Home / ಜಿಲ್ಲೆ / ನಾಯಿ ಬಿಸ್ಕೆಟ್ ತಿಂದಿದ್ದ ರಶ್ಮಿಕಾ…………… ನಿತಿನ್ ರಶ್ಮಿಕಾರ ಸೀಕ್ರೆಟ್‍ಯನ್ನು ರಿವೀಲ್ ಮಾಡಿದ್ದಾರೆ.

ನಾಯಿ ಬಿಸ್ಕೆಟ್ ತಿಂದಿದ್ದ ರಶ್ಮಿಕಾ…………… ನಿತಿನ್ ರಶ್ಮಿಕಾರ ಸೀಕ್ರೆಟ್‍ಯನ್ನು ರಿವೀಲ್ ಮಾಡಿದ್ದಾರೆ.

Spread the love

ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ನಾಯಿ ಬಿಸ್ಕೆಟ್ ತಿಂದಿದ್ದಾರೆ ಎಂದು ಟಾಲಿವುಡ್ ನಟ ನಿತಿನ್ ರಶ್ಮಿಕಾರ ಸೀಕ್ರೆಟ್‍ಯನ್ನು ರಿವೀಲ್ ಮಾಡಿದ್ದಾರೆ.

ನಿತಿನ್ ಮತ್ತು ರಶ್ಮಿಕಾ ಅಭಿನಯದ ‘ಭೀಷ್ಮ’ ಸಿನಿಮಾ ಫೆ.21 ರಂದು ರಿಲೀಸ್ ಆಗಲಿದೆ. ಹೀಗಾಗಿ ಸಿನಿಮಾದ ಪ್ರಚಾರ ಕಾರ್ಯಕ್ರಮಗಳಲ್ಲಿ ನಿತಿನ್ ಮತ್ತು ರಶ್ಮಿಕಾ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಅಂದರೆ ಪ್ರೇಮಿಗಳ ದಿನಾಚರಣೆಯಂದು ಇಬ್ಬರೂ ಸಂದರ್ಶನವೊಂದನ್ನು ನೀಡಿದ್ದರು. ಆ ಸಂದರ್ಶನದಲ್ಲಿ ನಿತಿನ್, ರಶ್ಮಿಕಾ ಬಗ್ಗೆ ಯಾರಿಗೂ ತಿಳಿಯದ ಸೀಕ್ರೆಟ್ ಒಂದನ್ನು ಬಿಚ್ಚಿಟ್ಟಿದ್ದಾರೆ.

ನಿತಿನ್ ಸಂದರ್ಶನ ನೀಡುತ್ತಿದ್ದ ಸಂದರ್ಭದಲ್ಲಿ, “ರಶ್ಮಿಕಾ ಬಗ್ಗೆ ಯಾರಿಗೂ ತಿಳಿಯದ ಸಂಗತಿಯನ್ನ ಹೇಳಿ ಎಂದು ನನಗೆ ಕೇಳಿ, ನಾನು ಉತ್ತರ ಕೊಡುತ್ತೇನೆ. ಅದೇ ರೀತಿ ನನ್ನ ಬಗ್ಗೆ ಯಾರಿಗೂ ಗೊತ್ತಿಲ್ಲದ ವಿಚಾರವನ್ನು ರಶ್ಮಿಕಾಗೆ ಕೇಳಿ. ಅವರು ಉತ್ತರ ಕೊಡುತ್ತಾರೆ” ಎಂದು ನಿರೂಪಕಿಗೆ ಸಲಹೆ ನೀಡಿದರು. ಅದರಂತೆಯೇ ನಿರೂಪಕಿ ರಶ್ಮಿಕಾಗೆ ಪ್ರಶ್ನೆ ಮಾಡಿದ್ದಾರೆ.

