ಚಿಕ್ಕೋಡಿ: ಸ್ವಚ್ಛತೆ ಕಾಪಾಡದಿದ್ದರೆ ಒದ್ದು ಬಿಹಾರಕ್ಕೆ ಓಡಿಸುತ್ತೇನೆ ಎಂದು ಸ್ವಚ್ಛತಾ ನೌಕರರನ್ನು ಹುಕ್ಕೇರಿ ಶಾಸಕ ಉಮೇಶ್ ಕತ್ತಿ ತರಾಟೆಗೆ ತೆಗೆದುಕೊಂಡಿದ್ದರು.
ಬೆಳಗಾವಿ ಜಿಲ್ಲೆ ಹುಕ್ಕೇರಿ ಬಸ್ ನಿಲ್ದಾಣಕ್ಕೆ ಶಾಸಕ ಉಮೇಶ್ ಕತ್ತಿ ಧಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಸ್ ನಿಲ್ದಾಣದ ವ್ಯವಸ್ಥೆ ನೋಡಿ ಗರಂ ಆದ ಶಾಸಕ ಕತ್ತಿ ಅಧಿಕಾರಿಗಳನ್ನ ಹಾಗೂ ಸ್ವಚ್ಛತೆ ಮಾಡುತ್ತಿದ್ದ ಕಾರ್ಮಿಕರನ್ನ ತರಾಟೆಗೆ ತೆಗೆದುಕೊಂಡರು
ಸ್ವಚ್ಛತೆ ಕಾಪಾಡದಿದ್ದರೆ ಒದ್ದು ಬಿಹಾರಕ್ಕೆ ಓಡಿಸುತ್ತೇನೆ ಎಂದು ಸ್ವಚ್ಛತಾ ನೌಕರನನ್ನ ತೀವ್ರ ತರಾಟೆಗೆ ತೆಗೆದುಕೊಂಡರು. ಅಷ್ಟೇ ಅಲ್ಲದೇ ಬಸ್ ನಿಲ್ದಾಣದ ಅಸ್ವಚ್ಛತೆ ಕಂಡು ಸ್ವಚ್ಛತೆ ಕಾಪಾಡದ ಬಿಹಾರ ಮೂಲದ ಗುತ್ತಿಗೆದಾರನ ಲೈಸೆನ್ಸ್ ರದ್ದು ಮಾಡಲು ಸೂಚನೆ ನೀಡಿದರು. ಜೊತೆಗೆ ಸ್ಥಳೀಯರಿಗೆ ಸ್ವಚ್ಛತೆಯ ಗುತ್ತಿಗೆ ನೀಡುವಂತೆ ಒತ್ತಾಯಿಸಿದರು.
ಬಸ್ ನಿಲ್ದಾಣದಲ್ಲಿ ವೃದ್ಧರು ಹಾಗೂ ಹಿರಿಯರಿಗೆ ಅನುಕೂಲವಾಗುವ ಆಸನಗಳ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಸಂಕೇಶ್ವರ ಡಿಪೋ ಮ್ಯಾನೇಜರ್ ನಾಡಗೌಡ, ಬಿಜೆಪಿ ಮುಖಂಡರಾದ ಗುರು ಕುಲಕರ್ಣಿ, ಸದಾ ಮರಬಸ್ಸನವರ, ರಾಜು ಮುನ್ನೋಳಿ, ಶೇಖರ್ ತರೀಕರ ಸೇರಿದಂತೆ ಹಲವರು ಹಾಜರಿದ್ದರು