Home / ಜಿಲ್ಲೆ / ಬೆಂಗಳೂರು ಗ್ರಾಮಾಂತರ (page 9)

ಬೆಂಗಳೂರು ಗ್ರಾಮಾಂತರ

850 ರೂಪಾಯಿ ಬೆಲೆಯ ಕಾಸ್ಟ್ಲಿ ನೀರನ್ನ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಕುಡಿಯೋದಂತೆ.

ಒಂದು ನೀರಿನ ಬಾಟಲ್ ಬೆಲೆ ಎಷ್ಟಿರಬಹುದು ಹೇಳಿ ಅಬ್ಬಬ್ಬಾ ಅಂದ್ರೆ 50-100 ರೂಪಾಯಿ. ಯಾರಾದ್ರೂ 850 ರೂಪಾಯಿ ಒಂದು ನೀರಿನ ಬಾಟಲ್ ಬೆಲೆ ಅಂದ್ರೆ ಸಾಕು. ಅದು ನೀರಲ್ಲ ಅಮೃತ ಅಂತ ಹೇಳೋರೆ ಹೆಚ್ಚು. ಅಷ್ಟು ಕಾಸ್ಟ್ಲಿ ನೀರನ್ನ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಕುಡಿಯೋದಂತೆ. ಹೀಗಂತ ಹೇಳಿದ್ದು ಗೋವಾ ಕೃಷಿ ಸಚಿವ ರವಿ ನಾಯ್ಕ್. ಇತ್ತೀಚೆಗೆ ಅಮಿತ್ ಶಾ ಗೋವಾಗೆ ಭೇಟಿ ಕೊಟ್ಟ ವೇಳೆ ಅವರಿಗೆ ಇದೇ …

Read More »

ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ಜೂನ್‌ 3ರಂದು ಚುನಾವಣೆ

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ ಏಳು ಸದಸ್ಯರ ಅವಧಿ ಜೂನ್‌ 14ಕ್ಕೆ ಮುಕ್ತಾಯವಾಗಲಿದ್ದು, ಈ ಸ್ಥಾನಗಳ ಭರ್ತಿಗೆ ಜೂನ್‌ 3ರಂದು ಚುನಾವಣೆ ನಡೆಯಲಿದೆ. ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ದ್ವೈವಾರ್ಷಿಕ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಮಂಗಳವಾರ ವೇಳಾಪಟ್ಟಿ ಪ್ರಕಟಿಸಿದೆ. ಬಿಜೆಪಿಯ ಲಕ್ಷ್ಮಣ ಸವದಿ, ಲಹರ್‌ ಸಿಂಗ್‌ ಸಿರೋಯಾ, ಕಾಂಗ್ರೆಸ್‌ನ ಆರ್‌.ಬಿ. ತಿಮ್ಮಾಪೂರ, ಅಲ್ಲಂ ವೀರಭದ್ರಪ್ಪ, ವೀಣಾ ಅಚ್ಚಯ್ಯ, ಜೆಡಿಎಸ್‌ನ ಕೆ.ವಿ. ನಾರಾಯಣ ಸ್ವಾಮಿ ಮತ್ತು ಎಚ್‌.ಎಂ. ರಮೇಶ್‌ ಗೌಡ …

Read More »

