Breaking News

ರಾಷ್ಟ್ರೀಯ

ಒಂದು ರಾಷ್ಟ್ರ-ಒಂದು ಪಡಿತರ ಚೀಟಿ’ ಯೋಜನೆ

ಪಡಿತರ ಚೀಟಿದಾರರು ತಪ್ಪದೆ ಈ ಸುದ್ದಿ ಓದಿ. ನಿಮ್ಮ ಮೊಬೈಲ್ ನಂಬರ್ ಬದಲಾಗಿದ್ದರೆ, ಅದನ್ನು ಪಡಿತರ ಚೀಟಿಯಲ್ಲಿ ತಕ್ಷಣ ನವೀಕರಿಸಿ. ಪಡಿತರ ಚೀಟಿಯಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀವು ಹೇಗೆ ಸುಲಭವಾಗಿ ನವೀಕರಿಸಬಹುದು.   ಪಡಿತರ ಚೀಟಿಯಲ್ಲಿ ಮೊಬೈಲ್ ಸಂಖ್ಯೆಯನ್ನು ನವೀಕರಿಸುವುದು ತುಂಬಾ ಸುಲಭ, ಇದನ್ನು ನೀವು ಮನೆಯಲ್ಲಿಯೇ ಕುಳಿತು ಸುಲಭವಾಗಿ ಮಾಡಬಹುದು.   ಪಡಿತರ ಚೀಟಿಯಲ್ಲಿ ಮೊಬೈಲ್ ಸಂಖ್ಯೆಯನ್ನು ನವೀಕರಿಸಿ 1. ಮೊದಲನೆಯದಾಗಿ ನೀವು ಈ ವೆಬ್ ಸೈಟ್‌ಗೆ …

Read More »

ಗಣೇಶವಾಡಿ ಗ್ರಾಮದ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಶಾಸಕ ಬಾಲಚಂದ್ರ ಜಾರಕಿಹೊಳಿ, ಯುವ ನಾಯಕರಾದ ರಾಹುಲ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ

  ಘಟಪ್ರಭಾ : ಪ್ರಾಚೀನ ಕಾಲದಿಂದಲೂ ನಾವು ದೈವ ಭಕ್ತರು. ದೇವರನ್ನು ನಂಬಿ ಬದುಕುತ್ತಿರುವವರು. ದೇವರಿಂದಲೇ ಈ ಜಗತ್ತು ನಡೆದಿದೆ. ದೇಶವು ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತಿರುವುದರಿಂದ ನಮ್ಮದು ಜಾತ್ಯಾತೀತ ರಾಷ್ಟ್ರವೆಂದು ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಸೋಮವಾರ ಸಂಜೆ ಸಮೀಪದ ಗಣೇಶವಾಡಿ ಗ್ರಾಮದ ಲಕ್ಷ್ಮೀದೇವಿ ದೇವಸ್ಥಾನದ 25 ನೇ ವರ್ಷದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಜನರು ದೇವರ ಮೇಲೆ …

Read More »

ಮಲೆನಾಡಲ್ಲಿ ಹೊಸ ರಾಜಕೀಯ ಮನ್ವಂತರ : ಕಾಂಗ್ರೆಸ್‌ಗೆ ಬಣ ರಾಜಕೀಯ ಬಿಸಿ

ಶಿವಮೊಗ್ಗ: 2023ರ ಚುನಾವಣೆ ಶಿವಮೊಗ್ಗ ಜಿಲ್ಲೆ ಪಾಲಿಗಷ್ಟೇ ಅಲ್ಲದೆ ರಾಜ್ಯ ರಾಜಕಾರಣದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡುವುದು ನಿಶ್ಚಿತ. ಬಿ.ಎಸ್‌.ಯಡಿಯೂರಪ್ಪ, ಕೆ.ಎಸ್‌.ಈಶ್ವರಪ್ಪ ನಿರ್ಗಮನದಿಂದ ತೆರವಾಗುವ ಕ್ಷೇತ್ರಗಳಿಗೆ ಮುಂದ್ಯಾರು? ಬಣ ರಾಜಕಾರಣದಿಂದ ಕಂಗೆಟ್ಟಿರುವ ಕಾಂಗ್ರೆಸ್‌ ವರಿಷ್ಠರು ಇದಕ್ಕೆ ಮದ್ದು ಅರೆಯುವರೆ? ಜೆಡಿಎಸ್‌ ತನ್ನ ಅಭ್ಯರ್ಥಿಗಳನ್ನು ಉಳಿಸಿಕೊಳ್ಳುವುದೇ? ಎಂಬುದೆಲ್ಲ ಚುನಾವಣೆಗೆ ವರ್ಷವಿರುವಾಗಲೇ ಚರ್ಚೆಗೆ ಗ್ರಾಸವಾಗಿದೆ. ಉತ್ತರಾಧಿಕಾರಿ ಯಾರು?: ಶಿಕಾರಿಪುರದಿಂದ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಸ್ಪರ್ಧಿಸುವುದಿಲ್ಲ ಎಂಬ ಮಾತು ಪಕ್ಷದೊಳಗೆ ಕೇಳಿ ಬರುತ್ತಿದೆ. ಹಾಗಾದರೆ ಅವರ …

