Home / ರಾಷ್ಟ್ರೀಯ (page 78)

ರಾಷ್ಟ್ರೀಯ

ನಾಲ್ವರು ಐಪಿಎಸ್​ ಅಧಿಕಾರಿಗಳ ವರ್ಗಾವಣೆ: ಸರ್ಕಾರ ಆದೇಶ

ಬೆಂಗಳೂರು, ಫೆಬ್ರುವರಿ 1: ನಾಲ್ವರು ಐಪಿಎಸ್​ (IPS)ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. ಅಮಿತ್ ಸಿಂಗ್, ಡಿಐಜಿಪಿ, ದಕ್ಷಿಣ ವಲಯ (ಮೈಸೂರು), ಡಾ.ಎಂ.ಬಿ.ಬೋರಲಿಂಗಯ್ಯ, ಡಿಐಜಿಪಿ, ಪಶ್ಚಿಮ ವಲಯ (ಮಂಗಳೂರು), ಶಿವಪ್ರಕಾಶ್ ದೇವರಾಜು, ಪೊಲೀಸ್ ವರಿಷ್ಠಾಧಿಕಾರಿ, (ಕಲಬುರಗಿ) ಮತ್ತು ಎ.ಶ್ರೀನಿವಾಸುಲು, ಡಿಸಿಪಿ, ಬೆಂಗಳೂರು ದಕ್ಷಿಣ ಸಂಚಾರ ವಿಭಾಗಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ ಮತ್ತು ಮುಂದಿನ ಆದೇಶದವರೆಗೆ ವರ್ಗಾವಣೆ ಮಾಡಲಾಗಿದೆ. 4 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಅಮಿತ್ ಸಿಂಗ್: ಡಿಐಜಿ, …

Read More »

ಫೆ.02 ರಿಂದ ಮೂರು ದಿನಗಳ ಕಾಲ ಹಂಪಿ ಉತ್ಸವ

ವಿಜಯನಗರ, ಫೆ.01: ನಾಳೆಯಿಂದ(ಫೆ.02) ಮೂರು ದಿನಗಳ ಕಾಲ ಹಂಪಿ ಉತ್ಸವ(Hampi Utsava) ನಡೆಯಲಿದೆ. ಈ ಹಿನ್ನಲೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ನಾಲ್ಕು ವೇದಿಕೆಗಳನ್ನು ನಿರ್ಮಾಣ ಮಾಡಲಾಗಿದೆ. ಅದರಂತೆಹಂಪಿ ಉತ್ಸವದ ಅಂತಿಮ ಹಂತದ ಸಿದ್ಧತೆಯನ್ನು ವಿಜಯನಗರ ಜಿಲ್ಲಾಧಿಕಾರಿ ದಿವಾಕರ್, ಎಸ್ಪಿ ಶ್ರೀಹರಿಬಾಬು ಬಿಎಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಖ್ಯವೇದಿಕೆಯ ನಿರ್ಮಾಣ ಮಾಡುತ್ತಿರುವ ಕಲಾವಿದ ಅರುಣ್ ಸಾಗರ್ ಅವರಿಂದ ಮಾಹಿತಿ ಪಡೆದ ಡಿಸಿ, ಎಸ್ಪಿ. ಮೂರು ದಿನಗಳ ಕಾಲ ನಡೆಯುವ ಹಂಪಿ ಉತ್ಸವಕ್ಕೆ …

Read More »

