Home / ರಾಜ್ಯ (page 21)

ರಾಜ್ಯ

ಕಳ್ಳನ ಬಂಧನ: 3 ಲಕ್ಷ ರೂ. ಮೌಲ್ಯದ ಸೊತ್ತುಗಳ ವಶ

ಸುರತ್ಕಲ್‌: ಇಲ್ಲಿನ ಮುಂಚೂರು ಸಮೀಪ ರೈಲ್ವೇ ಹಳಿ ಬಳಿಯ ಬಾಡಿಗೆ ಮನೆಯೊಂದರಿಂದ ನಗದು ಸಹಿತ ಚಿನ್ನ, ಬೆಳ್ಳಿಯ ಸೊತ್ತುಗಳನ್ನು ಕಳವುಗೈದಿದ್ದ ಆರೋಪಿಯನ್ನು 24 ಗಂಟೆಯಲ್ಲೇ ಪೊಲೀಸರು ಬಂಧಿಸಿದ್ದಾರೆ. ಹೊಸಕೋಟೆ ನಿವಾಸಿ ಜಂಬಯ್ಯ (24) ಬಂಧಿತ ಆರೋಪಿ. ಈತ ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ಮೊಬೈಲ್‌ ಅನ್ನು ವಶಕ್ಕೆ ಪಡೆಯಲಾಗಿದೆ.

Read More »

ಜಿಲ್ಲೆಯ ವಿವಿಧೆಡೆ ಮಳೆ: ಕಾರಿನ ಮೇಲೆ ಬಿದ್ದ ಮರ

ಬೆಳಗಾವಿ: ನಗರ ಹಾಗೂ ತಾಲ್ಲೂಕಿನ ವಿವಿಧೆಡೆ ಶುಕ್ರವಾರ ಒಂದು ತಾಸಿನವರೆಗೆ ಉತ್ತಮ ಮಳೆ ಸುರಿಯಿತು. ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಸಂಜೆ 5ರ ಸುಮಾರಿಗೆ ಆರಂಭವಾದ ಮಳೆ ಗುಡುಗು- ಮಿಂಚಿನ ಜತೆಗೆ ಸುರಿಯಿತು. ಇಲ್ಲಿನ ಅನಗೋಳ ಪ್ರದೇಶದಲ್ಲಿರುವ ಸಂತ ಮೀರಾ ಶಾಲೆಯ ಬಳಿ ಮಳೆ, ಗಾಳಿಯ ರಭಸಕ್ಕೆ ಮರವೊಂದು ಬುಡಸಮೇತ ಕಿತ್ತು ಕಾರಿನ ಮೇಲಿ ಬಿದ್ದಿದೆ. ಕಾರು ಜಖಂಗೊಂಡಿದ್ದು ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಮಹಾದ್ವಾರ ರಸ್ತೆ, ಭೋವಿ ಗಲ್ಲಿಯಲ್ಲಿ …

Read More »

ಕಾಂಗ್ರೆಸ್‌ ಅಭ್ಯರ್ಥಿ ರಾಜು ಆಲಗೂರ ನಾಮಪತ್ರ ಸಲ್ಲಿಕೆ

ವಿಜಯಪುರ: ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಪ್ರೊ.ರಾಜು ಆಲಗೂರ ಶುಕ್ರವಾರ ನಾಮಪತ್ರ ಸಲ್ಲಿಸಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಾವಿರಾರು ಸಂಖ್ಯೆಯ ಬೆಂಬಲಿಗರು, ಮುಖಂಡರು, ಪಕ್ಷದ ಕಾರ್ಯಕರ್ತರೊಂದಿಗೆ ಏ. 15 ರಂದ ಮತ್ತೊಮ್ಮೆ ನಾಮಪತ್ರ ಸಲ್ಲಿಸುವುದಾಗಿ ಆಲಗೂರ ತಿಳಿಸಿದರು.   ರಾಜ್ಯ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳು ನಮ್ಮ ಕೈಹಿಡಿಯಲಿದೆ. ಜನ ನಮ್ಮ ಮೇಲೆ ವಿಶ್ವಾಸವಿಟ್ಟಿದ್ದಾರೆ. ನನ್ನ ಗೆಲುವು ಖಚಿತ ಎಂದು ಹೇಳಿದರು

