Breaking News
Home / Uncategorized (page 608)

Uncategorized

ವ್ಯಕ್ತಿ ಬಂಧನ: 15 ದ್ವಿಚಕ್ರವಾಹನ ವಶಕ್ಕೆ

ಅಥಣಿ: ದ್ವಿಚಕ್ರ ವಾಹನಗಳ ಕಳವು ಆರೋಪದ ಮೇಲೆ ಇಲ್ಲಿನ ಪೊಲೀಸರು ವ್ಯಕ್ತಿಯೊಬ್ಬರನ್ನು ಗುರುವಾರ ಬಂಧಿಸಿದ್ದಾರೆ. ತಾಲ್ಲೂಕಿನ ಶಿರಹಟ್ಟಿಯ ರಮಜಾನ ಹುಸೇನಸಾಬ ಐನಾಪುರ (27) ಬಂಧಿತ. ‘ಜಿಲ್ಲೆ, ಬಾಗಲಕೋಟೆ ಹಾಗೂ ನೆರೆಯ ಮಹಾರಾಷ್ಟ್ರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳವಾದ ₹ 5 ಲಕ್ಷ ಮೌಲ್ಯದ 15 ದ್ವಿಚಕ್ರವಾಹನಗಳನ್ನು ಆರೋಪಿಯಿಂದ ಜಪ್ತಿ ಮಾಡಲಾಗಿದೆ. ಪ್ರಕರಣ ದಾಖಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಪಟ್ಟಣ ಹಾಗೂ ತಾಲ್ಲೂಕಿನಾದ್ಯಂತ ದ್ವಿಚಕ್ರವಾಹನಗಳ ಕಳವು ಪ್ರಕರಣ ಹೆಚ್ಚುತ್ತಿದ್ದುದ್ದರಿಂದ ಡಿಎಸ್‌ಪಿ ಎಸ್.ವಿ. …

Read More »

ದಿನ ಭವಿಷ್ಯ: ಈ ರಾಶಿಯವರಿಗೆ ಕೆಲಸದಲ್ಲಿ ಕೊಂಚ ಹಿನ್ನಡೆ, ಈಶ್ವರ ಪ್ರಾರ್ಥನೆ ಮಾಡಿ

ಮೇಷ: ಶುಭಾಶುಭ ಮಿಶ್ರಫಲವಿದೆ, ಮಾತಿನ ವಿಚಾರದಲ್ಲಿ ಎಚ್ಚರವಾಗಿರಿ, ಪತ್ರಿಕೆಗಳಲ್ಲಿರುವವರಿಗೆ ಕೊಂಚ ಅಸಮಧಾನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ ವೃಷಭ: ಆರೋಗ್ಯದಲ್ಲಿ ವ್ಯತ್ಯಾಸ, ಧನ ಸಮೃದ್ಧಿ, ಬೇಡದ ಆಲೋಚನೆಗಳು, ಕೃಷಿಕರಿಗೆ ಉತ್ತಮ ದಿನ, ಕೃಷ್ಣ ಪ್ರಾರ್ಥನೆ ಮಾಡಿ ಮಿಥುನ: ಶುಭಯೋಗವಿದೆ, ಸ್ತ್ರೀಯರಿಗೆ ಪ್ರಮುಖದಿನ, ದುರ್ಜನರ ಸಹವಾಸ ಬೇಡ, ಅಮ್ಮನವರ ಪ್ರಾರ್ಥನೆ ಮಾಡಿ ಕಟಕ: ಕುಟುಂಬ ಪೋಷಣೆ, ದ್ರವ ವ್ಯಾಪಾರಿಗಳಿಗೆ ಲಾಭ, ಕೃಷಿಕರಿಗೆ ಶುಭದಿನ, ಮನೆ ದೇವರ ಪ್ರಾರ್ಥನೆ ಮಾಡಿ ಸಿಂಹ: ಹಣನಷ್ಟ, ಆರೋಗ್ಯದಲ್ಲಿ ಏರುಪೇರು, ಮೃತ್ಯುಂಜಯ ಮಂತ್ರ ಪಠಿಸಿ, ಆದಿತ್ಯ …

Read More »

ದೇಶದಲ್ಲಿ ಗುರುವಾರ ದಾಖಲೆಯ 85982 ಕೊರೋನಾ ಕೇಸ್ ಪತ್ತೆ..!

