Breaking News
Home / Uncategorized / ಅಂತರರಾಜ್ಯ ಜಲವಿವಾದ ಸಂಬಂಧ ಫೆಬ್ರವರಿಯಲ್ಲಿ ವಿಪಕ್ಷ ನಾಯಕರ ಜೊತೆಗೆ ಸಭೆ: ಸಿಎಂ ಬೊಮ್ಮಾಯಿ

ಅಂತರರಾಜ್ಯ ಜಲವಿವಾದ ಸಂಬಂಧ ಫೆಬ್ರವರಿಯಲ್ಲಿ ವಿಪಕ್ಷ ನಾಯಕರ ಜೊತೆಗೆ ಸಭೆ: ಸಿಎಂ ಬೊಮ್ಮಾಯಿ

Spread the love

ಕೆಲ ನೀರಾವರಿ ಯೋಜನೆಗಳು ಪ್ರಮುಖ ಘಟ್ಟಗಳಲ್ಲಿ ಇರುವುದರಿಂದ ಮತ್ತೊಮ್ಮೆ ವಿರೋಧ ಪಕ್ಷಗಳ ನಾಯಕರ ಜೊತೆಗೆ ಸಮಾಲೋಚನೆ ಮಾಡಿ, ಕಾನೂನಿನ ಪರಿಣಿತರನ್ನು ಇಟ್ಟುಕೊಂಡು ಸಮಾಲೋಚನೆ ಮಾಡಿ, ಯಾವ ರೀತಿ ಮುಂದುವರಿಯಬೇಕು, ನಮ್ಮ ನಿಲುವುಗಳು ಏನಿರಬೇಕು ಎನ್ನುವ ಬಗ್ಗೆ ಸರ್ವಪಕ್ಷಗಳ ಸಭೆಯನ್ನು ಫೆಬ್ರವರಿ ಮೊದಲ ವಾರದಲ್ಲಿ ಕರೆಯುತ್ತೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.ಅಂತಾರಾಜ್ಯ ಜಲ ವಿವಾದಗಳ ಕುರಿತಂತೆ ಸಚಿವರು, ಕಾನೂನು ತಜ್ಞರು, ನೀರಾವರಿ ತಜ್ಞರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಿಎಂ ಬೊಮ್ಮಾಯಿ ಮಹತ್ವದ ಸಭೆ ನಡೆಸಿದರು. ಸಭೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಮುಖ್ಯಮಂತ್ರಿಗಳು ಅಂತರರಾಜ್ಯ ಜಲವಿವಾದಗಳ ಬಗ್ಗೆ ನಮ್ಮ ಕಾನೂನಿನ ವಿಭಾಗ ಪ್ರತಿನಿಧಿಸುವ ಹಿರಿಯ ನ್ಯಾಯವಾದಿಗಳ ಜೊತೆಗೆ ಜಲಸಂಪನ್ಮೂಲ ಸಚಿವರಾದಿಯಾಗಿ ಎಲ್ಲರ ಜೊತೆಗೆ ವಿಡಿಯೋ ಕಾನ್ಫರೆನ್ಸ ಸಭೆ ಮಾಡಿದ್ದೇವೆ. ಸಭೆಯಲ್ಲಿ ಕೃಷ್ಣಾ, ಕಾವೇರಿ ಜಲಾನಯನ ಪ್ರದೇಶದ ಯೋಜನೆಗಳು ಹಾಗೂ ಮಹದಾಯಿ ಯೋಜನೆಗಳ ಬಗ್ಗೆಯೂ ಚರ್ಚೆಯಾಗಿದೆ. ಕೋರ್ಟನಲ್ಲಿರುವ ಬೇರೆ ಬೇರೆ ಹಂತದಲ್ಲಿರುವ ಯೋಜನೆಗಳ ಬಗ್ಗೆಯೂ ಸುದೀರ್ಘವಾಗಿ ಚರ್ಚೆಯಾಗಿದೆ. ನ್ಯಾಯಾಧೀಶರು ಕೂಡ ಹಲವಾರು ವಿವರಗಳನ್ನು ಕೊಟ್ಟಿದ್ದಾರೆ. ಈ ಎಲ್ಲಾ ಜಲವಿವಾದದ ಬಗ್ಗೆ ಜನವರಿ ಅಂತ್ಯದೊಳಗೆ ಮತ್ತೊಂದು ವಿಡಿಯೋ ಕಾನ್ಫರೆನ್ಸ ಮಾಡಲಿದ್ದೇನೆ. ಹಲವಾರು ತಯಾರಿ ಮಾಡಿಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ ಎಂದರು.