Read More »

ಕನ್ನಡಿಗ ಅನಿಲ್ ಹೆಗ್ಡೆಗೆ ಬಿಹಾರ್ ರಾಜ್ಯಸಭಾ ಟಿಕೆಟ್

ಪಾಟ್ನಾ: ಬಿಹಾರದಿಂದ ರಾಜ್ಯಸಭೆಗೆ ಈ ಬಾರಿ ಆಡಳಿತಾರೂಢ ಜೆಡಿಯು ಪಕ್ಷವು ಕನ್ನಡಿಗ ಹಾಗೂ ಉಡುಪಿ ಮೂಲದ ಅನಿಲ್ ಹೆಗ್ಡೆ ಅವರಿಗೆ ಟಿಕೆಟ್ ನೀಡಿದೆ. ಮೂಲತಃ ಮಂಗಳೂರಿನವರಾಗಿದ್ದ ಅನಿಲ್ ಹೆಗ್ಡೆ ಅವರು ಸುದೀರ್ಘ ಅವಧಿವರೆಗೆ ಜಾರ್ಜ್ ಫರ್ನಾಂಡಿಸ್ ಅವರ ಕಾರ್ಯದರ್ಶಿಯಾಗಿದ್ದರು. ಮಹೇಂದ್ರ ಪ್ರಸಾದ್ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದ್ದು, ಇದೀಗ ಜೆಡಿಯು ಅನಿಲ್ ಹೆಗ್ಡೆ ಅವರನ್ನು ಕಣಕ್ಕಿಳಿಸಿರುವುದಾಗಿ ಪ್ರಕಟಣೆ ಮೂಲಕ ತಿಳಿಸಿದೆ. ಕಳೆದ ವರ್ಷ ಡಿಸೆಂಬರ್ 27 ರಂದು ಜನತಾ …

Read More »

ಪಂಜಾಬ್ ವಿರುದ್ಧ ಸೇಡು ತೀರಿಸಿಕೊಳ್ಳಲು ಮೈದಾನಕ್ಕೆ ಇಳಿದ ಡೆಲ್ಲಿ ಕ್ಯಾಪಿಟಲ್ಸ್

ಇಂಡಿಯನ್​ ಪ್ರೀಮಿಯರ್​ ಲೀಗ್​ ಟೂರ್ನಿಯ 64ನೇ ಪಂದ್ಯದಲ್ಲಿಂದು ಪಂಜಾಬ್​ ಕಿಂಗ್ಸ್​​ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ಮುಖಾಮುಖಿಯಾಗಿವೆ. ಟಾಸ್ ಗೆದ್ದಿರುವ ಕನ್ನಡಿಗ ಮಯಾಂಕ್ ಅಗರ್ವಾಲ್, ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಮುಂಬೈನ ಡಿ.ವೈ.ಪಾಟೀಲ್​ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದು, ಎರಡೂ ತಂಡಗಳು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿವೆ. ಈ ಟೂರ್ನಿಯಲ್ಲಾದ ಮೊದಲ ಮುಖಾಮುಖಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್​ ಪಡೆಯನ್ನ​ 9 ವಿಕೆಟ್​ಗಳಿಂದ ಮಣಿಸಿತ್ತು. ಇದೀಗ ಪಂಜಾಬ್​ ಕಿಂಗ್ಸ್​​ ಸೇಡು ತೀರಿಸಿಕೊಳ್ಳೋ ಲೆಕ್ಕಾಚಾರದಲ್ಲಿದೆ.

