Breaking News
Home / ಜಿಲ್ಲೆ / ಕೇಂದ್ರ ಬಜೆಟ್ ನಲ್ಲಿ ಬೆಳಗಾವಿ-ಧಾರವಾಡ ರೈಲು ಯೋಜನೆಗೆ ಅಸ್ತು

ಕೇಂದ್ರ ಬಜೆಟ್ ನಲ್ಲಿ ಬೆಳಗಾವಿ-ಧಾರವಾಡ ರೈಲು ಯೋಜನೆಗೆ ಅಸ್ತು

Spread the love

ಬೆಳಗಾವಿಬೆಳಗಾವಿ-ಧಾರವಾಡ ನಡುವೆ ನೇರ ರೈಲು ಓಡಿಸಬೇಕು ಎನ್ನುವ ಹಲವು ದಶಕಗಳ ಬೇಡಿಕೆ ಸಾಕಾರಗೊಳ್ಳುವ ಕಾಲ ಈಗ ಕೂಡಿ ಬಂದಿದೆ. ಸೋಮವಾರ ಲೋಕಸಭೆಯಲ್ಲಿ ಮಂಡಿಸಿದ ಕೇಂದ್ರ ಬಜೆಟ್ ನಲ್ಲಿ ಹಣಕಾಸು ಸಚಿವೆ ನಿಮ೯ಲಾ ಸೀತಾರಾಮನ್ ಅವರು ಈ ಯೋಜನೆಗಾಗಿ ರೂ.988 ಕೋಟಿ ಅನುದಾನವನ್ನು ನೀಡಲು ಒಪ್ಪಿಗೆ ಸೂಚಿಸಿದ್ದು, ಈ ಮೂಲಕ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಜನರ ಹಲವಾರು ವಷ೯ಗಳ ಕನಸು ನನಸಾಗಲು ಹಸಿರು ನಿಶಾನೆ ತೋರಿದ್ದಾರೆ.

ತಿಂಗಳ ಹಿಂದಷ್ಟೇ ನೈರುತ್ಯ ರೇಲ್ವೆ ವಲಯವು ಒಟ್ಟು ರೂ.988.30 ಕೋಟಿ ಅಂದಾಜು ವೆಚ್ಚದ ಯೋಜನಾ ವರದಿ ತಯಾರಿಸಿ ಕೇಂದ್ರ ಕಚೇರಿಗೆ ಕಳಿಸಿಕೊಟ್ಟಿತ್ತು. ಬೆಳಗಾವಿ ಸಂಸದರಾಗಿರುವ ಸುರೇಶ ಅಂಗಡಿ ಅವರು ಈಗ ಕೇಂದ್ರದಲ್ಲಿ ರೇಲ್ವೆ ಇಲಾಖೆಯ ರಾಜ್ಯ ಸಚಿವರಾಗಿದ್ದರಿಂದ ಯೋಜನೆಗೆ ೨೦೨೦-೨೧ ನೇ ಸಾಲಿನ ಬಜೆಟ್ ನಲ್ಲಿ ಮಂಜೂರಾತಿ ಸಿಗುವ ನಿರೀಕ್ಷೆ ಇತ್ತು. ಜನರ ನಿರೀಕ್ಷೆ ಸುಳ್ಳಾಗಿಲ್ಲ.

‘ಟುಡೆ ಬ್ರೆಕಿಂಗ್ಸ್’ ನೊಂದಿಗೆ ಮಾತನಾಡಿದ ಸುರೇಶ ಅಂಗಡಿ ಅವರು ‘ಯೋಜನೆಗೆ ಕೇಂದ್ರ ಬಜೆಟ್ ನಲ್ಲಿ ಮಂಜೂರಾತಿ ಸಿಕ್ಕಿದೆ. ಹೀಗಾಗಿ ಶೀಘ್ರವೇ ಕಾಮಗಾರಿ ಆರಂಭಗೊಳ್ಳಲಿದೆ. ಆದಷ್ಟು ಕಡಿಮೆ ಸಮಯದಲ್ಲಿ ಈ ಯೋಜನೆಯನ್ನು ಪೂಣ೯ಗೊಳಿಸಲಾಗುವುದು. ಒಳ್ಳೆಯ ಕೆಲಸಗಳನ್ನು ಮಾಡಲು ನನಗೊಂದು ಅವಕಾಶವಿದೆ. ಅವಕಾಶವನ್ನು ಪ್ರಾಮಾಣಿಕವಾಗಿ ಬಳಸಿಕೊಂಡ ಸಂತೃಪ್ತಿ ನನ್ನಲ್ಲಿದೆ” ಎಂದು ಅವರು ಹೇಳಿದರು.