ಕಾಂತರಾಜ ವರದಿ ಪಡೆಯುವುದಕ್ಕೆ 1 ತಿಂಗಳ ಟೈಮ್ ನೀಡಿದ್ದೀನಿ: ಸಿಎಂ

ಬೆಂಗಳೂರು, : ಕಾಂತರಾಜ ವರದಿ ಪಡೆಯುವುದಕ್ಕೆ 1 ತಿಂಗಳ ಟೈಮ್ ನೀಡಿದ್ದೀನಿ. ಆಮೇಲೆ ಸ್ವೀಕಾರ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah)ಹೇಳಿದ್ದಾರೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವರದಿಯಲ್ಲಿ ಏನಾದರೂ ವ್ಯತ್ಯಾಸ ಕಂಡುಬಂದರೆ ಸರಿಪಡಿಸುತ್ತೇವೆ. ಜಾತಿಗಣತಿಗೆ ಕಾಂತರಾಜ ಸಮಿತಿ ರಚಿಸಿ ಹಣ ಬಿಡುಗಡೆ ಮಾಡಿದ್ದೆ. ಹೆಚ್​ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕಾಂತರಾಜ ಸಮಿತಿ ವರದಿ ಸ್ವೀಕರಿಸಲಿಲ್ಲ. ನಾನು ಕಾಂತರಾಜ ಸಮಿತಿ ವರದಿ ಸ್ವೀಕರಿಸುತ್ತೇವೆ ಎಂದು ಹೇಳಿದ್ದಾರೆ. …

Read More »

ಧಾರವಾಡ ಬಣ ರಾಜಕೀಯ ಶಮನಕ್ಕೆ ಮುಂದಾದ ಬಿವೈ ವಿಜಯೇಂದ್ರ: ಶೆಟ್ಟರ್, ಮುನೇನಕೊಪ್ಪ, ಬೆಲ್ಲದ್ ಜೊತೆ ಸಭೆ

ಹುಬ್ಬಳ್ಳಿ, ಫೆಬ್ರುವರಿ 1: ಧಾರವಾಡದ ಬಣ ರಾಜಕೀಯವನ್ನು ಶಮನ ಮಾಡಲು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ(BY Vijayendra)ಮುಂದಾಗಿದ್ದಾರೆ. ಆ ಮೂಲಕ ಮಾಜಿ ಸಿಎಂ ಜಗದೀಶ್​ ಶೆಟ್ಟರ್​, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮತ್ತು ವಿಧಾನಸಭಾ ಉಪನಾಯಕ ಅರವಿಂದ ಬೆಲ್ಲದ್​ ಅವರೊಂದಿಗೆ ಹುಬ್ಬಳ್ಳಿ ಪ್ರವಾಸಿ‌ ಮಂದಿರದಲ್ಲಿ ಪ್ರತ್ಯೇಕ ಸಭೆ ಮಾಡಿದ್ದಾರೆ. ಮೂವರು ನಾಯಕರೊಂದಿಗೆ ಬಿ.ವೈ.ವಿಜಯೇಂದ್ರ ಚರ್ಚೆ ಮಾಡಿದ್ದಾರೆ. ಧಾರಾವಾಡ ಜಿಲ್ಲೆಯಲ್ಲಿ ಜಗದೀಶ್ ಶೆಟ್ಟರ್ ಘರವಾಪ್ಸಿಯಾದರೂ ಭಿನ್ನಮತವಿತ್ತು. ಶೆಟ್ಟರ್ ಮೆರವಣಿಗೆಯಲ್ಲೂ ಸ್ಥಳೀಯ ನಾಯಕರು …

Read More »

ಕಲಬುರಗಿ: ಹೊಲದಿಂದ ಬರ್ತಿದ್ದ ಒಂಟಿ ಮಹಿಳೆ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ; ಆಸ್ಪತ್ರೆಗೆ ದಾಖಲು

ಕಲಬುರಗಿ, : ಬೆಳಗಾವಿ ಜಿಲ್ಲೆಯ ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ, ಹಲ್ಲೆ ನಡೆಸಿದ ಪ್ರಕರಣ ಮಾಸುವ ಮುನ್ನವೇ ಇದೀಗಕಲಬುರಗಿ(Kalaburagi) ಜಿಲ್ಲೆಯ ಯಡ್ರಾಮಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಒಂಟಿ ಮಹಿಳೆ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ಲಿಂಗಮ್ಮ ಹಲ್ಲೆಗೊಳಾದ ಮಹಿಳೆ. ಇವರು ಹೊಲದಲ್ಲಿ ಕೃಷಿ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದಂತೆ 6 ರಿಂದ 7 ಜನರ ಗುಂಪೊಂದು ಕಬ್ಬಿಣದ ರಾಡ್, ಚಾಕು ಹಾಗೂ ಕಲ್ಲಿನಿಂದ ಲಿಂಗಮ್ಮನ ಮೇಲೆ ಏಕಾಎಕಿ ಹಲ್ಲೆ ನಡೆಸಿದೆ. …

