Breaking News
Home / new delhi / ಗದಗ ಜಿಲ್ಲೆಯಲ್ಲಿ ನಕಲಿ ಮದ್ಯ ಮಾರಾಟ ಮಾಡುತ್ತಿದ್ದ ನಾಲ್ವರ ಬಂಧನ

ಗದಗ ಜಿಲ್ಲೆಯಲ್ಲಿ ನಕಲಿ ಮದ್ಯ ಮಾರಾಟ ಮಾಡುತ್ತಿದ್ದ ನಾಲ್ವರ ಬಂಧನ

Spread the love

ಗದಗ : ಮದ್ಯ ಪ್ರಿಯರೇ ಎಚ್ಚರ.. ಎಚ್ಚರ.. ಇನ್ಮುಂದೆ ಮದ್ಯ ಸೇವನೆ ಮಾಡಬೇಕಾದ್ರೆ, ಹತ್ತು ಸಾರಿ ವಿಚಾರ ಮಾಡಿ. ಇಲ್ಲವಾದ್ರೆ, ನೀವು ನಕಲಿ ಮದ್ಯ ಸೇವನೆ ಮಾಡಿ ಯಮರಾಯನ ಪಾದ ಸೇರೋದು ಗ್ಯಾರಂಟಿ. ಗದಗ ಜಿಲ್ಲೆಯಲ್ಲಿ ನಕಲಿ ಮದ್ಯವನ್ನು ರಾಜರೋಷವಾಗಿ ಮಾರಾಟ ಮಾಡಲಾಗುತ್ತಿದೆ. ಸ್ವಲ್ಪವೂ ಅನುಮಾನ ಬಾರದ ಹಾಗೆ ಒರಿಜನಲ್ ಬಾಟಲ್ ಹಾಗೇ ಪ್ಯಾಕ್ ಮಾಡಿ ನಕಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದು ನಕಲಿ ಮದ್ಯದ ಅಸಲಿ ಕಥೆ.

ನಕಲಿ ಮದ್ಯ ಮಾರಾಟಕ್ಕೆ ಬ್ರೇಕ್ ಬಿದ್ದಿದೆ ಎಂದು ಮದ್ಯ ಪ್ರಿಯರು ತಿಳಿದುಕೊಂಡಿದ್ದಾರೆ. ಆದರೆ ಮುದ್ರಣ ಕಾಶಿ ಗದಗ ಜಿಲ್ಲೆಯಲ್ಲಿ ನಕಲಿ ಮದ್ಯ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ. ಹೌದು, ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಹಳ್ಳಿಮನಿ ಡಾಬಾ ಹಾಗೂ ಕೊರ್ಲಹಳ್ಳಿ ಜೈ ಮಾತಾ ಡಾಬಾಗಳ ಮೇಲೆ ಗದಗ ಜಿಲ್ಲಾ ಅಬಕಾರಿ ಅಧಿಕಾರಿಗಳು ಖಚಿತ ಮಾಹಿತಿ ಮೇರಿಗೆ ದಾಳಿ ಮಾಡಿದ್ದಾರೆ.

ಡಾಬಾದಲ್ಲಿ ಅನಧಿಕೃತವಾಗಿ ಅದರಲ್ಲೂ ನಕಲಿ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಇಂಪೀರಿಯಲ್ ಬ್ಲ್ಯೂ ಬ್ರಾಂಡ್ ಹೆಸರಿನ ಮದ್ಯವನ್ನು ನಕಲು ಮಾಡಿ ಅಬಕಾರಿ ಇಲಾಖೆಯ ಸೀಲ್ ಹಾಕಿ ಡಾಬಾಗಳಿಗೆ ಬಂದ್ ಗ್ರಾಹಕರಿಗೆ ನೀಡಲಾಗುತ್ತಿತ್ತು. ಅಧಿಕಾರಿಗಳು ಬಾಟಲ್ ಗಳನ್ನು ಪರಿಶೀಲನೆ ನಡೆಸಿದಾಗ ಖುದ್ದು, ಅಬಕಾರಿ ಅಧಿಕಾರಿಗಳಿಗೆ ಶಾಕ್ ಆಗಿದೆ. ಡಾಬಾ ಮಾಲೀಕರಾದ ಮಾರುತಿ ಗಚೀಮನಿ, ವೀರೇಶ ನಾವಳ್ಳಿ ಹಾಗೂ ನಕಲಿ ಮಧ್ಯ ತಂದು ಕೊಟ್ಟ ಬಳ್ಳಾರಿ ಮೂಲದ ಬಾಳೆಶೇ, ಹಾಗೂ ರಮೇಶ ನಾಯ್ಕ್ ಎನ್ನುವ ನಾಲ್ಕು ಜನರನ್ನು ವಶಕ್ಕೆ ಪಡೆದುಕೊಂಡು 38.16 ಲಿಟಲ್ ನಕಲಿ ಮದ್ಯ ಹಾಗೂ 7.8 ಲಿಟಲ್ ಬಿಯರ್‌ ಬಾಟಲ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಅಲ್ಪಸಂಖ್ಯಾತ ವಸತಿ ಶಾಲೆಗಳಲ್ಲಿ ದಾಖಲಾತಿ ಇಳಿಕೆಯಾದಲ್ಲಿ ಕಠಿಣ ಕ್ರಮ; ಸಚಿವ ಶ್ರೀಮಂತ ಪಾಟೀಲ್ ಎಚ್ಚರಿಕೆ

