Breaking News

ಗೋಕಾಕ: ನಾಪತ್ತೆಯಾಗಿದ್ದ ಆಭರಣ ಕಳ್ಳನ ಬಳಿ ಪತ್ತೆ

Spread the love

ಬೆಳಗಾವಿ: ಅಡ ಇಟ್ಟ ಚಿನ್ನವನ್ನು ಬಿಡಿಸಿಕೊಂಡು ಹೋಗುವಾಗ ಬೈಕ್ ಮುಂದಿನ ಕವರ್‌ನಲ್ಲಿಟ್ಟಿದ್ದ ಚಿನ್ನ ಮಿಸ್ ಆಗಿದ್ದ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಓರ್ವ ಕಳ್ಳನನ್ನು ಬಂಧಿಸಿ ಒಟ್ಟು 1.20 ಸಾವಿರ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ರಾಯಬಾಗ ತಾಲೂಕಿನ ಮಂಟೂರ ಗ್ರಾಮದ ರೇವಪ್ಪ ಹಳ್ಳುರ, ಜ.24ರಂದು ಗೋಕಾಕನ ಭಗವಾನ ಶೆಡಜಿ ಅಂಗಡಿಯಲ್ಲಿ ಅಡ ಇಟ್ಟಿದ್ದ 70 ಸಾವಿರ ರೂ. ಮೌಲ್ಯದ 14.5 ಗ್ರಾಂ. ನಕ್ಲೆಸ್ ಹಾಗೂ 50 ಸಾವಿರ ರೂ. ಮೌಲ್ಯದ 8.7ಗ್ರಾಂ ಸರವನ್ನು ಬಿಡಿಸಿಕೊಂಡು ಬೈಕ್ ಟ್ಯಾಂಕ್ ಕವರದಲ್ಲಿ ಚೀಲವನ್ನಿಟ್ಟುಕೊಂಡು ಹೋಗಿದ್ದರು. ಇದು ಆಕಸ್ಮಾತಾಗಿ ಬಿದ್ದು ಹೋಗಿರುವ ಬಗ್ಗೆ ಗೋಕಾಕ ಶಹರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಪ್ರಕರಣದ ತನಿಖೆ ಕೈಗೊಂಡಾಗ ಚಿನ್ನಾಭರಣಗಳು ಮೂಡಲಗಿ ತಾಲೂಕಿನ ಮನ್ನಾಪುರದ ವೆಂಕಟರಾವ ಮೂರುರೆಪ್ಪ ದೇಸಾಯಿ ಬಳಿ ಸಿಕ್ಕಿದ್ದು, ವಿಚಾರಣೆಯ್ಲಲಿ ಆತನ ಕಳ್ಳತನ ಮಾಡಿಕೊಂಡಿದ್ದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Spread the love

About Laxminews 24x7

Check Also

ಸಾವಳಗಿಯಲ್ಲಿ ಶ್ರೀ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವ ಅದ್ದೂರಿ – ಅಡ್ಡ ಪಲ್ಲಕ್ಕಿ ಉತ್ಸವಕ್ಕೆ ಭಕ್ತರ ಅಪಾರ ಸ್ಪಂದನೆ

Spread the loveಗೋಕಾಕ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಶ್ರೀ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ಅಡ್ಡ ಪಲ್ಲಕ್ಕಿ ಉತ್ಸವದಲ್ಲಿ ಶೂನ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