Read More »

ಹಿಂದು ಯುವಕ-ಮುಸ್ಲಿಂ ಯುವತಿಯ ಲವ್ ಸ್ಟೋರಿ: ಮದುವೆಯಾದ ಬಳಿಕ ನಡೀತು ಭಾರೀ ಹೈಡ್ರಾಮಾ!

ಕೊಪ್ಪಳ: ಒಂದು ವರ್ಷದಿಂದ ಪ್ರೀತಿಸುತ್ತಿದ್ದ ಅಂತರ್ಧಮೀಯ ಜೋಡಿ, 5 ದಿನದ ಹಿಂದೆ ಮನೆ ಬಿಟ್ಟು ಹೋಗಿ ಮದುವೆ ಆಗಿದೆ. ಇದೀಗ ನವ ದಂಪತಿ ರಕ್ಷಣೆ ಕೋರಿ ಪೊಲೀಸ್ ಠಾಣೆಗೆ ಬಂದಿದ್ದು, ಎರಡೂ ಗುಂಪಿನ ಮುಖಂಡರು ಠಾಣೆಗೆ ದೌಡಾಯಿಸಿದ್ದಾರೆ. ನಿನ್ನೆ ಸಂಜೆಯಿಂದಲೂ ಹೈಡ್ರಾಮ ಶುರುವಾಗಿದ್ದು, ಮದುವೆ ಪ್ರಹಸನ ಇಂದು ಮುಂದುವರಿಯಿತು.   ಕನಕಗಿರಿ ಪಟ್ಟಣದ 21 ವರ್ಷದ ದಿಲ್ ಶಾದ್ ಬೆಗಂ‌ ಮತ್ತು 22 ವರ್ಷದ ಕನಕರೆಡ್ಡಿ ಪ್ರೇಮ ವಿವಾಹ ಪ್ರಕರಣ ನಿನ್ನೆಯಿಂದ …

Read More »

35 ವಯೋಮಾನದವರಿಗೆ ಆದ್ಯತೆ.. 75 ದಾಟಿದವರಿಗೆ ಕೋಕ್ : ಇದು ಕಾಂಗ್ರೆಸ್ ನ ತೀರ್ಮಾನ

ಉದಯಪುರ: ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು, ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ರಾಜಸ್ಥಾನದಲ್ಲಿ ಕಾಂಗ್ರೆಸ್ ಚಿಂತನಾ ಶಿಬಿರ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯದಿಂದ ಸಿದ್ದರಾಮಯ್ಯ, ಡಿಕೆಶಿವಕುಮಾರ್, ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಇನ್ನು ಗುಲಾಬ್ ನಬಿ, ಹಿರಿಯ ನಾಯಕ ಪಿ ಚಿದಂಬರಂ, ಪ್ರಿಯಾಂಕ ಗಾಂಧಿ ವಾದ್ರಾ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ದೇಶದ ವಿವಿದೆಡೆಯ ನಾಯಕರು ಒಟ್ಟಿಗೆ ಸೇರಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಚಿಂಥನ ಮಂಥನ …

Read More »

ಕಾಮುಕ ಪ್ರಿಯಕರನಿಗಾಗಿ ಅಪ್ರಾಪ್ತ ಮಗಳನ್ನೇ ಮಂಚಕ್ಕೆ ಕಳಿಸಿದ ಪಾಪಿ ತಾಯಿ: ಮಗುವನ್ನು ಹೆತ್ತ ಬಾಲಕಿ!

ಚೆನ್ನೈ: ಕೆಟ್ಟ ಮಕ್ಕಳು ಇರಬಹುದು, ಆದರೆ ಕೆಟ್ಟ ತಾಯಿ ಇರುವುದಿಲ್ಲ ಎನ್ನುವ ನಾಣ್ಣುಡಿ ಇದೆ. ಆದರೆ ಇಲ್ಲೊಂದು ಭಯಾನಕ ಹಾಗೂ ಮಾನವ ಕುಲವೇ ತಲೆತಗ್ಗಿಸುವ ಘಟನೆಯೊಂದು ವರದಿಯಾಗಿದೆ. ಹೆತ್ತಾಕೆಯೇ ತನ್ನ ಮಗಳನ್ನು ಪ್ರಿಯಕರನಿಗೆ ಒಪ್ಪಿಸಿ, ಅತ್ಯಾಚಾರ ಮಾಡಲು ಅವಕಾಶ ಕೊಟ್ಟಿದ್ದಾಳೆ! ಇದೀಗ ಆ ಬಾಲಕಿ ತಾಯಿಯ ಪ್ರಿಯಕರನಿಂದ ಗರ್ಭ ಧರಿಸಿ ಮಗು ಹೆತ್ತಿದ್ದಾಳೆ! ತಮಿಳುನಾಡಿನಲ್ಲಿ ಈ ಘಟನೆ ನಡೆದಿದೆ. ಚೆನ್ನೈನ ಒಟ್ಟೇರಿ ಪ್ರದೇಶದ 40 ವರ್ಷದ ಮಹಿಳೆ ವಿಕೃತಿ ಮೆರೆದವಳು. ಈಕೆ …