ನವದೆಹಲಿ : ದೇಶದಲ್ಲಿ ಕೊರೋನಾ ವೈರಸ್‌ ಪ್ರಕರಣಗಳು ಮತ್ತೊಮ್ಮೆ ದಾಖಲೆಯ ಏರಿಕೆ ಕಂಡಿವೆ. ಗುರುವಾರ ದಾಖಲೆಯ 85,982 ಸೋಂಕಿತರು ಪತ್ತೆಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ 39.23 ಲಕ್ಷಕ್ಕೆ ಹೆಚ್ಚಳಗೊಂಡಿದೆ. ಈ ಮೂಲಕ ಭಾರತ ಅತಿ ಹೆಚ್ಚು ಕೊರೋನಾ ವೈರಸ್‌ ಪ್ರಕರಣ ದಾಖಲಾದ ದೇಶಗಳ ಪೈಕಿ 2ನೇ ಸ್ಥಾನದಲ್ಲಿರುವ ಬ್ರೆಜಿಲ್‌ (40.01 ಲಕ್ಷ ಕೇಸ್‌) ಅನ್ನು ಹಿಂದಿಕ್ಕುವ ಸನಿಹದಲ್ಲಿದೆ. 62.90 ಲಕ್ಷ ಸೋಂಕಿತರೊಂದಿಗೆ ಅಮೆರಿಕ ಮೊದಲ ಸ್ಥಾನದಲ್ಲಿದೆ. ಇದೇ …

Read More »

ಡ್ರಗ್ಸ್‌ ದೊರೆತರೆ ಅಧಿಕಾರಿಗಳೇ ಹೊಣೆ: ರವಿ ಡಿ ಚನ್ನಣ್ಣನವರ್‌

ಆನೇಕಲ್‌ : ತಾಲೂಕಿನ 3 ಠಾಣಾ ವ್ಯಾಪ್ತಿಗಳು ಗಡಿ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಹೊರ ರಾಜ್ಯಗಳಿಂದ ರಾಜ್ಯ ಪ್ರವೇಶಿಸುವ ಪ್ರತಿಯೊಬ್ಬರ ಮೇಲೂ ಹದ್ದಿನ ಕಣ್ಣಿರಿಸಬೇಕು. ಸಣ್ಣ ಪ್ರಮಾಣದ ಸರಕು ದೊರೆತರೂ ಆಯಾ ಠಾಣಾ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ ಚನ್ನಣ್ಣನವರ್‌ ಎಚ್ಚರಿಕೆ ನೀಡಿದ್ದಾರೆ. ಹೆಬ್ಬಗೋಡಿ ಡಿವೈಎಸ್ಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳ ಉದ್ದೇಶಿಸಿ ಮಾತನಾಡಿದ ಅವರು, ಅತ್ತಿಬೆಲೆ, ಸರ್ಜಾಪುರ ಹಾಗೂ ಆನೇಕಲ್‌ ಠಾಣಾ ವ್ಯಾಪ್ತಿಯ ಮೂಲಕ …

Read More »

ನೇಮಕಾತಿಯಲ್ಲಿ ಅಕ್ರಮ ಆರೋಪ: ಸಿಎಂ ಕಚೇರಿ ಎದುರು ಸ್ಟಾಫ್‌ ನರ್ಸ್‌ಗಳ ಕಣ್ಣೀರು

ಬೆಂಗಳೂರು: ಸ್ಟಾಫ್‌ ನರ್ಸ್‌ ನೇಮಕಾತಿಯಲ್ಲಿ ಅಕ್ರಮವಾಗಿ ನಡೆದಿದೆ ಎಂದು ಆರೋಪಿಸಿ ಗುತ್ತಿಗೆ ಆಧಾರಿತ ಸ್ಟಾಫ್‌ ನರ್ಸ್‌ಗಳು ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ ಎದುರು ಕಣ್ಣೀರಿಟ್ಟ ಘಟನೆ ಗುರುವಾರ ಜರುಗಿದೆ. ಸುಮಾರು 20 ಮಂದಿ ಸ್ಟಾಫ್ಟ್‌ ನರ್ಸ್‌ಗಳು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಭೇಟಿಗಾಗಿ ಗೃಹ ಕಚೇರಿ ಬಳಿ ಬಂದಿದ್ದರು. ಈ ವೇಳೆ ಅವರನ್ನು ಗೇಟ್‌ ಬಳಿಯ ತಡೆದ ಪೊಲೀಸರು ಮುಖ್ಯಮಂತ್ರಿ ಭೇಟಿಗೆ ಅವಕಾಶ ನಿರಾಕರಿಸಿದರು. ಇದರಿಂದ ಭಾವುಕಾರದ ಸ್ಟಾಫ್‌ ನರ್ಸ್‌ಗಳು, ಕೋವಿಡ್‌ …

