Breaking News
Home / ಜಿಲ್ಲೆ / ಬೆಳಗಾವಿ / ಚಿಕ್ಕೋಡಿ (page 3)

ಚಿಕ್ಕೋಡಿ

ಕೊರತೆಯಿಂದ ಗೋವಿನ ಜೋಳ ಫಸಲಿನ ನೀಡುವ ಹಂತದಲ್ಲಿ ಒಣಗುತ್ತಿದೆ. ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಚಿಕ್ಕೋಡಿ: ಉತ್ತರ ಕರ್ನಾಟಕ ಭಾಗದಲ್ಲಿ ಹೇರಳವಾಗಿ ಮೆಕ್ಕೆಜೋಳ ಬೆಳೆಯುವುದು ವಾಡಿಕೆ. ಸದ್ಯ ಈ ಭಾಗದಲ್ಲಿ ಗಣನೀಯ ಪ್ರಮಾಣದಲ್ಲಿ ಮಳೆ ಕೊರತೆಯಿಂದಾಗಿ ಕಷ್ಟಪಟ್ಟು ಬೆಳೆದ ಬೆಳೆಗಳು ರೈತನ ಕಣ್ಣ ಮುಂದೆಯೇ ಒಣಗುತ್ತಿವೆ. ಅನ್ನದಾತ ವಿಲಿವಿಲಿ ಒದ್ದಾಡುವಂತಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಾದ್ಯಂತ ಈ ವರ್ಷ ಮುಂಗಾರು, ಹಿಂಗಾರು ಮಳೆ ಕೈಕೊಟ್ಟಿದ್ದು ಲಕ್ಷಾಂತರ ಹೆಕ್ಟೇರ್​ನಲ್ಲಿ ಬೆಳೆದ ಗೋವಿನ ಜೋಳ ಫಸಲಿನ ಅಂಚಿಗೆ ಬಂದು ಒಣಗುತ್ತಿದ್ದು, ರೈತನನ್ನು ಸಂಕಷ್ಟದಲ್ಲಿ ಸಿಲುಕಿಸಿದೆ. ಅಲ್ಪ ಮಳೆಯಲ್ಲಿ ಕಷ್ಟಪಟ್ಟು …

Read More »

ಮಹಾರಾಷ್ಟ್ರದ ಜತ್ತ ಪಟ್ಟಣದ ಸಮೀಪ ಕೆಲವು ದುಷ್ಕರ್ಮಿಗಳು ಕೆಎಸ್​ಆರ್‌ಟಿಸಿ ಬಸ್‌ಗೆ ಕಲ್ಲು ತೂರಿದ್ದಾರೆ.

ಚಿಕ್ಕೋಡಿ (ಬೆಳಗಾವಿ): ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದೆ. ಮತ್ತೊಂದೆಡೆ, ಮಹಾರಾಷ್ಟ್ರದ ಜತ್ತ ಪಟ್ಟಣದ ಸಮೀಪ ಕೆಲ ದುಷ್ಕರ್ಮಿಗಳು ಕೆಎಸ್​ಆರ್​ಟಿಸಿ ಬಸ್​ಗೆ ಕಲ್ಲು ತೂರಿರುವ ಘಟನೆ ನಡೆದಿದೆ. ಕೆಲವು ಪ್ರಯಾಣಿಕರಿಗೆ ಗಾಯಗಳಾಗಿವೆ. ವಿಜಯಪುರ ತಾಲೂಕಿನ ಇಂಡಿ ಘಟಕಕ್ಕೆ ಸೇರಿದ ಬಸ್​ ಇದಾಗಿದ್ದು, ಜತ್ತ ಪಟ್ಟಣದಿಂದ ವಿಜಯಪುರಕ್ಕೆ ತೆರಳುತ್ತಿತ್ತು. ದುಷ್ಕರ್ಮಿಗಳು ಬಸ್​ ಅಡ್ಡಗಟ್ಟಿ ಕಲ್ಲು ತೂರಿದ್ದಾರೆ. ಬಸ್​ನ ಹಿಂಬದಿಯ ಗಾಜು ಪುಡಿಯಾಗಿದೆ. ಗಾಜಿನ ಚೂರುಗಳು …

Read More »

ಲಕ್ಷ್ಮಣ್ ಸವದಿ ನಿವಾಸದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಂದ ಶೋಧ; ಹುಲಿ ಉಗುರು ಮಾದರಿಯ ಪೆಂಡೆಂಟ್‌ ವಶಕ್ಕೆ