Read More »

ಚುನಾವಣೆ ಬಳಿಕ ಬೆಳಗಾವಿಯಲ್ಲೇ ‘ಪೆನ್ ಡ್ರೈವ್’ ಬಿಡುಗಡೆ

ಬೆಳಗಾವಿ : ಲೋಕಸಭೆ ಚುನಾವಣೆ ಹೊತ್ತಲ್ಲೇ ಎಂಎಲ್ಸಿ ಬಿಜೆಪಿ ಹರಿಪ್ರಸಾದ್ ಅವರು ಸ್ಪೋಟಕ ಹೇಳಿಕೆಯ ನೀಡಿದ್ದು ಲೋಕಸಭೆ ಚುನಾವಣೆಯಲ್ಲಿ ನಾನು ಸ್ಟಾರ್ ಕ್ಯಾಂಪೇನರ್ ಇದಿನಿ ನನ್ನ ಯಾರು ಉಪಯೋಗಿಸಿಕೊಳ್ಳಲು ಆಗುವುದಿಲ್ಲ ಆದರೆ ಕಾಂಗ್ರೆಸ್ ಪಕ್ಷಕ್ಕೆ ನನ್ನ ಉಪಯೋಗವಿದೆ ಹಾಗಾಗಿ ಬೆಳಗಾವಿಯಲ್ಲಿ ಬಂದು ಪೆನ್ಡ್ರೈವ್ ಬಿಡುಗಡೆ ಮಾಡುತ್ತೇನೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಬೆಳಗಾವಿಯಲ್ಲಿ ಸಮುದಾಯದ ಸಮಾವೇಶ ಒಂದರಲ್ಲಿ ಮಾತನಾಡಿದ ಅವರು ನಾನು ಸ್ಟಾರ್ ಕ್ಯಾಂಪೇನರ್ ನನ್ನನ್ನು ಉಪಯೋಗಿಸಿಕೊಳ್ಳಲು ಆಗುವುದಿಲ್ಲ. ಏನೆ …

Read More »

ಧಾರವಾಡ, ಬೆಳಗಾವಿ, ವಿಜಯನಗರ ಜಿಲ್ಲೆಗಳಲ್ಲಿ ಉತ್ತಮ ಮಳೆ

ಧಾರವಾಡ, ಬೆಳಗಾವಿ ಮತ್ತು ವಿಜಯನಗರ ಜಿಲ್ಲೆಯ ವಿವಿಧೆಡೆ ಬುಧವಾರ ಸಂಜೆ ಉತ್ತಮ ಮಳೆಯಾಯಿತು. ಹುಬ್ಬಳ್ಳಿ ನಗರ ಸೇರಿ ಧಾರವಾಡ ಜಿಲ್ಲೆ ವ್ಯಾಪ್ತಿಯ ಕಲಘಟಗಿ, ನವಲಗುಂದ, ಕುಂದಗೋಳ ಭಾಗದಲ್ಲಿ ಮಳೆಯಾಯಿತು. ಜೋರಾಗಿ ಮಳೆಯಾದ ಪರಿಣಾಮ ಹುಬ್ಬಳ್ಳಿಯ ಬಹುತೇಕ ಕಡೆ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಯಿತು. ಕೆಲ ಕಡೆ ಮರಗಳು ಉರುಳಿ ಬಿದ್ದವು. ಅಲ್ಲಲ್ಲಿ ವಿದ್ಯುತ್ ಪೂರೈಕೆ ಕಡಿತಗೊಳಿಸಲಾಯಿತು. ಬೆಳಗಾವಿ ಜಿಲ್ಲೆಯ ಹುಕ್ಕೇರಿ, ಸಂಕೇಶ್ವರ ಹಾಗೂ ಯಮಕನಮರಡಿ ಭಾಗದಲ್ಲಿ ಒಂದು ಗಂಟೆಗೂ ಹೆಚ್ಚು …