Read More »

ವೃದ್ಧೆಯ ಉಸಿರುಗಟ್ಟಿಸಿ ಕೊಲೆಗೈದು ಚಿನ್ನಾಭರಣ ಲೂಟಿ

ಬೆಂಗಳೂರು : ವೃದ್ಧೆಯೊಬ್ಬರನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿರುವ ಘಟನೆ ಬಾಣಸವಾಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ರಾಮಸ್ವಾಮಿ ಪಾಳ್ಯದಲ್ಲಿ ಬುಧವಾರ ನಡೆದಿದೆ. ರಾಮಸ್ವಾಮಿಪಾಳ್ಯ ನಿವಾಸಿ ಕಾಂತಮ್ಮ (70) ಕೊಲೆಯಾದವರು. ಕಾಂತಮ್ಮ ಅವರ ಮೈ ಮೇಲಿದ್ದ ಚಿನ್ನಾಭರಣವನ್ನು ದುಷ್ಕರ್ಮಿಗಳು ಕಳವು ಮಾಡಿದ್ದು, ಪರಿಚಯಸ್ಥರೇ ಕೃತ್ಯ ಎಸಗಿರುವ ಸಾಧ್ಯತೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಕಾಂತಮ್ಮ ಅವರಿಗೆ ಐವರು ಮಕ್ಕಳಿದ್ದು, ಮಾನಸಿಕ ಅಸ್ವಸ್ಥ ಪುತ್ರಿ ಜತೆ ರಾಮಸ್ವಾಮಿ ಪಾಳ್ಯದಲ್ಲಿ ವಾಸವಿದ್ದರು. ಉಳಿದ ಮಕ್ಕಳು …

Read More »

ನಟಿ ರಾಗಿಣಿಗೆ ಮತ್ತೆ ಸಿಸಿಬಿ ನೋಟಿಸ್; ಇಂದು ಹಾಜರಾಗದಿದ್ದರೆ ಬಂಧನ..?

ಬೆಂಗಳೂರು : ಕನ್ನಡ ಚಲನಚಿತ್ರ ರಂಗಕ್ಕೆ ಮಾದಕ ವಸ್ತು ಮಾರಾಟ ಜಾಲದ ನಂಟಿನ ಪ್ರಕರಣದಲ್ಲಿ ತಮ್ಮ ಆಪ್ತ ಗೆಳೆಯನ ಬಂಧನ ಬೆನ್ನೆಲ್ಲೇ ಖ್ಯಾತ ನಟಿ ರಾಗಿಣಿ ದ್ವಿವೇದಿ ಅವರಿಗೂ ಬಂಧನ ಭೀತಿ ಶುರುವಾಗಿದೆ. ಈ ಪ್ರಕರಣ ಸಂಬಂಧ ನೋಟಿಸ್‌ ನೀಡಿದ್ದರೂ ಗುರುವಾರ ರಾಗಿಣಿ ಸಿಸಿಬಿ ವಿಚಾರಣೆಗೆ ಗೈರಾಗಿದ್ದಾರೆ. ವೈಯಕ್ತಿಕ ಕಾರಣ ನೀಡಿದ ಗೈರಾಗಿರುವ ನಟಿ, ಸೋಮವಾರ ವಿಚಾರಣೆಗೆ ಬರಲು ಬದ್ಧರಾಗಿರುವುದಾಗಿ ಟ್ವೀಟ್‌ ಮಾಡಿದ್ದಾರೆ. ಆದರೆ ಇದಕ್ಕೆ ಒಪ್ಪದ ಸಿಸಿಬಿ, 2ನೇ …

Read More »