ರೈಲು ಮಾಗ೯ ನಿಮಾ೯ಣಕ್ಕೆ ಸಂಬಂಧಿಸಿದಂತೆ ಕನಾ೯ಟಕ ರೇಲ್ವೆ ಮೂಲಸೌಕಯ೯ ಅಭಿವೃದ್ಧಿ ಕಂಪೆನೆ (ಕೆ-ರೈಡ್) ಕಳೆದ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಸ್ಥಳ ಸಮೀಕ್ಷೆ ನಡೆಸಿತ್ತು. ಸಮೀಕ್ಷೆಯಲ್ಲಿ 73.10 ಕಿ.ಮೀ.ನ ಈ ಯೋಜನೆಗೆ, ಸೇತುವೆಗಳೂ ಸೇರಿದಂತೆ ರೂ.988 ಕೋಟಿ ವೆಚ್ಚವನ್ನು ಅಂದಾಜು ಮಾಡಲಾಗಿತ್ತು. ರೈಲು ಧಾರವಾಡದಿಂದ ಕ್ಯಾರಕೊಪ್ಪ, ಕಿತ್ತೂರ, ಹಿರೆಬಾಗೇವಾಡಿ, ಎಂ.ಕೆ.ಹುಬ್ಬಳ್ಳಿ, ಕೆ.ಕೆ.ಕೊಪ್ಪ, ಯಳ್ಳೂರ ಮಾಗ೯ವಾಗಿ ಬೆಳಗಾವಿ ತಲುಪಲಿದೆ.

ಸುರೇಶ ಅಂಗಡಿ ಅವರು ಮುತುವಜಿ೯ ವಹಿಸಿದ ಹಿನ್ನೆಲೆಯಲ್ಲಿ ತ್ವರಿತ ಗತಿಯಲ್ಲಿ ಸಮೀಕ್ಷೆ ಕಾಯ೯ ನಡೆದು, ವಿಸ್ತ್ರತ ವರದಿಯು ರೇಲ್ವೆ ಇಲಾಖೆಗೆ ಸಲ್ಲಿಕೆಯಾಗಿತ್ತು. ಅನುಮೋದನೆಗೆ ಬೇಕಾದ ಎಲ್ಲ ಪ್ರಕ್ರಿಯೆಗಳನ್ನೂ ಅಂಗಡಿ ಅವರು ಪೂರೈಸಿದ್ದರು.

ಯೋಜನೆಯ ಮಾಗ೯ದಲ್ಲಿ 11 ರೇಲ್ವೆ ನಿಲ್ದಾಣಗಳನ್ನು ನಿಮಿ೯ಸಲು ಸ್ಥಳ ಗುರುತಿಸಲಾಗಿದೆ. ಮಾಗ೯ಮಧ್ಯೆ ಒಟ್ಟು 140 ಬ್ರಿಡ್ಜ್ ಗಳು ನಿಮಾ೯ಣವಾಗಲಿದ್ದು, ಅವುಗಳಲ್ಲಿ 15 ಮೇಲ್ಸೇತುವೆಗಳು ಸೇರಿಕೊಂಡಿವೆ.


Spread the love

About Laxminews 24x7

Check Also

ಇಂದು, ನಾಳೆ ಬೆಂಗಳೂರಿನಲ್ಲಿ ಅಮಿತ್‌ ಶಾ, ಯೋಗಿ ರೋಡ್‌ ಶೋ

Spread the loveಬೆಂಗಳೂರು: ಮೊದಲನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಕ್ಕೆ ದಿನಗಣನೆ ಪ್ರಾರಂಭವಾಗಿದ್ದು ಕೇಂದ್ರ ಗೃಹ ಸಚಿವ ಅಮಿತ್‌ ಶಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