Read More »

‘ಪರಿಮಳದವರು’ ನಾಟಕ ಪ್ರದರ್ಶನ 13ರಿಂದ

ಬೆಳಗಾವಿ: ‘ಇಲ್ಲಿನ ಕೋನವಾಳ ಗಲ್ಲಿಯ ಲೋಕಮಾನ್ಯ ರಂಗಮಂದಿರದಲ್ಲಿ ಏ.13, 14ರಂದು ಸಂಜೆ 6.30ಕ್ಕೆ ರಾಘವೇಂದ್ರ ಸ್ವಾಮೀಜಿ ಜೀವನಾಧಾರಿತವಾದ ‘ಪರಿಮಳದವರು’ ನಾಟಕ ಪ್ರದರ್ಶನಗೊಳ್ಳಲಿದೆ’ ಎಂದು ರಂಗಸಂಪದ ಅಧ್ಯಕ್ಷ ಅರವಿಂದ ಕುಲಕರ್ಣಿ ಹೇಳಿದರು. ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲೋಕಮಾನ್ಯ ರಂಗಮಂದಿರದಲ್ಲಿ ಮಾ.29ರಂದು ಈ ನಾಟಕ ಪ್ರದರ್ಶಿಸಿದ್ದೆವು. ವೀಕ್ಷಣೆಗೆ ಜನರು ಕಿಕ್ಕಿರಿದು ಸೇರಿದ್ದರು. ಇನ್ನೂ ಕೆಲವು ಪ್ರದರ್ಶನ ನೀಡಬೇಕೆಂದು ಒತ್ತಾಯಿಸಿದರು. ಹಾಗಾಗಿ ಈಗ ಮತ್ತೆ ಪ್ರದರ್ಶಿಸುತ್ತಿದ್ದೇವೆ’ ಎಂದರು. ‘ಶ್ರೀಪತಿ ಮಂಜನಬೈಲು ನಿರ್ದೇಶಿಸಿರುವ …

Read More »

ವರ್ಷ ಧಾರೆಗೆ ನೆಲಕ್ಕುರುಳಿದ ಮರ

ಬೈಲಹೊಂಗಲ: ಪಟ್ಟಣ ಸೇರಿದಂತೆ ತಾಲ್ಲೂಕಿನ ಸುತ್ತಮುತ್ತಲಿನ‌ ಕೆಲ‌ ಗ್ರಾಮಗಳಲ್ಲಿ ಗುಡುಗು, ಜೋರಾದ ಗಾಳಿಯೊಂದಿಗೆ ಗುರುವಾರ ಮಳೆ ಸುರಿಯಿತು. ಕಾಯ್ದ ಭೂ ತಾಯಿ ಒಡಲಿಗೆ ಏಕಾಏಕಿ ಧರೆಗಿಳಿದ ಮಳೆರಾಯ ತುಸು ತಂಪೆರೆದ. ಬಿಸಿಲಿನ ಝಳಕ್ಕೆ ಕಂಗೆಟ್ಟಿದ್ದ ಜನತೆ ಮಳೆಯ ಹನಿ ನೀರು ನೆತ್ತಿಯ ಮೇಲೆ ಬಿಳುತ್ತಿದ್ದಂತೆ ವರ್ಷಧಾರೆಗೆ ಮೈಯೊಡ್ಡಿ ಸಂಭ್ರಮಿಸಿದರು. ಪಟ್ಟಣ ಪ್ರದೇಶದಲ್ಲಿ ತುಂತುರು ಮಳೆ ಹನಿ ಸುರಿದರೆ ಮತಕ್ಷೇತ್ರದ ಇಂಚಲ, ಹಾರೂಗೊಪ್ಪ, ಮರಕುಂಬಿ, ಮುರಗೋಡ, ಸುತ್ತಗಟ್ಟಿ ಗ್ರಾಮದಲ್ಲಿ ಜೋರಾದ ಮಳೆ ಸುರಿಯಿತು. …