ಚಿಕ್ಕೋಡಿ: ಮಾಜಿ ಡಿಸಿಎಂ, ಕಾಂಗ್ರೆಸ್ ನಾಯಕ ಲಕ್ಷ್ಮಣ್ ಸವದಿ ಪುತ್ರ ಸುಮಿತ್ ಸವದಿ ಕೊರಳಲ್ಲಿ ಹುಲಿ ಉಗುರು ಹೋಲುವಂತಹ ಪೆಂಡೆಂಟ್ ಇರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಥಣಿ ಅರಣ್ಯ ಇಲಾಖೆ ಅಧಿಕಾರಿಗಳು ಸರ್ಚ್ ವಾರಂಟ್‌ನೊಂದಿಗೆ ಇಂದು ಅಥಣಿಯಲ್ಲಿರುವ ಸವದಿ ನಿವಾಸದಲ್ಲಿ ಶೋಧ ಕಾರ್ಯ ನಡೆಸಿದರು. ಅರಣ್ಯ ಇಲಾಖೆ ಅಧಿಕಾರಿ ಪ್ರಶಾಂತ ಗಾಣಿಗೇರ ನೇತೃತ್ವದಲ್ಲಿ ಹತ್ತು ಮಂದಿ ಸಿಬ್ಬಂದಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಚಿದಾನಂದ ಸವದಿ ಅವರಿಂದ ಮಾಹಿತಿ ಪಡೆದುಕೊಂಡರು. ಇದೇ ವೇಳೆ, …

Read More »

ನನಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ನೀಡುತ್ತಾರೆಂಬುದು ಊಹಾಪೋಹ ಅಷ್ಟೇ: ಲಕ್ಷ್ಮಣ್ ಸವದಿ

ಚಿಕ್ಕೋಡಿ(ಬೆಳಗಾವಿ): “ನನಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನದ ನೀಡುತ್ತಾರೆಂಬ ವಿಚಾರ ಊಹಾಪೋಹ ಅಷ್ಟೇ. ಈ ಬಗ್ಗೆ ನನಗೆ ಮಾಹಿತಿಯೂ ಇಲ್ಲ” ಎಂದು ಅಥಣಿ ಶಾಸಕ ಲಕ್ಷ್ಮಣ್ ಸವದಿ ಹೇಳಿದರು. ಅಥಣಿ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಇದೆಲ್ಲಾ ಮಾಧ್ಯಮಗಳಲ್ಲಿ ಮಾತ್ರ ಚರ್ಚೆಯಾಗುತ್ತಿದೆ. ನಾನು ತಾಲೂಕಿನ ಅಭಿವೃದ್ಧಿ ವಿಚಾರವಾಗಿ ಸಿಎಂ ಮತ್ತು ಡಿಸಿಎಂ ಭೇಟಿಗೆ ಹೋಗಿದ್ದೆ. ಅವರೊಂದಿಗೆ ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ” ಎಂದರು. “ಪದಾಧಿಕಾರಿಗಳ ಪುನರ್‌ರಚನೆಯನ್ನು ಕೇಂದ್ರದ ವರಿಷ್ಠರು ಹಾಗೂ …

Read More »

ಮಹಾರಾಷ್ಟದ ಗಡಿ ತಾಲೂಕು ಜತ್ತದಲ್ಲಿ ಕನ್ನಡದ ಶಾಲೆಗಳಲ್ಲಿ ಶಿಕ್ಷರ ಕೊರತೆ

ಚಿಕ್ಕೋಡಿ: ಕರ್ನಾಟಕ ಗಡಿ ಹೊಂದಿರುವ ಮಹಾರಾಷ್ಟ್ರದ ಗ್ರಾಮಗಳಲ್ಲಿ ಕನ್ನಡ ಶಾಲೆಗಳು ದುಸ್ಥಿತಿಯಲ್ಲಿವೆ. ಗಡಿನಾಡು ಕನ್ನಡಿಗರ ಒತ್ತಾಯದ ಮೇರೆಗೆ ದಶಕಗಳ ಹಿಂದೆ ಕನ್ನಡ ಭಾಷೆ ಕಲಿಕೆಯ ಶಾಲೆಗಳ ನಿರ್ಮಾಣ ಮಾಡಲಾಗಿತ್ತು. ಆದರೆ ಆ ಶಾಲೆಗಳಿಗೆ ಶಿಕ್ಷಕರ ಕೊರತೆ ಇರುವುದರಿಂದ ಕ್ರಮೇಣ ಮಕ್ಕಳು ಮರಾಠಿ ಭಾಷೆಗಳತ್ತ ಒಲವು ತೋರುತ್ತಿದ್ದಾರೆ. ಪರಿಣಾಮ, ಮಹಾರಾಷ್ಟ್ರ ಸರ್ಕಾರ ಗಡಿಯಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುವಂತಹ ಕುತಂತ್ರ ನಡೆಸುತ್ತಿದೆ ಎಂದು ಜತ್ತ ತಾಲೂಕಿನ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತ್ತ ತಾಲೂಕಿನಲ್ಲಿ 82 …

