Breaking News
Home / Uncategorized / ಬೆಳಗಾವಿ – ಧಾರವಾಡ ರೈಲ್ವೆ: ಸಚಿವರ ಉತ್ತರ ಅಸಮರ್ಪಕ ಎಂದ ಕವಟಗಿಮಠ

ಬೆಳಗಾವಿ – ಧಾರವಾಡ ರೈಲ್ವೆ: ಸಚಿವರ ಉತ್ತರ ಅಸಮರ್ಪಕ ಎಂದ ಕವಟಗಿಮಠ

Spread the love

ಧಾರವಾಡ -ಬೆಳಗಾವಿ ನಡುವೆ ಹೊಸ ರೈಲು ಮಾರ್ಗ ನಿರ್ಮಾಣ ಮಾಡುವ ಸಂಬಂಧ ಘೋಷಣೆಯಾದ ಯೋಜನೆಯು ಯಾವ ಹಂತದಲ್ಲಿದೆ ಎನ್ನುವ ತಮ್ಮ ಚುಕ್ಕೆ ಗುರುತಿನ ಪ್ರಶ್ನೆಯನ್ನು ವಿಧಾನ ಪರಿಷತ್ ಸರ್ಕಾರಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಸದನದಲ್ಲಿ ಪ್ರಶ್ನೋತ್ತರ ವೇಳೆ ಮೂಲಭೂತ ಸೌಕರ್ಯ ಸಚಿವರಿಗೆ ಕೇಳಿದ್ದರು.

ಆದರೆ ಸಚಿವರು ಒದಗಿಸಿದ ಉತ್ತರ ಅಸಮರ್ಪಕವಾಗಿದೆಯೆಂದು ಕವಟಗಿಮಠ ಆಕ್ಷೇಪಿಸಿ, ತುರ್ತಾಗಿ ರಾಜ್ಯ ಸರಕಾರಿ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಧಾರವಾಡ -ಬೆಳಗಾವಿ ನಡುವೆ ಹೊಸ ರೈಲು ಮಾರ್ಗ ನಿರ್ಮಾಣ ಮಾಡುವ ಸಂಬಂಧ ಘೋಷಣೆಯಾದ ಯೋಜನೆಯು ಯಾವ ಹಂತದಲ್ಲಿದೆ, ಭೂ ಸ್ವಾಧೀನ ಪ್ರಕ್ರಿಯೆಗೆ ರಾಜ್ಯ ಸರ್ಕಾರ ತೆಗೆದುಕೊಂಡ ಕ್ರಮಗಳೇನು, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಒದಗಿಸಿರುವ ಅನುದಾನವೆಷ್ಟು? ಯಾವ ಕಾಲಮಿತಿಯಲ್ಲಿ ಸದರಿ ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದು ಕವಟಗಿಮಠ ಪ್ರಶ್ನಿಸಿದ್ದರು.