ಇನ್ನು ಫೆಬ್ರವರಿ ಮೊದಲನೇ ವಾರದಲ್ಲಿ ವಿಡಿಯೋ ಕಾನ್ಫರೆನ್ಸ ಮೂಲಕ ಸರ್ವಪಕ್ಷ ಸಭೆ ಕರೆಯುತ್ತೇನೆ. ಈ ವೇಳೆ ನ್ಯಾಯವಾದಿಗಳು, ಹಿರಿಯ ಸಚಿವರು, ಕಾನೂನು-ನೀರಾವರಿ ಸಚಿವರ ಸಮೇತವಾಗಿ, ವಿಧಾನಸಭೆ, ವಿಧಾನಪರಿಷತ್‍ನ ಪ್ರಮುಖ ನಾಯಕರನ್ನು ಸಭೆಯಲ್ಲಿ ಕರೆದು, ಕಾನೂನಿನ ಹೋರಾಟ ಎಲ್ಲಿಯವರೆಗೆ ನಡೆದಿದೆ, ಕೋರ್ಟನಲ್ಲಿ ಕೇಸ್‍ಗಳು ಏನಾಗಿವೆ, ನಾವೆಲ್ಲರೂ ಮುಂದೆ ಯಾವ ನಿಲುವನ್ನು ತೆಗೆದುಕೊಂಡು ರಾಜ್ಯದ ಹಿತದೃಷ್ಟಿಯಿಂದ ಯೋಜನೆಗಳನ್ನು ಸಾಕಾರಗೊಳಿಸಲು ನಾವು ಮುಂದುವರಿಯಬೇಕು ಎಂದು ನಿರ್ಧರಿಸಲಾಗುತ್ತದೆ. ಅದೇ ರೀತಿ ನಾವು ಹಿಂದೆ ವಿರೋಧ ಪಕ್ಷದಲ್ಲಿದ್ದಾಗ ನೆಲ, ಜಲದ ವಿಷಯ ಬಂದಾಗ ನಾವೆಲ್ಲಾ ಒಂದಾಗಿ ಕೆಲಸ ಮಾಡಿದ್ದೇವೆ, ಎಲ್ಲ ರೀತಿಯ ಸಹಕಾರ ಕೊಟ್ಟಿದ್ದೇವೆ ಎಂದರು.ನಮ್ಮ ನೀರಾವರಿ ಯೋಜನೆಗಳಿಗೆ ತಮಿಳುನಾಡು ಬಲವಾಗಿ ವಿರೋಧ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಯಿಸಿದ ಸಿಎಂ ಬೊಮ್ಮಾಯಿ ಒಂದು ಸರ್ಕಾರವಾಗಿ ಇಂತಹ ಹಲವಾರು ಸವಾಲುಗಳನ್ನು ಈ ಹಿಂದೆ ಎದುರಿಸಿದ್ದೇವೆ. ಹೊಗೇನಕಲ್ 2ನೇ ಯೋಜನೆ ಸೇರಿದಂತೆ ಇನ್ನೊಂದು ಕುಡಿಯುವ ನೀರಿನ ಯೋಜನೆ ಬಗ್ಗೆ ಸುಪ್ರೀಂಕೋರ್ಟನಲ್ಲಿ ವಿರೋಧ ಹಾಕಿದ್ದೇವೆ. ಹೊಗೇನಕಲ್ ಯೋಜನೆಗೆ ಎಲ್ಲ ರೀತಿಯಲ್ಲಿ ಕೇಂದ್ರ ಸರ್ಕಾರದಲ್ಲಿ ಯಾವುದೇ ರೀತಿ ಒಪ್ಪಿಗೆ ಕೊಡಬಾರದು, ಸಿಡಬ್ಲುಸಿಯಲ್ಲಿಯೂ ಒಪ್ಪಿಗೆ ಕೊಡಬಾರದು ಎಂದು ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ಹೋರಾಟವನ್ನು ಪ್ರಬಲವಾಗಿ ಮಾಡುತ್ತಿದ್ದೇವೆ ಎಂದರು.


Spread the love

About Laxminews 24x7

Check Also

ಕಾಂಗ್ರೆಸ್ ಶಾಸಕರದ್ದು ಎನ್ನಲಾದ ಅಶ್ಲೀಲ ವೀಡಿಯೋ ವೈರಲ್ ;

Spread the loveಬೆಂಗಳೂರು : ರಾಜ್ಯದ ಪ್ರಸ್ತುತ ಕಾಂಗ್ರೆಸ್ ಶಾಸಕರದ್ದು ಎನ್ನಲಾದ ಅಶ್ಲೀಲ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