ಸರ್ಕಾರದ 40 ಪರ್ಸೆಂಟ್ ಕಮೀಷನ್ ಭ್ರಷ್ಟಾಚಾರ ನಿಸರ್ಗದಿಂದಲೇ ಬಯಲಾಗಿದೆ: ಕಾಂಗ್ರೆಸ್

ಬೆಂಗಳೂರು: ಸರ್ಕಾರದ 40 ಪರ್ಸೆಂಟ್ ಕಮೀಷನ್ ಭ್ರಷ್ಟಾಚಾರವನ್ನು ನಿಸರ್ಗವೇ ಬಯಲು ಮಾಡುತ್ತಿದೆ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ. ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ದೂಷಣೆಯಿಂದ ತಮ್ಮ ಹಗರಣ ಮುಚ್ಚಿಕೊಳ್ಳಬಹುದು ಎಂದುಕೊಂಡಿದ್ದಾರೆ. ಆದರೆ, ಬಿಜೆಪಿ ಸರ್ಕಾರದ ಶೇ 40 ಪರ್ಸೆಂಟ್ ಭ್ರಷ್ಟಾಚಾರವನ್ನು ನಿಸರ್ಗವೇ ಬಯಲು ಮಾಡುತ್ತಿದೆ. ವಾಜಪೇಯಿ ಕ್ರೀಡಾಂಗಣದ ಛಾವಣಿ ಕುಸಿದಿದೆ, ತೇಲು ಸೇತುವೆ ತೇಲಿಹೋಗಿದೆ. ಇದು ಶೇ 40 …

Read More »

ಗುರುವಾರ ಬೆಳಿಗ್ಗೆ ನಡೆಯಬೇಕಿದ್ದ ಸಂಪುಟ ಸಭೆಯನ್ನು ಮೇ 11ಕ್ಕೆ‌

ಬೆಂಗಳೂರು: ಗುರುವಾರ ಬೆಳಿಗ್ಗೆ ನಡೆಯಬೇಕಿದ್ದ ಸಂಪುಟ ಸಭೆಯನ್ನು ಮೇ 11ಕ್ಕೆ‌ ಮುಂದೂಡಲಾಗಿದೆ. ವಿಧಾನಸೌಧದ ಸಚಿವ ಸಂಪುಟ ಸಭಾಂಗಣದಲ್ಲಿ ಗುರುವಾರ ಬೆಳಿಗ್ಗೆ 11.30ಕ್ಕೆ ಸಂಪುಟ ಸಭೆ ನಿಗದಿಯಾಗಿತ್ತು. ಅದನ್ನು ರದ್ದುಪಡಿಸಿ ಮೇ 11ರ ಬೆಳಿಗ್ಗೆ 11 ಗಂಟೆಗೆ ನಿಗದಿಪಡಿಸಲಾಗಿದೆ ಎಂದು ಸಚಿವ ಸಂಪುಟ ವಿಭಾಗದ ಜಂಟಿ ಕಾರ್ಯದರ್ಶಿ ಆರ್. ಚಂದ್ರಶೇಖರ್ ಬುಧವಾರ ಪರಿಷ್ಕೃತ ಸೂಚನಾ ಪತ್ರ ಹೊರಡಿಸಿದ್ದಾರೆ‌. ಸಂಪುಟ ವಿಸ್ತರಣೆ ಅಥವಾ ಸಂಪುಟ ಪುನರ್ ರಚನೆ ಕುರಿತು ಬಿಜೆಪಿಯಲ್ಲಿ ಚರ್ಚೆ ನಡೆಯುತ್ತಿದೆ. ಮೇ …

Read More »

ಬಜೆಟ್ ಅನುಷ್ಠಾನಕ್ಕೆ ಎಲ್ಲ ಇಲಾಖೆಗಳಿಗೂ ವೇಳಾಪಟ್ಟಿ: ಸಿಎಂ ಬೊಮ್ಮಾಯಿ

ಬೆಂಗಳೂರು: ಬಜೆಟ್ ಅನುಷ್ಠಾನಕ್ಕೆ ಎಲ್ಲ ಇಲಾಖೆಗಳಿಗೂ ವೇಳಾಪಟ್ಟಿ ನಿಗದಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.   ಪ್ರಸಕ್ತ ಸಾಲಿನ ಬಜೆಟ್ ಅನುಷ್ಠಾನಕ್ಕೆ ವೇಗ ನೀಡುವುದಕ್ಕಾಗಿ ಬುಧವಾರ ಇಲಾಖಾವಾರು ಸಭೆಗಳನ್ನು ಆರಂಭಿಸುವ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬಜೆಟ್ ಘೋಷಣೆಗಳ ಅನುಷ್ಠಾನಕ್ಕಾಗಿ ಈಗಾಗಲೇ ಶೇಕಡ 80ರಷ್ಟು ಆದೇಶಗಳನ್ನು ಹೊರಡಿಸಲಾಗಿದೆ. ಉಳಿದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ತ್ವರಿತವಾಗಿ ಆದೇಶ ಹೊರಡಿಸಲಾಗುವುದು’ ಎಂದರು. ಎಲ್ಲ ಇಲಾಖೆಗಳಿಗೂ ಬಜೆಟ್ ಘೋಷಣೆಗಳ ಅನುಷ್ಠಾನಕ್ಕೆ ವೇಳಾಪಟ್ಟಿ ನೀಡಲಾಗುವುದು. …