Read More »

ಬೆಂಗಳೂರು ಜಯದೇವ ಆಸ್ಪತ್ರೆಯ ಪ್ರಭಾರ ನಿರ್ದೇಶಕರಾಗಿ ಡಾ.ರವೀಂದ್ರನಾಥ್ ನೇಮಕ

ಬೆಂಗಳೂರು,: ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ (Bengaluru Jayadeva Hospital) ಪ್ರಭಾರ ನಿರ್ದೇಶಕರಾಗಿ ಡಾ.ರವೀಂದ್ರನಾಥ್ (Dr Ravindranath) ಅವರನ್ನು ನೇಮಕ ಮಾಡಲಾಗಿದೆ. ಡಾ.ಸಿ.ಎನ್.ಮಂಜುನಾಥ ಅವರ ಅವಧಿ ಮುಕ್ತಾಯ ಹಿನ್ನೆಲೆಯಲ್ಲಿ ಪ್ರಭಾರ ನಿರ್ದೇಶಕರನ್ನಾಗಿ ಡಾ.ರವೀಂದ್ರನಾಥ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 69 ವಯಸ್ಸಿನ ರವೀಂದ್ರನಾಥ್ ಅವರು ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರ ಈ ಹಿಂದೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕುಲಪತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ …

Read More »

ರಾಜ್ಯಾದ್ಯಂತ ಲೋಕಾಯುಕ್ತ ದಾಳಿ: 10 ಅಧಿಕಾರಿಗಳ ಬಳಿ ಏನೇನು ಸಿಕ್ಕಿದೆ? ಇಲ್ಲಿದೆ ವಿವರ

ಬೆಂಗಳೂರು, ಜನವರಿ 31: ಆದಾಯಕ್ಕೂ ಮೀರಿದ ಅಸ್ತಿ ಗಳಿಕೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ 10 ಸರ್ಕಾರಿ ಅಧಿಕಾರಿಗಳಿಗೆ ಸೇರಿದ 40 ಸ್ಥಳಗಳಲ್ಲಿ ಲೋಕಾಯುಕ್ತ(Lokayukta Raid)ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು, ತುಮಕೂರು, ಚಿಕ್ಕಮಗಳೂರು, ಮಂಡ್ಯ, ಹಾಸನ, ಕೊಪ್ಪಳ, ಚಾಮರಾಜನಗರ, ಮೈಸೂರು, ಬಳ್ಳಾರಿ, ವಿಜಯನಗರ, ಮಂಗಳೂರಿನಲ್ಲಿ ದಾಖಲೆಗಳ ಪರಿಶೀಲನೆ ಮಾಡಲಾಗಿದೆ. ಸದ್ಯ ಉಳಿದ ಭ್ರಷ್ಟರಿಗೂ ನಡುಕ ಶುರುವಾಗಿದೆ. 10 ಸರ್ಕಾರಿ ಅಧಿಕಾರಿಗಳ ಬಳಿ ಏನೇನು ಸಿಕ್ಕಿದೆ ಎಂಬುದಕ್ಕೆ ಇಲ್ಲಿದೆ ವಿವರ. ಕೋಟಿ ಕುಬೇರ …

Read More »

