸಾವಿರ ನೇಮಕಾತಿಗೆ ಗ್ರೀನ್ ಸಿಗ್ನಲ್

Spread the love

ಬೆಂಗಳೂರು: ಉದ್ಯೋಗಕ್ಕಾಗಿ   ಧಾರವಾಡದಲ್ಲಿ  ಯುವಶಕ್ತಿ ನಡೆಸಿದ ಉಗ್ರ ಹೋರಾಟಕ್ಕೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ಮೊದಲ ಹಂತದಲ್ಲಿ 56,432 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲು ಕ್ಯಾಬಿನೆಟ್ ತೀರ್ಮಾನಿಸಿದೆ. ಅಲ್ಲದೆ, ಸರ್ಕಾರಿ ಹೊಸ ನೇಮಕಾತಿಗಳಲ್ಲಿ ಸದ್ಯಕ್ಕೆ ಒಳಮೀಸಲಾತಿ ಜಾರಿ ಅಸಾಧ್ಯ ಎಂದು ಕ್ಯಾಬಿನೆಟ್ ತೀರ್ಮಾನಿಸಿದೆ.

ಒಳಮೀಸಲಾತಿ ಸಂಬಂಧ ಕೋರ್ಟ್‌ನಲ್ಲಿ ಪ್ರಕರಣ ಇರುವುದರಿಂದ ಸದ್ಯ 50% ಮೀಸಲಾತಿ ಪ್ರಮಾಣದಲ್ಲೇ ಹೊಸ ನೇಮಕಾತಿಗೆ ಆದೇಶ ಹೊರಡಿಸಲು ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ಒಳಮೀಸಲಾತಿ ಜಾರಿ ಕಷ್ಟ ಸಾಧ್ಯವಾಗಿದೆ. ಆದರೆ 50% ಮೀಸಲಾತಿ ಅನ್ವಯ ಹೊಸ ನೇಮಕಾತಿ ನಡೆಯಲಿದ್ದು, ನೆನೆಗುದಿಗೆ ಬಿದ್ದಿದ್ದ ಸರ್ಕಾರಿ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ. ಪರಿಶಿಷ್ಟ ಜಾತಿಗೆ ಹಳೆಯ ಮಿಸಲಾತಿ 15%ರಷ್ಟು, ಪರಿಶಿಷ್ಟ ಪಂಗಡಕ್ಕೆ ಹಳೇ ಮೀಸಲಾತಿ 3%ರಷ್ಟರಲ್ಲೇ ನೇಮಕಾತಿ ನಡೆಯಲಿದೆ.

ಒಳಮೀಸಲಾತಿ ಗೊಂದಲದ ನೆಪ ಬೇಡ, ಹೊಸ ನೇಮಕಾತಿ ಆರಂಭಿಸಿ 2.84 ಲಕ್ಷ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಿ ಅಂತ ಸಚಿವರು, ಶಾಸಕರು ಒತ್ತಡ ಹೇರಿದ್ದರು. ಸಿಎಂ ಕೂಡ ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಹುದ್ದೆ ಖಾಲಿ ಇದೆ? ಯಾವ ಹುದ್ದೆಗಳು ಅಗತ್ಯ? ಯಾವ ಹುದ್ದೆಗಳನ್ನು ತುರ್ತಾಗಿ ತುಂಬಬೇಕು? ಎಂಬ ಬಗ್ಗೆ ಇಲಾಖೆಗಳ ಮುಖ್ಯಸ್ಥರು ಹಾಗೂ ಮುಖ್ಯಕಾರ್ಯದರ್ಶಿಗಳಿಂದ ಸಮಗ್ರ ಮಾಹಿತಿ ಪಡೆದು ಕ್ಯಾಬಿನೆಟ್‌ಗೆ ಹೋಗಿದ್ದರು.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