Read More »

ಏ.24ರಿಂದ ಮೇ 21ರವರೆಗೆ ರಾಜ್ಯ ಹೈಕೋರ್ಟ್ ಗೆ ಬೇಸಿಗೆ ರಜೆ

ಏ.24ರಿಂದ ಮೇ 21ರವರೆಗೆ ರಾಜ್ಯ ಹೈಕೋರ್ಟ್ ಗೆ ಬೇಸಿಗೆ ರಜೆ ಇರಲಿದೆ. ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠ, ಧಾರವಾಡ ಹಾಗೂ ಕಲಬುರ್ಗಿ ಪೀಠಗಳಿಗೆ ಈ ಬೇಸಿಗೆ ರಜೆ ಅನ್ವಯವಾಗಲಿದೆ. ಈ ಅವಧಿಯಲ್ಲಿ ತುರ್ತು ಪ್ರಕರಣಗಳ ವಿಚಾರಣೆಗೆ ವಿವಿಧ ದಿನಾಂಕಗಳಂದು ಏಳು ದಿನ ರಜಾ ಕಾಲದ ನ್ಯಾಯಪೀಠಗಳು ಕಾರ್ಯನಿರ್ವಹಣೆ ಮಾಡಲಿದೆ.   ಬೇಸಿಗೆ ರಜೆಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮಮೂರ್ತಿಗಳ ಆದೇಶಾನುಸಾರ ಹೈಕೋರ್ಟ್‌ ರಿಜಿಸ್ಟ್ರಾರ್‌ ಕೆ.ಎಸ್‌. ಭರತ್‌ ಕುಮಾರ್‌ ಅಧಿಸೂಚನೆ ಹೊರಡಿಸಿದ್ದಾರೆ. ರಜಾ …

Read More »

ಮೆಟ್ರೋದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ

ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಶನ್ ಲಿಮಿಟೆಡ್ ಸಹಾಯಕ ಎಂಜಿನಿಯರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದ ಅಡಿಯಲ್ಲಿ ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಂಡು ಉತ್ತಮ ಹುದ್ದೆ ನಿಮ್ಮದಾಗಿಸಿಕೊಳ್ಳಬಹುದು.   ಆಸಕ್ತ ಅಭ್ಯರ್ಥಿಗಳು ಮೇ 11ರ ಮೊದಲು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಅರ್ಜಿ ಹಾಕಬಹುದಾಗಿದೆ. ಬೆಂಗಳೂರಿನಲ್ಲಿ ಖಾಲಿ ಇರುವ 6 ಸಹಾಯಕ ಎಂಜಿನಿಯರ್, ಸಹಾಯಕ ಕಾರ್ಯನಿರ್ವಾಹಕ …

Read More »