Read More »

ಇಸ್ರೇಲ್​​ನಿಂದ ತಾಯ್ನಾಡಿಗೆ ಬಂದ ಬೆಳಗಾವಿ ಯುವಕ: ಯುದ್ಧದ ಭಯಾನಕತೆ ಬಿಚ್ಚಿಟ್ಟ ‘ಮಹಾವೀರ’

ಚಿಕ್ಕೋಡಿ (ಬೆಳಗಾವಿ): ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವೆ ನಡೆಯುತ್ತಿರುವ ಯುದ್ಧದ ಭೀತಿಯಿಂದಾಗಿ ಬೆಳಗಾವಿಯ ಜಿಲ್ಲೆಯ ಯುವಕ ಸುರಕ್ಷಿತವಾಗಿ ಮರಳಿ ತಮ್ಮೂರಿಗೆ ಹಿಂತಿರುಗಿದ್ದಾರೆ. ಭಾರತೀಯ ಪ್ರಜೆಗಳ ಸುರಕ್ಷತಾ ದೃಷ್ಟಿಯಿಂದ ಕೇಂದ್ರ ಸರ್ಕಾರದ ಆಪರೇಷನ್ ಅಜಯ್ ಕಾರ್ಯಾಚರಣೆ ಮುಂದುವರಿಸಿದ್ದು, ಅದರ ನೆರವಿನಿಂದ ಯುವಕ ತಾಯ್ನಾಡಿಗೆ ಮರಳಿದ್ದಾನೆ. ಹುಕ್ಕೇರಿ ತಾಲೂಕಿನ ಹೊಸೂರು ಗ್ರಾಮದ ಮಹಾವೀರ ಹಲಕರ್ಣಿ ಎಂಬ ಯುವಕ ಭಾನುವಾರ ತಮ್ಮೂರಿಗೆ ಮರಳಿ ಬಂದಿದ್ದಾರೆ. ಇಸ್ರೇಲ್​​ ದೇಶದ ಬೀರಶೇವಾ ಪ್ರದೇಶದ ಬೆನ್ ಗೋರಿನ್ ವಿಶ್ವವಿದ್ಯಾಲಯದಲ್ಲಿ …

Read More »

ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದಲ್ಲಿ ವಿದ್ಯುತ್​ ತಂತಿ ಸ್ಪರ್ಶಿಸಿ 26 ಎಕರೆಯಲ್ಲಿ ಬೆಳೆದಿದ್ದ ಕಬ್ಬು ನಾಶ;

ಚಿಕ್ಕೋಡಿ (ಬೆಳಗಾವಿ): ವಿದ್ಯುತ್​ ತಂತಿ ಸ್ಪರ್ಶಿಸಿ 26 ಎಕರೆ ಪ್ರದೇಶದಲ್ಲಿ ಬೆಳೆದ ಕಬ್ಬು ಸಂಪೂರ್ಣವಾಗಿ ಸುಟ್ಟು ಹೋದ ಘಟನೆ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದ ಸರ್ವೆ ನಂಬರ್​ 8 ಮತ್ತು 10ರಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿತು. ಹೈವೋಲ್ಟೇಜ್ ವಿದ್ಯುತ್ ತಂತಿ ತುಂಡಾಗಿ ಬಿದ್ದು ಬೆಂಕಿ ಹೊತ್ತಿಕೊಂಡಿತು ಎಂದು ತಿಳಿದುಬಂದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ರೈತರಾದ ಪಾರೀಸ್ ವಾಳ್ವೆ ಹಾಗೂ ನಿಗಂಪ್ಪಾ ಮನಗೋಳಿ ಮಾತನಾಡಿ, “ಇನ್ನೇನು ಕೆಲವೇ ದಿನಗಳಲ್ಲಿ ಕಬ್ಬು ಕಾರ್ಖಾನೆಗೆ …

Read More »

ಕೇಂದ್ರ ಸರ್ಕಾರದಿಂದ ಬರುವ ವಿದ್ಯುತ್ತನ್ನು ನಿಲ್ಲಿಸಿದ್ದರಿಂದ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ : ಸಚಿವ ಸತೀಶ್​ ಜಾರಕಿಹೊಳಿ