ಸಚಿವರು ಪ್ರಶ್ನೆಗೆ ಉತ್ತರ ಒದಗಿಸಿದ್ದರು. ಆದರೆ ಒದಗಿಸಿದ ಉತ್ತರ ಅಸಮರ್ಪಕವಾಗಿದೆಯೆಂದು ಕವಟಗಿಮಠ, ಧಾರವಾಡ-ಬೆಳಗಾವಿ ನಡುವೆ ಹೊಸ ರೈಲು ಮಾರ್ಗ ನಿರ್ಮಾಣ ಮಾಡಬೇಕೆಂಬ ಸಾರ್ವಜನಿಕರ ಕೂಗು ನೆನ್ನೆ ಮೊನ್ನೆಯದಲ್ಲ, ಇದು ಸ್ವಾತಂತ್ರ್ಯ ಪೂರ್ವದಿಂದಲೂ ಜನರು ಈ ಭೇಡಿಕೆಯನ್ನು ಸರ್ಕಾರದ ಮುಂದೆ ಇಡುತ್ತಲೇ ಬಂದಿದ್ದಾರೆ. ಏಕೆಂದರೆ ಧಾರವಾಡದಿಂದ ಬೆಳಗಾವಿ ತಲುಪಲು ಸುಮಾರು ನಾಲ್ಕು ತಾಸು ಕ್ರಮಿಸಬೇಕು ಲೋಂಡ ಬಳಸಿಕೊಂಡು ಬೆಳಗಾವಿ ತಲುಪಬೇಕು. ಬೆಳಗಾವಿ – ದಾರವಾಡ ನಡುವೆ ನೇರ ರೈಲುಮಾರ್ಗ ನಿರ್ಮಾಣವಾದರೆ ಸಮಯ ಉಳಿತಾಯವಾಗುತ್ತದೆ. ಕೇವಲ ೪೫ ನಿಮಿಷಗಳಲ್ಲಿ ನಾವು ಬೆಳಗಾವಿಯನ್ನು ತಲುಪಬಹುದು. ಈ ಹಿನ್ನಲೆಯಲ್ಲಿ ೧೯೯೬ ರಲ್ಲಿ ಆಗಿನ ಪ್ರಧಾನಿಯಾಗಿದ್ದ ದೇವೇಗೌಡರು ಇದರ ಸರ್ವೇ ಮಾಡಲು ಆದೇಶ ಹೊರಡಿಸಿದ್ದರು. ಆದರೆ ಕಳೆದ ವರ್ಷ ಸರ್ವೇ ಕಾರ್ಯವನ್ನು ಕೈಗೆತ್ತಿಕೊಂಡು ಸರ್ವೆ ಮಾಡಲಾಗಿದೆ. ರೈಲ್ವೆ ಸಚಿವರಾಗಿದ್ದ ದಿವಂಗತ ಸುರೇಶ ಅಂಗಡಿಯವರ ದೃಢವಾದ ಇಚ್ಚಾಶಕ್ತಿಯ ಫಲವಾಗಿ ೨೦೨೦-೨೧ನೇ ಸಾಲಿನ ಕೇಂದ್ರ ಬಜೆಟ್ ‌ನಲ್ಲಿ ಈ ಯೋಜನೆಯನ್ನು ಘೋಷಣೆ ಮಾಡಲಾಯಿತು.
ಕೇಂದ್ರ ಸರ್ಕಾರ ಅನುದಾನವನ್ನೂ ಸಹ ಒದಗಿಸಿದೆ. ಇದಕ್ಕೆ ರಾಜ್ಯ ಸರ್ಕಾರವು ಪೂರಕವಾಗಿ ಸ್ಪಂದಿಸಿ ತ್ವರಿತಗತಿಯಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕಾಗಿದೆ. ಭೂ ಸ್ವಾಧೀನ ಪ್ರಕ್ರಿಯೆಯನ್ನು ತತ್‌ತಕ್ಷಣದಿಂದ ಆರಂಭಿಸಿ ಹೊಸ ರೈಲು ಮಾರ್ಗ ನಿರ್ಮಿಸಲು ಸಂಪೂರ್ಣ ಸಹಕಾರ ನೀಡಬೇಕಾದ್ದು ರಾಜ್ಯ ಸರ್ಕಾರದ ಜವಾಬ್ದಾರಿ, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಶೀಘ್ರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ದಶಕಗಳ ಈ ಭಾಗದ ಜನರ ಬೇಡಿಕೆಯನ್ನು ತಕ್ಷಣ ಈಡೇರಿಸಬೇಕೆಂದು, ಅದಕ್ಕಾಗಿ ನಾಳಿನ ರಾಜ್ಯ ಬಜೆಟನಲ್ಲಿ ಈ ಯೋಜನೆಗೆ ಹಣಕಾಸು ಒದಗಿಸಿ ಘೋಷಣೆ ಮಾಡಬೇಕೆಂದು ಮಹಾಂತೇಶ ಕವಟಗಿಮಠ ಸರ್ಕಾರವನ್ನು ಆಗ್ರಹ ಪೂರ್ವಕವಾಗಿ ಒತ್ತಾಯಿಸಿದರು.
