Breaking News

ಪಾಲಿಕೆಯ 92.32. ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ

Spread the love

ಬೆಳಗಾವಿ :ಇಲ್ಲಿನ ಮಹಾನಗರ ಪಾಲಿಕೆಯು 2026-27ನೇ ಸಾಲಿನಲ್ಲಿ 92.32. ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದೆ. ಒಟ್ಟು  442.54 ಕೋಟಿ ರೂ. ಆದಾಯ ನಿರೀಕ್ಷಿಸಿದ್ದು, ಅಭಿವೃದ್ಧಿಗಾಗಿ 441.62 ಕೋಟಿ ರೂ. ವೆಚ್ಚ ಮಾಡಲಿದೆ.
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಬುಧವಾರ ಮೇಯರ್ ಮಂಗೇಶ ಪವಾರ್  ಕರೆದಿದ್ದ ವಿಶೇಷ ಪರಿಷತ್ ಸಭೆಯಲ್ಲಿ  ವಾರ್ಷಿಕ ಬಜೆಟ್ ಮಂಡಿಸಿದ  ಸ್ಥಾಯಿ ಸಮಿತಿ ಅಧ್ಯಕ್ಷೆ ರೇಖಾ ಹೂಗಾರ ವಿವಿಧ ತೆರಿಗೆ ಆದಾಯ. 15 ಮತ್ತು 16ನೇ ಹಣಕಾಸು ಆಯೋಗ, ಕೇಂದ್ರ, ರಾಜ್ಯ ಸರ್ಕಾರದ ವಿವಿಧ ಯೋಜನೆಯಡಿ ವಿಶೇಷ ಅನುದಾನ ನಿರೀಕ್ಷೆ ಆಧಾರದ ಮೇಲೆ   ಪ್ರಸಕ್ತ ಸಾಲಿನ  ಅಂದಾಜು ಆಯವ್ಯಯ ಮಂಡಿಸಿದರು.
ಕೇಂದ್ರದ ಸಿಟೀಸ್-2 ಯೋಜನೆಗೆ 5 ಕೋಟಿ ರೂ., ಎಸ್‌ಸಿ,ಎಸ್‌ಟಿ ವರ್ಗ, ಮಹಿಳೆಯರು, ಪೌರ ಕಾರ್ಮಿಕರಿಗೆ, ಪಾಲಿಕೆ ಸಿಬ್ಬಂದಿಗೆ ಆರೋಗ್ಯ ವಿಮೆ, ಉಪಹಾರ ವ್ಯವಸ್ಥೆ,  ಸ್ವಚ್ಛ ನಗರ, ವೈಜ್ಞಾನಿಕ ಘನತ್ಯಾಜ್ಯ ವಿಲೇವಾರಿ ಹೀಗೆ ವಿವಿಧ  ಯೋಜನೆ ಕುರಿತು ಆಯವ್ಯಯದಲ್ಲಿ ಘೋಷಿಸಿದ್ದಾರೆ.  ಸರ್ಕಾರಿ ನಿಯಮಾವಳಿಯ ಪ್ರಕಾರ ಪರಿಸರ ಸ್ನೇಹಿ ಕಟ್ಟಡಗಳಿಗೆ, ಆಸ್ತಿ ತೆರಿಗೆಯಲ್ಲಿ ವಿನಾಯಿತಿ ಹಾಗೂ ಸ್ವಾತಂತ್ರ್ಯ ಯೋಧರಿಗೆ ಶೇ.10 ರಷ್ಟು ರಿಯಾಯಿತಿ ಈ ವರ್ಷವೂ ಮುಂದುವರಿಯಲಿದೆ.
 ಆಯವ್ಯಯದಲ್ಲಿ ಅಳವಡಿಸಿದ ಎಲ್ಲ ಕಾರ್ಯಕ್ರಮಗಳು ನಿಗಧಿತ ವೇಳೆಯಲ್ಲಿ ಅನುಷ್ಠಾನಗೊಳಿಸಲಾಗುವುದು. 2024-25 ನೇ ಸಾಲಿನಲ್ಲಿ ಬೆಳಗಾವಿ ನಗರದ ಸಮಗ್ರ ಮೂಲಭೂತ ಸೌಕರ್ಯಗಳನ್ನು ಹಾಗೂ ನಾಗರೀಕರ ನಿರೀಕ್ಷೆಯನ್ನು ತಲುಪಲು ಮತ್ತು ಅನುಷ್ಠಾನಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು  ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಅಧ್ಯಕ್ಷೆ ರೇಖಾ ಹೂಗಾರ ಭರವಸೆ ನೀಡಿದರು.
ಮೇಯರ್ ಮಂಗೇಶ ಪವಾರ್, ಉಪಮೇಯರ್ ವಾಣಿ ಜೋಶಿ, ಆಯುಕ್ತ ಕಾರ್ತಿಕ್ ಎಂ., ಆಡಳಿತ ಪಕ್ಷದ ನಾಯಕ ಹಣಮಂತ ಕೊಂಗಾಲಿ, ಉಪ ಆಯುಕ್ತರಾದ ಉದಯಕುಮಾರ ತಳವಾರ, ಡಾ.ಸಿದ್ದಪ್ಪ ಹುಲ್ಲೋಳಿ ಇತರರಿದ್ದರು.

Spread the love

About Laxminews 24x7

Check Also

ಸುವರ್ಣ ಘಳಿಗೆಯಲ್ಲಿ ಜೀವ ಉಳಿಸುವುದು ಮಹತ್ಕಾರ್ಯ

Spread the loveಬೆಳಗಾವಿ: ಅಫಘಾತದ ಸಂದರ್ಭದಲ್ಲಿ ರಕ್ತಸ್ರಾವ ಅಧಿಕವಾಗುವುದರಿಂದ ಸುವರ್ಣ ಘಳಿಗೆಯಲ್ಲಿ ವೈದ್ಯರು ಕಾರ್ಯಪ್ರವೃತ್ತರಾಗುವುದು ಬಹಳ ಮುಖ್ಯ. ವೈಜ್ಞಾನಿಕವಾಗಿ ವೈದ್ಯಕೀಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