ಇನ್ನು, ಅಬಕಾರಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ನಕಲಿ ಜಾಲವನ್ನು ಪತ್ತೆ ಮಾಡುತ್ತಿದ್ದಾರೆ. ಇಷ್ಟು ದಿನ ಸೈಲೆಂಟಾಗಿದ್ದ ಹುಬ್ಬಳ್ಳಿಯ ಕಮರಿ ಪೇಟೆಯಿಂದ ನಕಲಿ ಮದ್ಯ ಸರಬರಾಜು ಆಗಿರುವ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಬಂಧಿತ ಆರೋಪಿತರು ಸಹ ಹುಬ್ಬಳ್ಳಿಯಿಂದ ನಕಲಿ ಮದ್ಯ ತೆಗೆದುಕೊಂಡು ಬಂದು ಗದಗ ಜಿಲ್ಲೆಯಲ್ಲಿ ಮಾರಾಟ ಮಾಡಲಾಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರಂತೆ. ಹೀಗಾಗಿ ಅಬಕಾರಿ ಪೊಲೀಸರಿಗೆ ಈ ಪ್ರಕರಣವನ್ನು ಸಂಪೂರ್ಣ ಬೇಧಿಸೋದು ಚಾಲೆಂಜ್ ಆಗಿದೆ.

ಬಳ್ಳಾರಿ ಹಾಗೂ ಹುಬ್ಬಳ್ಳಿಯಿಂದ ನಕಲಿ ಮದ್ಯ ಬಂದಿರುವ ಕುರಿತು ಅಬಕಾರಿ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಈ ನಕಲಿ ಮದ್ಯದ ಮೂಲವನ್ನು ಆದಷ್ಟು ಬೇಗ ಪತ್ತೆ ಮಾಡುವ ಜವಾಬ್ದಾರಿ ಅಬಕಾರಿ ಅಧಿಕಾರಿಗಳ ಮೇಲಿದೆ. ಸದ್ಯ ನಾಲ್ಕು ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಅಂತಾರೆ ಅಬಕಾರಿ ಇಲಾಖೆಯ ಡಿಸಿ ಮೋತಿಲಾಲ್ ಅವರು.
ಒಟ್ಟಾರೆಯಾಗಿ ನಕಲಿ ಮದ್ಯ ಸೇವನೆ ಮಾಡಿ ಅದೆಷ್ಟು ಜನರು ಯಮರಾಯನ ಪಾದವನ್ನು ಸೇರಿದ್ದಾರೆ. ರಾಜ್ಯದಲ್ಲಿ ಸಹ ನಕಲಿ ಮದ್ಯ ಹಾವಳಿ ಕಡಿಮೆಯಾಗಿತ್ತು. ಆದರೆ ಈಗ ಗದಗ ಜಿಲ್ಲೆಯಲ್ಲಿ ನಕಲಿ ಮದ್ಯ ಸಿಕ್ಕಿರುವುದನ್ನು ನೋಡಿದರೆ, ಇನ್ನೂ ನಕಲಿ ಮದ್ಯ ಮಾರಾಟವಾಗುತ್ತಿರುವ ಶಂಕೆ ವ್ಯಕ್ತವಾಗಿದೆ. ಅಬಕಾರಿ ಇಲಾಖೆ ಅಧಿಕಾರಿಗಳು ಕೂಲಂಕುಶವಾಗಿ ತನಿಖೆ ಮಾಡಬೇಕು, ಆಗ ಮಾತ್ರ ನಕಲಿ ಮದ್ಯದ ಜಾಲ ಪತ್ತೆಯಾಗಲು ಸಾಧ್ಯ.

*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??


Spread the love

About Laxminews 24x7

Check Also

ಜಗದೀಶ್ ಶೆಟ್ಟರ್‌ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಬಾಲಚಂದ್ರ ಜಾರಕಿಹೊಳಿ

Spread the loveಬೆಳಗಾವಿ, : ರಾಜ್ಯದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆದಿದ್ದು, ಇನ್ನುಳಿದ ಕ್ಷೇತ್ರಗಳಿಗೆ ಮೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