Read More »

ದಿಂಗಾಲೇಶ್ವರ ಸ್ವಾಮೀಜಿ ನಮ್ಮನ್ನು ಕ್ಷಮಿಸಬೇಕು..: ಮುರುಗೇಶ್ ನಿರಾಣಿ

ಹುಬ್ಬಳ್ಳಿ: ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿಗಳು ದೊಡ್ಡವರು, ನಮ್ಮಿಂದ ಅಥವಾ ಪ್ರಹ್ಲಾದ್ ಜೋಶಿ ಅವರಿಂದ ಏನೇ ತಪ್ಪಾಗಿದ್ದರೂ ಕ್ಷಮಿಸಬೇಕು. ಆಗಿರುವ ತಪ್ಪನ್ನು ಸರಿ ಮಾಡಿಕೊಳ್ಳುತ್ತೇವೆ. ಕೇಂದ್ರ ಹಾಗೂ ರಾಜ್ಯ ನಾಯಕರು ಶ್ರೀಗಳೊಂದಿಗೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ತಿಳಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿಂಗಾಲೇಶ್ವರ ಶ್ರೀಗಳ ವಿಚಾರದಲ್ಲಿ ಅವರ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಕೇಂದ್ರದ ನಾಯಕರು ಶ್ರೀಗಳೊಂದಿಗೆ …

Read More »

ಮೊದಲಿನ ಗ್ಯಾರಂಟಿಗಳೇ ಕೊಟ್ಟಿಲ್ಲ, ಈಗೇನು ಕೊಡ್ತಾರೆ: ಕೇಂದ್ರಕ್ಕೆ ಖರ್ಗೆ ಪ್ರಶ್ನೆ

ಕಲಬುರಗಿ: ವರ್ಷಕ್ಕೆ ಎರಡು ಕೋಟಿ ಉದ್ಯೋಗ, ರೈತರ ಆದಾಯ ದುಪ್ಪಟ್ಟು, ಎಂಎಸ್ಪಿ ಬೆಲೆ ಹೆಚ್ಚಳದಂತಹ ಗ್ಯಾರಂಟಿಗಳನ್ನೇ ಮಾಡದಿರುವ ಪ್ರಧಾನಿ ನರೇಂದ್ರ ಮೋದಿ ಈಗೇನು ಗ್ಯಾರಂಟಿ ಕೊಡ್ತಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು. ಕಲಬುರಗಿ ಲೋಕಸಭಾ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಪರವಾಗಿ ಆಯೋಜಿಸಲಾ ಕಾಂಗ್ರೆಸ್ ಪಕ್ಷದ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಕಾಂಗ್ರೆಸ್ ಪಕ್ಷ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಅವುಗಳನ್ನು ಈಗಾಗಲೇ ರಾಜ್ಯದಲ್ಲಿ ಕಾರ್ಯಾನುಷ್ಠಾನ ತರಲಾಗಿದೆ. ಆದರೆ ಮೋದಿ ಗ್ಯಾರಂಟಿ ಬರೀ …

Read More »

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೇ ನಾನೇ ಮುಖ್ಯಮಂತ್ರಿ ಆಗುತ್ತೇನೆ: ಯತ್ನಾಳ್​

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರದ ಭರಾಟೆ ಜೋರಾಗಿದೆ. ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ಪರವಾಗಿ ಮತಯಾಚಿಸಿದ ಬಳಿಕ ಅಥಣಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ ಮುಂದಿನ ಮುಖ್ಯಮಂತ್ರಿ ನಾನೇ ಎಂದಿದ್ದಾರೆ.     , : ರಾಜ್ಯದಲ್ಲಿ ಬಿಜೆಪಿ (BJP) ಮತ್ತೆ ಅಧಿಕಾರಕ್ಕೆ ಬಂದರೇ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda …

Read More »