Home / ಜಿಲ್ಲೆ / ಕೊರೋನಾ ಲಾಕ್ ಡೌನ್ ; ಬೀದಿಗೆ ಬಿದ್ದ ದಿನಗೂಲಿ ಕಾರ್ಮಿಕರು

ಕೊರೋನಾ ಲಾಕ್ ಡೌನ್ ; ಬೀದಿಗೆ ಬಿದ್ದ ದಿನಗೂಲಿ ಕಾರ್ಮಿಕರು

Spread the love

ರಾಮನಗರ(ಮಾ.25): ವಿಶ್ವದೆಲ್ಲೆಡೆ ಕೊರೋನಾ ಭೀತಿಗೆ ಎಲ್ಲಾ ವ್ಯವಹಾರ, ವ್ಯಾಪಾರ, ವಹಿವಾಟು ಸಂಪೂರ್ಣ ಸ್ಥಗಿತವಾಗಿದೆ. ಶೇರು ಮಾರುಕಟ್ಟೆಯಲ್ಲೂ ಕೂಡ ಸೆನ್ಸೆಕ್ಸ್ ಊಹಿಸಲಾಗದ ಮಟ್ಟಕ್ಕೆ ಕುಸಿದಿದೆ. ಆದರೆ ಕೊರೋನಾ ದಿಂದಾಗಿ ದಿನಗೂಲಿ ಕಾರ್ಮಿಕರ ಜೀವನವೂ ಬೀದಿಗೆ ಬಿದ್ದಿದೆ.

ರಾಮನಗರ – ಚನ್ನಪಟ್ಟಣ ನಗರದಲ್ಲಿ ಸರಿಸುಮಾರು 3 ಸಾವಿರಕ್ಕೂ ಹೆಚ್ಚು ಜನ ಉತ್ತರ ಕರ್ನಾಟಕ ಮೂಲದ ಕೂಲಿ ಕಾರ್ಮಿಕರು ವಾಸ ಮಾಡುತ್ತಿದ್ದಾರೆ. ಆದರೆ ಅವರೆಲ್ಲರ ಬದುಕು ಮಾತ್ರ ನಿಜಕ್ಕೂ ಶೋಚನೀಯವಾಗಿದೆ. ಪ್ರತಿ ಯುಗಾದಿ ಹಬ್ಬವನ್ನ ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದ ಇವರಿಗೆ ಈ ಬಾರಿಯ ಯುಗಾದಿ ಸೂತಕದ ವಾತವರಣ ತರಿಸಿದೆ.

ಇವರೆಲ್ಲರು ಮೂಲತ ಬಳ್ಳಾರಿ, ಕೊಪ್ಪಳ ಭಾಗದ ಜನರು. ಆದರೆ ಇಲ್ಲಿಗೆ ಬಂದು ದಿನಗೂಲಿ ಕೆಲಸ ಮಾಡಿ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಇರುವುದಕ್ಕೆ ತಾವೇ ಸಣ್ಣ ಟೆಂಟ್‌ಗಳನ್ನ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಾರೆ. ಆದರೆ ಕಳೆದ 15 ದಿನಗಳಿಂದ ಕೊರೋನಾ ಭೀತಿಯಿಂದಾಗಿ ಇವರ ಜೀವನ ಮಾತ್ರ ಸಂಪೂರ್ಣ ಬರಿದಾಗಿದೆ. ಕೊರೋನಾ ಕರ್ಪ್ಯೂಯಿಂದಾಗಿ ಎಲ್ಲಾ ಕೆಲಸಕಾರ್ಯಗಳು ಸ್ಥಗಿತವಾಗಿವೆ. ಹಾಗಾಗಿ ಇವರನ್ನ ಕೂಲಿಗೆ ಕರೆಯುತ್ತಿದ್ದವರು ಕೂಡ ಕಳೆದ 15 ದಿನಗಳಿಂದ ಕೂಲಿ ಕೆಲಸಕ್ಕೆ ಕರೆಯುತ್ತಿಲ್ಲ. ಹಾಗಾಗಿ ದಿನದ ಊಟಕ್ಕೂ ಸಹ ಸಂಕಷ್ಟದ

ದಿನವೊಂದಕ್ಕೆ ಪುರುಷ ಕೂಲಿ ಕಾರ್ಮಿಕನಿಗೆ 500, ಮಹಿಳಾ ಕೂಲಿಕಾರ್ಮಿಕಳಿಗೆ 400 ರೂಪಾಯಿ ಹಣ ಸಿಗುತ್ತಿತ್ತು. ಇದರಿಂದಾಗಿ ಜೀವನ ಉತ್ತಮವಾಗಿ ಸಾಗುತ್ತಿತ್ತು. ಆದರೆ ಕೊರೋನಾ ವೈರಸ್ ಭೀತಿಯಿಂದಾಗಿ ಕಳೆದ 15 ದಿನಗಳಿಂದ ಸಂಪೂರ್ಣವಾಗಿ ಕೂಲಿ ಕೆಲಸಗಾರರಿಗೆ ಗುತ್ತಿಗೆದಾರರು ಕೆಲಸಕ್ಕೆ ಕರೆಯುತ್ತಿಲ್ಲ. ಹಾಗಾಗಿ ನಮಗೆ ಈಗ ಬಹಳ ಕಷ್ಟವಾಗುತ್ತಿದೆ ಎನ್ನುತ್ತಾರೆ ಕೂಲಿ ಕಾರ್ಮಿಕರು.

ಒಟ್ಟಾರೆ ಕೊರೋನಾ ವೈರಸ್ ದೊಡ್ಡ ದೊಡ್ಡ ಉದ್ಯಮಕ್ಕೆ ನಷ್ಟ ತಂದಿಡುವ ಜೊತೆಗೆ ದಿನಗೂಲಿ ಕಾರ್ಮಿಕರ ಮೇಲೂ ತನ್ನ ರೌದ್ರ ನರ್ತನವನ್ನ ತೋರಿದೆ. ಆದರೆ ಮುಂದಿನ ದಿನಗಳಲ್ಲಿ ಇದು ಯಾವ ಹಂತಕ್ಕೆ ತಲುಪಲಿದೆ ಎಂಬುದನ್ನ ಕಾಲವೇ ಉತ್ತರಿಸಬೇಕಿದೆ.


Spread the love

About Laxminews 24x7

Check Also

ಕಾಂಗ್ರೆಸ್‌ ಗೆದ್ದರೆ ನಿಮ್ಮ ಮಂಗಳಸೂತ್ರ ಕಿತ್ತು ಮುಸ್ಲಿಮರಿಗೆ ಕೊಡುತ್ತೆ:ಮೋದಿ

Spread the love ಜೈಪುರ (ಏ.22): ‘ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸಂಪತ್ತಿನ ಸಮಾನ ಹಂಚಿಕೆ ಮಾಡಲಿದೆ’ ಎಂಬ ಆ ಪಕ್ಷದ ಭರವಸೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