ಬೆಳ್ಳಂಬೆಳಗ್ಗೆ ಟೀ ಮಾರುತ್ತಿದ್ದವ ಮಧ್ಯಾಹ್ನ ಆಗ್ತಿದ್ದಂತೆ ಪೊಲೀಸ್ ಅಂತಿದ್ದ ಚಾಲಾಕಿ ಅಂದರ್​

ಬೆಂಗಳೂರು: ಸಿಟಿ ಮಾರ್ಕೆಟ್ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಪೊಲೀಸ್​ ಅಂತೇಳಿ ವ್ಯಾಪಾರಸ್ಥರಿಂದ ಹಣ ವಸೂಲಿ ಮಾಡುತ್ತಿದ್ದ ನಕಲಿ ಪೊಲೀಸ್​​​ಅನ್ನು ಪೊಲೀಸರು ಬಂಧಿಸಿದ್ದಾರೆ. ಶ್ರೀರಾಮಪುರದ ವಿಘ್ನೇಶ್ (23) ಬಂಧಿತ ಆರೋಪಿಯಾಗಿದ್ದು, ಈತ ಬೆಳಗಿನ ವೇಳೆಯಲ್ಲಿ ಚಿಕ್ಕಪೇಟೆ, ಕಾಟನ್​ ಪೇಟೆ, ಹಲಸೂರು ಪ್ರಧೇಶಗಳಲ್ಲಿ ಟೀ ಮಾರಾಟ ಮಾಡುತ್ತಿದ್ದ. ಆ ವೇಳೆ ಅಂಗಡಿಗಳ ಮಾಹಿತಿ ಪಡೆದುಕೊಂಡಿದ್ದ ಆರೋಪಿ ಮಧ್ಯಾಹ್ನ ಆಗುತ್ತಿದಂತೆ ಅಂಗಡಿಗಳ ಬಳಿ ಬಂದು ವ್ಯಾಪಾರಸ್ಥರನ್ನು ಬೆದರಿಸಿ, ನೀವು ಅಕ್ರಮವಾಗಿ ತಂಬಾಕು ಮಾರಾಟ ಮಾಡುತ್ತಿದ್ದೀರಿ. …

Read More »

BPL’ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದವರಿಗೆ ಆಹಾರ ಇಲಾಖೆಯಿಂದ ಬಿಗ್ ಶಾಕ್!

ಬೆಂಗಳೂರು: ಬಡತನ ರೇಖೆಗಿಂತ ಕೆಳಗಿರುವಂತ ರಾಜ್ಯದ ಜನರಿಗೆ ಉಚಿತ ಆಹಾರ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಬಿಪಿಎಲ್ ಪಡಿತರ ಚೀಟಿ( BPL Ration Card ) ಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಈ ಕಾರ್ಡಗಳಿಗಾಗಿ ಹೊಸದಾಗಿ ಅರ್ಜಿಯನ್ನು ಅನೇಕ ಅರ್ಹ ಫಲಾನುಭವಿ ಕುಟುಂಬಗಳಿಂದ ಸಲ್ಲಿಸಲಾಗಿದೆ. ಆದ್ರೇ ರಾಜ್ಯ ಸರ್ಕಾರ ಅಕ್ರಮವಾಗಿ ಪಡೆದಿರುವ ಬಿಪಿಎಲ್ ಕಾರ್ಡ್ ಗಳನ್ನು ಆರ್ಥಿಕ ಸಬಲರು ವಾಪಸ್ ಕೊಟ್ಟ ನಂತರವಷ್ಟೇ ಹೊಸ ಅರ್ಜಿದಾರರಿಗೆ ಕಾರ್ಡ್ ವಿತರಿಸಲು ನಿರ್ಧರಿಸಿದೆ ಎನ್ನಲಾಗಿದೆ.   …

Read More »

ಸಿ.ಟಿ.ರವಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ..?!

ಬೆಂಗಳೂರು,ಡಿ.8- ಮುಂಬರುವ 2023ರ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕೇಂದ್ರ ಬಿಜೆಪಿ ವರಿಷ್ಠರು ಹಾಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡಲು ಮುಂದಾಗಿದ್ದಾರೆ. ಹಾಲಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲು ಅವರನ್ನು ಶೀಘ್ರದಲ್ಲಿ ಬದಲಾಯಿಸಿ ತೆರವಾಗಲಿರುವ ಈ ಸ್ಥಾನಕ್ಕೆ ಆರ್ ಎಸ್ ಎಸ್ ಹಾಗೂ ಸಂಘಪರಿವಾರದ ಹಿನ್ನೆಲೆಯ ರವಿ ಅವರಿಗೆ ಪಟ್ಟ ಕಟ್ಟಲು ದೆಹಲಿ ನಾಯಕರು ತೀರ್ಮಾನಿಸಿದ್ದಾರೆ. ಒಂದು ಕಡೆ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತಿರುವ …

Read More »