ಹೀಗೆ ರಸ್ತೆಯಲ್ಲಿ ನಾಮ ಫಲಕಗಳನ್ನು ಹಿಡಿದುಕೊಂಡು ಸಾರ್ವಜನಿಕರಿಗೆ ರಸ್ತೆ ನಿಯಮಗಳ ಹಾಗೂ ದ್ವಿಚಕ್ರ ಸವಾರರಿಗೆ ಹೆಲ್ಮೆಟನ ಮಹತ್ವ ವನ್ನು ತಿಳಿಸುತ್ತಿರೋ ಈ ವ್ಯಕ್ತಿಯನ್ನು ನೋಡಿದ್ರೆ ಸೇಮ್ ನಾವು ಫೋಟೋದಲ್ಲಿ ,ಹಾಗೂ ನೋಟ ಗಳಲ್ಲಿ ಕಾಣೋ ಗಾಂಧಿ ತರಾನೆ ಇದಾರೆ ಅಂತಾ ನೀವು ಊಹೆ ಮಾಡ್ಕೊಂಡು ಇವರೇನಾ ನಮ್ಮ ಗಾಂಧಿ ಅಂತಾ ನೀವು ತಿಳ್ಕೊಂಡ್ರೆ ನಿಮ್ಮ ಊಹೆ ತಪ್ಪು…
ಇವರೇನು ಗಾಂಧಿ ಅಲ್ಲ ಆದ್ರೆ ಗಾಂಧಿ ತತ್ವಗಳನ್ನು ಅನುಕರಿಸುತ್ತಿರೋ ಗಾಂಧಿ ಅನುವಾದಿ ಮುತ್ತಪ್ಪ ತಿರಲಾಪುರ ಮೂಲತಃ ಗದಗ ಜಿಲ್ಲೆಯ ರೋಣ ತಾಲೂಕಿನ ಅರಳಿಕಟ್ಟಿ ಗ್ರಾಮದ ನಿವಾಸಿ…ಹುಟ್ಟಿದ ಮೇಲೆ ಏನಾದ್ರು ಸಮಾಜಕ್ಕೆ ಕೊಡುಗೆಯನ್ನು ಕೊಡುಗೆ ಕೊಡಬೇಕು ಎಂಬ ಉದ್ದೇಶದಿಂದ ತಮ್ಮ ಸ್ವಂತ ಖರ್ಚಿನಲ್ಲೇ ಇಂತಹ ಸುಡು ಬಿಸಿಲಿನಲ್ಲೂ ತಮ್ಮ ಮೈಗೆ ಬಣ್ಣ ಬಳಿದುಕೊಂಡು ಸಾರ್ವಜನಿಕರಿಗೆ ಸಾರಿಗೆ ಮಹತ್ವವನ್ನು ಜೊತೆಗೆ ದ್ವಿಚಕ್ರ ಸವಾರಿಗೆ ಹೆಲ್ಮೆಟನ ಮಹತ್ವವನ್ನು ತಿಳಿಸುವ ಕಾರ್ಯ ಮಾಡುತ್ತಿದ್ದಾರೆ..
60 ಸಾವಿರ ಕೊಟ್ಟು ದ್ವಿಚಕ್ರ ಕೊಂಡುಕೊಳ್ಳೋ ಜನ 600 ರೂಪಾಯಿ ಕೊಟ್ಟು ತಮ್ಮ ಜೀವವನ್ನು ಉಳಿಸುವ ಹೆಲ್ಮೆಟ್ ಉಪಯೋಗ ಮಾಡ್ತಿಲ್ಲ ಎಂಬುದು ದುರಂತ ಈ ನಿಟ್ಟಿನಲ್ಲೇ ನಾನು ಜನರಿಗೆ ಅರಿವನ್ನು ಉಂಟು ಮಾಡಲು ಈ ಒಂದು ವೇಷವನ್ನು ತೊಟ್ಟಿದ್ದೇನೆ ಅಂತಾರೆ ಮುತ್ತಪ್ಪ ತಿರಲಾಪುರ.. ಒಟ್ಟಿನಲ್ಲಿ ಇವರ ಈ ಒಂದು ಈ ಕಾರ್ಯಕ್ಕೆ ಸರ್ಕಾರ ಕೂಡಾ ಕೈ ಜೋಡಿಸಿ ಇವರಿಗೆ ಪ್ರೋತ್ಸಾಹ ಕೊಡಲಿ ಅನ್ನೋದೇ ನಮ್ಮ ಆಶಯ