4 ಐಪಿಎಸ್‌, 2 ಐಎಎಸ್‌ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು  : ನಾಲ್ವರು ಐಪಿಎಸ್‌ ಹಾಗೂ ಇಬ್ಬರು ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. ಆಯಂಬಿಡೆಂಟ್‌ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಬಂಧಿಸಿದ್ದ ಎಸ್‌.ಗಿರೀಶ್‌ ಅವರನ್ನು ರಾಮನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಉಳಿದಂತೆ ಸಿ.ಕೆ.ಬಾಬಾ ಬೆಂಗಳೂರು ಈಶಾನ್ಯ ಡಿಸಿಪಿ, ಡಾ.ಭೀಮಾಶಂಕರ್‌ ಎಸ್‌.ಗುಳೇದ್‌ ಬೆಂಗಳೂರು ಸಿಐಡಿ ಬೆಂಗಳೂರು ಎಸ್‌ಪಿ ಹಾಗೂ ಡಾ.ಅನೂಪ್‌ ಶೆಟ್ಟಿಅವರನ್ನು ಕೆಎಸ್‌ಆರ್‌ಪಿ ಕಮಾಂಡೆಂಟ್‌ ಆಗಿ ವರ್ಗಾವಣೆ ಮಾಡಲಾಗಿದೆ. …

Read More »

ಸಾಲ ಮರುಹೊಂದಾಣಿಕೆ: ಸೆ. 15ರೊಳಗೆ ಜಾರಿಗೆ ಸೂಚನೆ

ನವದೆಹಲಿ: ಕೋವಿಡ್‌-19 ಸಾಂಕ್ರಾಮಿಕದ ಪರಿಣಾಮವಾಗಿ, ಸಾಲ ಮರುಪಾವತಿಯಲ್ಲಿ ತೊಂದರೆ ಎದುರಿಸುತ್ತಿರುವವರಿಗೆ ಸಾಲ ಮರುಹೊಂದಾಣಿಕೆಯ ಸೌಲಭ್ಯವನ್ನು ಸೆಪ್ಟೆಂಬರ್‌ 15ಕ್ಕೆ ಮೊದಲು ನೀಡುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬ್ಯಾಂಕುಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (ಎನ್‌ಬಿಎಫ್‌ಸಿ) ಸೂಚಿಸಿದ್ದಾರೆ. ನಿರ್ಮಲಾ ಅವರು ಬ್ಯಾಂಕುಗಳು ಹಾಗೂ ಎನ್‌ಬಿಎಫ್‌ಸಿ ಪ್ರತಿನಿಧಿಗಳ ಜೊತೆ ಗುರುವಾರ ಸಭೆ ನಡೆಸಿದರು. ಆಡಳಿತ ಮಂಡಳಿಯಿಂದ ಅನುಮೋದನೆ ಪಡೆದಿರುವ ಸಾಲ ಮರುಹೊಂದಾಣಿಕೆಯ ಸೌಲಭ್ಯವನ್ನು ತಕ್ಷಣ ಕಲ್ಪಿಸಬೇಕು ಎಂದು ಸೂಚಿಸಿದರು. ಸಾಲದ …

Read More »

ಭಾರತ-ರಷ್ಯಾ ನಡುವೆ ಎಕೆ-47 203 ರೈಫಲ್‌ ಒಪ್ಪಂದ ಅಂತಿಮ

ಮಾಸ್ಕೊ: ಭಾರತದಲ್ಲೇ ಎ.ಕೆ.-47 ರೈಫಲ್‌ನ ಅತ್ಯಾಧುನಿಕ ಮಾದರಿ ಆಗಿರುವ ಎ.ಕೆ.-47 203 ಉತ್ಪಾದನೆಯ ಪ್ರಮುಖ ಒಪ್ಪಂದವನ್ನು ರಕ್ಷಣಾ ಸಚಿವ ರಾಜ‌ನಾಥ್‌ ಸಿಂಗ್‌ ಭೇಟಿ ವೇಳೆ ಭಾರತ ಹಾಗೂ ರಷ್ಯಾ ಗುರುವಾರ ಅಂತಿಮಗೊಳಿಸಿದೆ. 1996 ರಿಂದ ಭಾರತೀಯ ಸೇನೆಯ ಬಳಿ ಇರುವಂಥ ಇನ್ಸಾಸ್ ರೈಫಲ್‌ಗಳ ಬದಲಾಗಿ ಎ.ಕೆ.-47 203 ರೈಫಲ್‌ಗಳನ್ನು ಬಳಸಲು ಭಾರತ ನಿರ್ಧರಿಸಿದೆ. ಭಾರತಕ್ಕೆ 7,70,000 ಎಕೆ-47 203 ರೈಫಲ್‌ಗಳ ಅಗತ್ಯ ಇದ್ದು, ಈ ಪೈಕಿ 1 ಲಕ್ಷ ರೈಫಲ್‌ಗಳನ್ನು ಆಮದು …

Read More »