ಆಗ ರಶ್ಮಿಕಾಗೆ ನಿತಿನ್ ಬಗ್ಗೆ ಏನು ಹೇಳಬೇಕು ಎಂದು ತಿಳಿಯಲಿಲ್ಲ. ಈ ವೇಳೆ ರಶ್ಮಿಕಾ ಬಗ್ಗೆ ಒಂದು ಸೀಕ್ರೆಟ್ ಹೇಳುತ್ತೇನೆ ಎಂದು ಅವರ ಸೀಕ್ರೆಟ್ ಒಂದನ್ನು ನಟ ನಿತಿನ್ ರಿವೀಲ್ ಮಾಡಿದ್ದಾರೆ.

ಸಾಮಾನ್ಯವಾಗಿ ನಾವು-ನೀವೆಲ್ಲಾ ಸಂಜೆ ಹೊತ್ತಲ್ಲಿ ಇಡ್ಲಿ, ದೋಸೆ, ಚಿಪ್ಸ್, ಸ್ವೀಟ್ ಹೀಗೆ ಏನಾದರೂ ಸ್ನ್ಯಾಕ್ಸ್ ತಿನ್ನುತ್ತೀವಿ ಅಲ್ವಾ. ಆದರೆ ರಶ್ಮಿಕಾ ಮಂದಣ್ಣ ಏನು ತಿಂತಾರೆ ಗೊತ್ತಾ? ಎಂದು ಹೇಳಲು ಮುಂದಾಗಿದ್ದಾರೆ. ಆಗ ರಶ್ಮಿಕಾ ಹೇಳಬೇಡಿ ಎಂದು ತಡೆಯಲು ಪ್ರಯತ್ನಿಸಿದ್ದಾರೆ. ಆದರೂ ನಿತಿನ್, ಸ್ನ್ಯಾಕ್ಸ್ ಆಗಿ ರಶ್ಮಿಕಾ ನಾಯಿ ಬಿಸ್ಕೆಟ್ ತಿಂದಿದ್ದಾರೆ” ಎಂದು ಹೇಳಿಯೇ ಬಿಟ್ಟಿದ್ದಾರೆ.

ಈ ವಿಚಾರ ರಶ್ಮಿಕಾಗೆ ಮುಜುಗರ ಉಂಟುಮಾಡಿತು. ಕೊನೆಗೆ ರಶ್ಮಿಕಾ ನಕ್ಕು ನಾಯಿ ಬಿಸ್ಕೆಟ್ ತಿಂದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. “ನಾನು ಒಮ್ಮೆ ಮಾತ್ರ ನಾಯಿ ಬಿಸ್ಕೆಟ್ ತಿಂದಿದ್ದೇನೆ. ಅದರ ರುಚಿ ಹೇಗಿರುತ್ತೆ ಎಂದು ತಿಳಿದುಕೊಳ್ಳಲು ಟೇಸ್ಟ್ ಮಾಡಿದ್ದೆ ಅಷ್ಟೆ. ನಮ್ಮ ಮನೆಯಲ್ಲೂ ನಾಯಿ ಮರಿ ಇದೆ. ಅದು ಯಾವಾಗಲೂ ಪೆಡಿಗ್ರೀ ಬಿಸ್ಕೆಟ್ ಇಷ್ಟ ಪಡುತ್ತೆ. ಹೀಗಾಗಿ ಹೇಗಿರುತ್ತೆ ಎಂಬ ಕುತುಕೂಲದಿಂದ ಅದರ ರುಚಿಯನ್ನ ನೋಡಿದ್ದೆ. ಅದನ್ನ ಒಮ್ಮೆ ನಿತಿನ್ ಬಳಿ ಹೇಳಿಕೊಂಡಿದ್ದೆ. ಆಗ ನಿತಿನ್ ಶಾಕ್ ಆಗಿದ್ದರು” ಅಂತ ರಶ್ಮಿಕಾ ನಾಯಿ ಬಿಸ್ಕೆಟ್ ತಿಂದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

credits to publictv


Spread the love

About Laxminews 24x7

Check Also

ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆ

Spread the loveಬೆಂಗಳೂರು : ಈ ಸಂಬಂಧ ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಮುಖ್ಯಮಂತ್ರಿಗಳ ದಿನಾಂಕ 24-01-2022ರ ಟಿಪ್ಪಣಿಯಂತೆ ಈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