ಆಯಾ ವರ್ಷವೇ ಪ್ರಶಸ್ತಿ ನೀಡಿ ಗೌರವಿಸಬೇಕು- ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಜ.31: ಪ್ರಶಸ್ತಿ ನೀಡಿಕೆ ಮುಂದೂಡಬಾರದು, ಆಯಾ ವರ್ಷವೇ ನೀಡಿ ಗೌರವಿಸಬೇಕು ಎಂದು ಸಿಎಂ ಸಿದ್ದರಾಮಯ್ಯ(Siddaramaiah) ಹೇಳಿದರು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಜೀವಮಾನ ಸಾಧನೆಯ ವಿವಿಧ ಪ್ರಶಸ್ತಿ ಪ್ರದಾನಸಮಾರಂಭದಲ್ಲಿಮಾತನಾಡಿದ ಅವರು ‘ಪ್ರಶಸ್ತಿಗಳ ಆಯ್ಕೆಯಲ್ಲಿ ಆಯ್ಕೆ ಸಮಿತಿ ನಿರ್ಣಯವೇ ಅಂತಿಮ ನಾವು ಮೂಗು ತೀರಿಸುವುದಿಲ್ಲ. ಸಾಹಿತ್ಯ, ಕಲೆ , ಸಂಸ್ಕೃತಿ ಮತ್ತಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಉತ್ತೇಜನ ನೀಡುವುದು ಸಮಾಜ ಮತ್ತು ಸರ್ಕಾರದ ಜವಾಬ್ದಾರಿ ಎಂದರು.   4 …

Read More »

ಬಿಜೆಪಿ ಜೊತೆ ಹೊಂದಾಣಿಕೆಗೆ ಜನಾರ್ದನ್‌ ರೆಡ್ಡಿ ನಿರ್ಧಾರ

ಬೆಂಗಳೂರು: ಸದ್ಯ ಬಿಜೆಪಿ ಸೇರ್ಪಡೆ ಇಲ್ಲ, ಬದಲಿಗೆ ಪಕ್ಷ ಹೊಂದಾಣಿಕೆಗೆ ಶಾಸಕ ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ (KRPP) ಸ್ಥಾಪಕ ಜನಾರ್ದನ ರೆಡ್ಡಿ (Janardhana Reddy) ನಿರ್ಧರಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಜನಾರ್ದನ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆ ನಡೆದಿತ್ತು. ಈ ವೇಳೆ ಬಿಜೆಪಿ ಜೊತೆ ಹೊಂದಾಣಿಕೆಗೆ ನಾಯಕರು ಸಭೆಯಲ್ಲಿ ಸಹಮತ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ರೆಡ್ಡಿ ಸದ್ಯ ಬಿಜೆಪಿ ಸೇರ್ಪಡೆ ಇಲ್ಲ …

Read More »

ಮೂರು ಕೋಟಿ ಮೌಲ್ಯದ ನಿಷೇಧಿತ ಇ-ಸಿಗರೇಟ್ ಪತ್ತೆ,

ಬೆಂಗಳೂರು, ಜನವರಿ : ಕೇಂದ್ರ ಸರ್ಕಾರ ನಿಷೇಧಿಸಿರುವ, ಸುಮಾರು ಮೂರು ಕೋಟಿ ರೂಪಾಯಿ ಮೌಲ್ಯದ ಇ-ಸಿಗರೇಟ್ (E-cigarette) ಅನ್ನು ಸಿಸಿಬಿ (CCB Police) ನಾರ್ಕೋಟಿಕ್ಸ್ ವಿಭಾಗದ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಇ-ಸಿಗರೇಟ್​ಗಳನ್ನು ದುಬೈಯಿಂದ ಬೆಂಗಳೂರಿಗೆ ತರಿಸಲಾಗಿತ್ತು ಎಂಬುದು ತಿಳಿದುಬಂದಿದೆ. ಒಂದು ಸಿಗರೇಟ್​​ಗೆ ಐದರಿಂದ ಆರು ಸಾವಿರ ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು. ಕೊರಿಯರ್ ಮೂಲಕ ಬರುತ್ತಿತ್ತು ಇ-ಸಿಗರೇಟ್ ಇ-ಸಿಗರೇಟ್ ಅನ್ನು ಬ್ಲೂ ಡಾರ್ಟ್ ಕೊರಿಯರ್ ಮೂಲಕ ದುಬೈಯಿಂದ ದೆಹಲಿಗೆ ತೆರಿಸಿ ಅಲ್ಲಿಂದ ಬೆಂಗಳೂರಿಗೆ ತರಿಸಲಾಗಿತ್ತು. …

Read More »