Breaking News

850 ರೂಪಾಯಿ ಬೆಲೆಯ ಕಾಸ್ಟ್ಲಿ ನೀರನ್ನ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಕುಡಿಯೋದಂತೆ.

Spread the love

ಒಂದು ನೀರಿನ ಬಾಟಲ್ ಬೆಲೆ ಎಷ್ಟಿರಬಹುದು ಹೇಳಿ ಅಬ್ಬಬ್ಬಾ ಅಂದ್ರೆ 50-100 ರೂಪಾಯಿ. ಯಾರಾದ್ರೂ 850 ರೂಪಾಯಿ ಒಂದು ನೀರಿನ ಬಾಟಲ್ ಬೆಲೆ ಅಂದ್ರೆ ಸಾಕು. ಅದು ನೀರಲ್ಲ ಅಮೃತ ಅಂತ ಹೇಳೋರೆ ಹೆಚ್ಚು.

ಅಷ್ಟು ಕಾಸ್ಟ್ಲಿ ನೀರನ್ನ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಕುಡಿಯೋದಂತೆ.

ಹೀಗಂತ ಹೇಳಿದ್ದು ಗೋವಾ ಕೃಷಿ ಸಚಿವ ರವಿ ನಾಯ್ಕ್.

ಇತ್ತೀಚೆಗೆ ಅಮಿತ್ ಶಾ ಗೋವಾಗೆ ಭೇಟಿ ಕೊಟ್ಟ ವೇಳೆ ಅವರಿಗೆ ಇದೇ ಕಾಸ್ಟ್ಲಿಯಸ್ಟ್‌ ನೀರಿನ ಬಾಟಲ್‌ನ್ನ ಕೊಡಲಾಗಿತ್ತು. ಇದು ಹಿಮಾಲಯ ಬ್ರಾಂಡ್ ಹೊಂದಿರೋವಂತಹ ನೀರಿನ ಬಾಟಲ್ ಆಗಿದೆ. ಇದೇ ಕಾರಣಕ್ಕೆ ಈ ಬಾಟಲ್ ನೀರಿನ ಬೆಲೆ ಇಷ್ಟು ದುಬಾರಿ.

ಫೆಬ್ರವರಿಯಲ್ಲಿ ಚುನಾವಣೆ ಸಂದರ್ಭದಲ್ಲಿ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿದ್ದಾಗ, ಇದೇ ಹಿಮಾಲಯ ಬ್ರಾಂಡ್ ನೀರು ಬೇಕು ಅಂತ ಹೇಳಿದ್ದರು. ಆದ ಕಾರಣ ಇದನ್ನ 15ಕಿಲೋ ಮೀಟರ್ ದೂರದ ಪಣಜಿಯಿಂದ ತರಿಸಲಾಗಿತ್ತು. ಇಂದು ನೀರಿನ ಬೆಲೆ ಇಷ್ಟು ದುಬಾರಿಯಾಗಿರೋದು ನಿಜಕ್ಕೂ ಬೇಸರದ ವಿಷಯ. 


Spread the love

About Laxminews 24x7

Check Also

ನಷ್ಟದಲ್ಲಿರುವ ಉದ್ಯಮಗಳಿಗೆ ಡಿಸಿಸಿ ಬ್ಯಾಂಕ್ ಸಾಲ ನೀಡದಂತೆ ಆಗ್ರಹ

Spread the loveಬೆಳಗಾವಿ : ಬಿಡಿಸಿಸಿ ಬ್ಯಾಂಕ್ ಜಿಲ್ಲೆಯಲ್ಲಿ ನಷ್ಟದಲ್ಲಿರುವ ಕೆಲವು ಕಾರ್ಖಾನೆ ಮತ್ತು ಉದ್ಯಮಗಳಿಗೆ ಕೋಟ್ಯಂತರ ರೂಪಾಯಿ ಸಾಲ ಕೊಡಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