Breaking News
Home / ಜಿಲ್ಲೆ / ಈ ದೇಶದ ಯಾವ ಪ್ರಜೆಯನ್ನೂ ಧರ್ಮದ ಆಧಾರದ ಮೇಲೆ ಹೊರಹಾಕುವ ಯಾವುದೆ ಕಾನೂನುಗಳು ಇಲ್ಲ ಎಂದು ನ್ಯಾಯವಾದಿ ಎಮ್.ಬಿ.ಜೀರಲಿ ಹೇಳಿದರು.

ಈ ದೇಶದ ಯಾವ ಪ್ರಜೆಯನ್ನೂ ಧರ್ಮದ ಆಧಾರದ ಮೇಲೆ ಹೊರಹಾಕುವ ಯಾವುದೆ ಕಾನೂನುಗಳು ಇಲ್ಲ ಎಂದು ನ್ಯಾಯವಾದಿ ಎಮ್.ಬಿ.ಜೀರಲಿ ಹೇಳಿದರು.

Spread the love

ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ಪ್ರಪಂಚದ ಅಗ್ರಸ್ಥಾನದ ದೇಶ ಭಾರತವಾಗಿದ್ದು ಎಲ್ಲ ಜನಾಂಗಕ್ಕೆ ಶಾಂತಿಯದೋಟವಾಗಿದೆ. ಈ ದೇಶದ ಯಾವ ಪ್ರಜೆಯನ್ನೂ ಧರ್ಮದ ಆಧಾರದ ಮೇಲೆ ಹೊರಹಾಕುವ ಯಾವುದೆ ಕಾನೂನುಗಳು ಇಲ್ಲ ಎಂದು ನ್ಯಾಯವಾದಿ ಎಮ್.ಬಿ.ಜೀರಲಿ ಹೇಳಿದರು.
ಪಟ್ಟಣದ ಗಣಾಚಾರಿ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಪದವಿ ವಿದ್ಯಾರ್ಥಿಗಳಿಗೆ ಎನ್.ಎಸ್.ಎಸ್.ವತಿಯಿಂದ ಹಮ್ಮಿಕೊಂಡಿದ್ದ ಪೌರತ್ವ ತಿದ್ದುಪಡಿ ಕಾಯ್ದೆ2019ರ ಅಗತ್ಯತೆ ಮತ್ತು ವಾಸ್ತವಿಕತೆಯ ಜಾಗೃತಿ ಸಭೆಯ ಮುಖ್ಯ ಅತಿಥಿಗಳಾಗಿ ಮಾತನಾಡಿ, ಭಾರತ ದೇಶ ಅನೇಕ ಭಾಷೆ, ಸಾವಿರಾರು ಜಾತಿ , ಸಂಸ್ಕೃತಿಗಳ ಆಗರವಾಗಿದ್ದು ಅನೇಕತೆಯಲ್ಲಿ ಏಕತೆ ಹೊಂದಿದ ಜಗತ್ತಿನ ಏಕೈಕ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದರು.

ಪ್ರತಿಯೊಂದು ಧರ್ಮ_ಜಾತಿಯ ವ್ಯಕ್ತಿಗೆ ಸಂವಿಧಾನ ಬದ್ದ ಹಕ್ಕು ನೀಡಿದ್ದು 1971ರಲ್ಲಿ ಬಾಂಗ್ಲಾ ನಿರಾಶ್ರಿತರಿಗೆ, ಚೀನಾ ದೇಶದಿಂದ ಹೊರದಬ್ಬಿಸಿಕೊಂಡ ಟಿಬೆಟಿಯನ್ನರಿಗೆ ನಿರಾಶ್ರಿತರಿಗೆ ಪೌರತ್ವ ನೀಡಿದೆ. ಹಿಂದಿನ ಅಖಂಡ ಭಾರತದಿಂದ ಬೆರ್ಪಡೆಗೊಂಡ ಇಸ್ಲಾಂ ದೇಶಗಳಾಗಿ ನಿರ್ಮಾಣವಾಗಿರುವ ಬಾಂಗ್ಲಾ, ಪಾಕಿಸ್ತಾನ ಮತ್ತು ಅಫ್ಘಾನ್ ದೇಶಗಳಲ್ಲಿ ಬಹುಸಂಖ್ಯಾತ ಮುಸ್ಲಿಂರಿಂದ ಧಾರ್ಮಿಕ ಹಿಂಸೆಗೆ ಒಳಗಾದ ಹಿಂದೂ, ಕ್ರೈಸ್ತ, ಪಾರ್ಸಿ, ಜೈನ, ಬೌದ್ದ ಮತ್ತು ಸಿಖ್ ಸಮುದಾಯಕ್ಕೆ ಭಾರತದ ಪೌರತ್ವ ನೀಡಿದರೆ ಈ ದೇಶದ ಅಮಾಯಕ ಮುಸ್ಲಿಂರ ತಲೆಯಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಪ್ರತಿಭಟನೆಗೆ ದೂಡುತ್ತಿರುವದು ಕಳವಳಕಾರಿ ಸಂಗತಿ. ಪೌರತ್ವ ತಿದ್ದುಪಡಿ ಕಾಯ್ದೆ ಪೌರತ್ವ ನೀಡುವ ಕಾಯ್ದೆ ದೇಶದ ಯಾವುದೆ ಪ್ರಜೆಗಳ ಪೌರತ್ವ ಕಸಿದುಕೊಳ್ಳುವ ಕಾಯ್ದೆಯಲ್ಲ ಎಂದರು.
ಮಾಜಿ ಶಾಸಕ ಡಾ.ವಿ.ಆಯ್.ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರದ ರಕ್ಷಣೆಗಾಗಿ ಮತ್ತು ದೇಶದ ಪ್ರತಿಯೊಬ್ಬ ನಾಗರಿಕನ ಶ್ರಯೋಭಿವೃದ್ದಿಗೆ ಹಗಲಿರಳು ಶ್ರಮಿಸುತ್ತಿದ್ದಾರೆ. ಇದನ್ನು ಸಹಿಸದ ವ್ಯಕ್ತಿಗಳು ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಅಲ್ಪಸಂಖ್ಯಾತ ಮುಸ್ಲಿಂರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಇದಕ್ಕೆ ತೆಲೆಕೆಡಿಸಿಕೊಳ್ಳದೆ ಈ ದೇಶದ ಮುಸ್ಲಿಂರು ನಿರ್ಭಯವಾಗಿ ತಮ್ಮ ಜೀವನ ಸಾಗಿಸಬೇಕೆಂದರು.