ಚಿಕ್ಕೋಡಿ : ಕೇಂದ್ರದಿಂದ ಬರುವ ವಿದ್ಯುತ್ ಹಠಾತ್ತನೆ ನಿಲ್ಲಿಸಿದ ಪರಿಣಾಮವಾಗಿ ರಾಜ್ಯದಲ್ಲಿ ತೊಂದರೆ ಉಂಟಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.   ಸೋಮವಾರ ಸಂಜೆ ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ, ದಕ್ಷಿಣ ಭಾರತಕ್ಕೆ ಕೇಂದ್ರ ಸರ್ಕಾರದಿಂದ ಬರುವ ವಿದ್ಯುತ್ ನಿಲ್ಲಿಸಿದ್ದರಿಂದ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ. ಕಳೆದ ಮೂರು ದಿನಗಳಿಂದ ವಿದ್ಯುತ್ ಅಭಾವ ಕಂಡುಬಂದಿದೆ. ನೀರಿನ ಅಭಾವದಿಂದ ಕೆಲವು ಕಡೆ ವಿದ್ಯುತ್ ತಯಾರಿಕೆ ಆಗುತ್ತಿಲ್ಲ. …

Read More »

ಅಥಣಿಯಲ್ಲಿ ಕಾಣೆಯಾದ ವಿದ್ಯಾರ್ಥಿಗಳು ಮಹಾರಾಷ್ಟ್ರದ ರತ್ನಗಿರಿಯಲ್ಲಿ ಪತ್ತೆ

ಚಿಕ್ಕೋಡಿ(ಬೆಳಗಾವಿ): ಶಾಲೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಮೂರು ಮಕ್ಕಳು ಕಾಣೆಯಾಗಿರುವ ಪ್ರಕರಣದಲ್ಲಿ ಮಹಾರಾಷ್ಟ್ರದ ರತ್ನಗಿರಿಯಲ್ಲಿ ಮಕ್ಕಳು ಪತ್ತೆಯಾಗಿದ್ದು, ಪೋಷಕರ ಆತಂಕ ದೂರಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ನಿವಾಸಿಯ ಮೂವರು ವಿದ್ಯಾರ್ಥಿಗಳು ಶುಕ್ರವಾರ ಸಂಜೆ ಅಥಣಿ ಪಟ್ಟಣದಲ್ಲಿ ಕಾಣೆಯಾಗಿದ್ದರು. ಶಾಲೆಗೆ ಹೋಗಿ ಬರುತ್ತೇನೆ ಎಂದು ಮಕ್ಕಳು ಮರಳಿ ಮನೆಗೆ ಬಾರದೆ ಇದ್ದಾಗ ಕುಟುಂಬಸ್ಥರು ಆತಂಕಗೊಂಡು ಅಥಣಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಕುಟುಂಬಸ್ಥರು ಶೋಧ ಕಾರ್ಯ ನಡೆಸಿದರು, ಹುಡುಕಾಟ ಸಮಯದಲ್ಲಿ …

Read More »

ಕ್ಷೇತ್ರದಲ್ಲಿ ಕೆಲಸ, ಕಾರ್ಯಗಳಿಲ್ಲದೆ ಶಾಸಕರು ಖಾಲಿ ಕುಳಿತಿದ್ದೇವೆ: ರಾಜು ಕಾಗೆ ಅಸಮಾಧಾನ

ಚಿಕ್ಕೋಡಿ (ಬೆಳಗಾವಿ) : ಸರ್ಕಾರ ರಚನೆಯಾಗಿ ನಾಲ್ಕೈದು ತಿಂಗಳಾದರೂ ಇನ್ನೂ ಕ್ಷೇತ್ರಗಳಿಗೆ ಅನುದಾನ ಬಿಡುಗಡೆಯಾಗದೆ ತೊಂದರೆಯಾಗುತ್ತಿದೆ. ಹೀಗಾಗಿ ಶಾಸಕರು ಖಾಲಿ ಕುಳಿತಿದ್ದೇವೆ ಎಂದು ಶಾಸಕ ರಾಜು ಕಾಗೆ ಹೇಳಿದ್ದಾರೆ. ಬುಧವಾರ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಗ್ರಾಮದಲ್ಲಿ ತಮ್ಮ ಸ್ವಗೃಹದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ, ಕ್ಷೇತ್ರದ ಜನರು ರಸ್ತೆ, ನೀರಾವರಿ ಯೋಜನೆ, ಸಮುದಾಯ ಭವನ, ಶಾಲೆ, ಗುಡಿ-ಗುಂಡಾರಗಳನ್ನು ಕೇಳುತ್ತಿದ್ದಾರೆ. ಶಾಸಕರ ನಿಧಿಗೆ 50 ಲಕ್ಷ ರೂ ಹಾಕಿದ್ದೇವೆ ಎಂದು ಸರ್ಕಾರ …

Read More »