ಸದನದಲ್ಲಿ ಈ ಪ್ರಶ್ನೆಗೆ ಉತ್ತರಿಸಿದ ಮೂಲಸೌಲಭ್ಯ ಅಭಿವೃಧ್ಧಿ ವಕ್ಫ್ ಮತ್ತು ಹಜ್ ಸಚಿವರ ಪರವಾಗಿ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರು ಉತ್ತರಿಸುತ್ತಾ, ಮಹಾಂತೇಶ ಕವಟಗಿಮಠ ರವರು ತುಂಬಾ ಮಹತ್ವದ ಪ್ರಶ್ನೆಯನ್ನು ಕೇಳಿದ್ದಾರೆ, ಧಾರವಾಡ -ಬೆಳಗಾವಿ ನಡುವೆ ಹೊಸ ರೈಲು ಮಾರ್ಗ ನಿರ್ಮಾಣ ಮಾಡಬೇಕೆಂಬ ಸಾರ್ವಜನಿಕರ ಬೇಡಿಕೆ ಸಮಂಜಸವಾಗಿದೆ, ನಮ್ಮ ಸರ್ಕಾರ ಆ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ, ಈಗಾಗಲೇ ಸರ್ವೇ ಕಾರ್ಯವು ಪೂರ್ಣಗೊಂಡಿದೆ. ಈ ಯೋಜನೆಗೆ ಒಟ್ಟು ಸುಮಾರು ೯೮೮.೩೦ ಕೋಟಿಗಳಷ್ಟು ಹಣ ವೆಚ್ಚವಾಗಲಿದೆ. ಇದಕ್ಕೆ ಶೇ.೫೦ ರಷ್ಟು ಅಂದರೆ ರೂ.೪೯೪.೧೫ ಕೋಟಿಗಳನ್ನು ಅನುದಾನವನ್ನು ರಾಜ್ಯ ಸರ್ಕಾರ ಭರಿಸಬೇಕಾಗುತ್ತದೆ. ಇದಕ್ಕಾಗಿ ಡಿ.ಪಿ.ಆರ್ ಸಿದ್ದಪಡಿಸಲಾಗುತ್ತಿದೆ. ಡಿ.ಪಿ.ಆರ್. ಪ್ರಕ್ರಿಯೆಯು ಪ್ರಗತಿಯಲ್ಲಿದೆ, ಅದು ಸಿದ್ದವಾದ ತಕ್ಷಣ ಭೂ ಸ್ವಾಧೀನ ಪ್ರಕ್ರಿಯೆಯನ್ನು ಆರಂಭಿಸಿ, ಸದ್ಯದಲ್ಲೇ ಯೋಜನೆಯನ್ನು ಪೂರ್ಣಗೊಳಿಸಲು ಕಾಲಮಿತಿಯನ್ನು ನಿಗಧಿಪಡಿಸಲಾಗುವುದು ಎಂದು ಉತ್ತರಿಸಿ ಭರವಸೆ ನೀಡಿದರು.


Spread the love

About Laxminews 24x7

Check Also

ಮುಂಬೈ-ಪುಣೆ ಹೆದ್ದಾರಿಯಲ್ಲಿ ಹೊತ್ತಿ ಉರಿದ ಐಷಾರಾಮಿ ಬಸ್

Spread the love ಮುಂಬೈ : ಮುಂಬೈ-ಪುಣೆ ಎಕ್ಸ್ಪ್ರೆಸ್ವೇಯಲ್ಲಿ ಶನಿವಾರ ಬೆಳಿಗ್ಗೆ ಖಾಸಗಿ ಐಷಾರಾಮಿ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದರಲ್ಲಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