ಸವದತ್ತಿ ಎಪಿಎಂಸಿ ಸದಸ್ಯ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ಈ ದೇಶದ ರಾಷ್ಟ್ರೀಯತೆಯನ್ನು ಗೌರವಿಸಿ ಭಾರತದಲ್ಲಿರುವ ಮುಸ್ಲಿಂರನ್ನು ಸುಳ್ಳು ಹೇಳಿಕೆಯ ಮೇಲೆ ಹೋರಾಟಕ್ಕೆ ಕರೆ ಕೊಡುವವರ ಬಗ್ಗೆ ಗಮನವಿರಲಿ. ಈ ದೇಶವನ್ನಾಳಿದ ಅಟಲ ಬಿಹಾರಿ ವಾಜಪೇಯಿ ವಂದೇ ಮಾತರಂ ಗೀತೆಗೆ ಹೊಸ ರಾಗ ಸಂಯೋಜನೆ ಮಾಡಿದ ಎ.ಆರ್.ರಹೇಮಾನ ಅವರನ್ನ ಸತ್ಕರಿಸಿದ್ದು, ಮೋದಿಜಿ ಎಪಿಜಿ ಅಬ್ದುಲ ಕಲಾಂರನ್ನು ರಾಷ್ಟ್ರಪತಿಯನ್ನಾಗಿಸಿದ್ದು, ಕರ್ನಾಟಕದ ಕಬೀರ ಇಬ್ರಾಹಿಂ ಸುತಾರ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದ್ದು ಹಾಗೂ ಮುಸ್ಲಿಂ ಮಹಿಳೆಯರ ಸ್ವಾಭಿಮಾನ ಜೀವನಕ್ಕೆ ತ್ರಿವಳಿ ತಲಾಕ ರದ್ದತಿ ಮುಸ್ಲಿಂರ ಹಿತಕ್ಕಾಗಿ ಕೈಕೊಂಡ ಕ್ರಮಗಳು. ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಲ್ಪಸಂಖ್ಯಾತ ಮುಸ್ಲಿಂರ ವಿರದ್ದದ ಸರ್ಕಾರವಲ್ಲ ಅಂದರು.
ಸಂಸ್ಥೆಯ ಪ್ರಾಚಾರ್ಯರ ಡಾ.ಸಿ.ಬಿ.ಗಣಾಚಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯ ಮೇಲೆ ಬಿ.ಬಿ.ಸಂಗನಗೌಡರ, ನ್ಯಾಯವಾದಿ ಪಿ.ಬಿ.ಪಟ್ಟೆದ ಇದ್ದರು.
ಸಂಸ್ಥೆಯ ಆಡಳಿತಧಿಕಾರಿ ಪ್ರೋ.ಎಮ್.ಎಚ್.ಪೇಂಟೆದ ಸ್ವಾಗತಿಸಿದರು.
ಕುಮಾರಿ ಶ್ರೀದೇವಿ ಪಡೆಣ್ಣವರ, ರಾಜೇಶ್ವರಿ ಗೌಡರ ನಿರುಪಿಸಿದರು. ಏಕತಾ ಸುರ್ಯವಂವಶಿ ವಂದಿಸಿದರು ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಬ್ಬಂದಿ ಸಾವಿರಾರು ವಿದ್ಯಾರ್ಥಿಗಳು ಇದ್ದರು.
Advertisement


Spread the love

About Laxminews 24x7

Check Also

ಮಂಗಳೂರಿನಲ್ಲಿ ಯುವತಿ ನಾಪತ್ತೆ ಪ್ರಕರಣ: ಬಜರಂಗದಳ ದಾಳಿಗೆ ಹೆದರಿ ನಾಪತ್ತೆಯಾಗಿರುವ ಅನುಮಾನ

Spread the loveಮಂಗಳೂರು, ಫೆಬ್ರವರಿ 26: ಪಿಹೆಚ್​ಡಿ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್ ನಾಪತ್ತೆ ಪ್ರಕರಣ (Missing Case) ಇದೀಗ ಹಲವು ಅನುಮಾನಗಳಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