Read More »

ಅದೆಷ್ಟೋ ಜನರ ಜನ್ಮದಿನ ಯಾವಾಗ ಎಂದು ಸಾಮಾನ್ಯವಾಗಿ ತಿಳಿಯುವುದೇ ಫೇಸ್​ಬುಕ್​ನಿಂದ. ಅಂಥ ಫೇಸ್​ಬುಕ್​ ಎಂಬ ವೇದಿಕೆಯನ್ನು ಒದಗಿಸಿದ ಮಾರ್ಕ್​ ಝುಕರ್​ಬರ್ಗ್​ ಜನ್ಮದಿನಕ್ಕೆ ಫೇಸ್​ಬುಕ್​ ಬಳಕೆದಾರರು ಜನ್ಮದಿನದ ಶುಭಾಶಯ

ಬೆಂಗಳೂರು: ಅದೆಷ್ಟೋ ಜನರ ಜನ್ಮದಿನ ಯಾವಾಗ ಎಂದು ಸಾಮಾನ್ಯವಾಗಿ ತಿಳಿಯುವುದೇ ಫೇಸ್​ಬುಕ್​ನಿಂದ. ಅಂಥ ಫೇಸ್​ಬುಕ್​ ಎಂಬ ವೇದಿಕೆಯನ್ನು ಒದಗಿಸಿದ ಮಾರ್ಕ್​ ಝುಕರ್​ಬರ್ಗ್​ ಜನ್ಮದಿನಕ್ಕೆ ಫೇಸ್​ಬುಕ್​ ಬಳಕೆದಾರರು ಜನ್ಮದಿನದ ಶುಭಾಶಯಗಳನ್ನೇ ಹರಿಸಿದ್ದಾರೆ.   1984ರ ಮೇ 14ರಂದು ಜನಿಸಿದ ಮಾರ್ಕ್​ ಝುಕರ್​ಬರ್ಗ್​ ಫೇಸ್​ಬುಕ್​ ಆರಂಭಿಸಿದ್ದು, ಜಗತ್ತಿನಾದ್ಯಂತರ ಜನರಿಗೆ ಅಭಿವ್ಯಕ್ತಿಗೆ ಅವಕಾಶ ಮಾಡಿಕೊಟ್ಟಿದ್ದಲ್ಲದೆ, ಜನರನ್ನು ಬೆಸೆಯುವ ಸಾಧನವನ್ನೂ ಆಗಿಸಿದ್ದಾರೆ. ಅಂಥ ಝುಕರ್​ಬರ್ಗ್​ಗೆ 17 ಲಕ್ಷಕ್ಕೂ ಅಧಿಕ ಮಂದಿ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ. ಜನ್ಮದಿನಕ್ಕೆ ಹೇಳುವಂಥ …

Read More »

ರಾಜ್ಯಸಭೆಗೆ ನಿರ್ಮಲಾ ಸೀತಾರಾಮನ್‌, ಪರಿಷತ್‌ಗೆ ವಿಜಯೇಂದ್ರ ಆಯ್ಕೆಗೆ ಸಮ್ಮತಿ

ಬೆಂಗಳೂರು: ರಾಜ್ಯಸಭೆಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸೇರಿದಂತೆ ಐವರು ಹಾಗೂ ವಿಧಾನ ಪರಿಷತ್‌ಗೆ ಶಾಸಕ ಬಿ.ಎಸ್. ಯಡಿಯೂರಪ್ಪ ಮಗ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಇಪ್ಪತ್ತು ಸಂಭ್ಯಾವರ ಹೆಸರುಗಳನ್ನು ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿಗೆ ಶಿಫಾರಸು ಮಾಡಲು ಶನಿವಾರ ನಡೆದ ಬಿಜೆಪಿ ರಾಜ್ಯ ಘಟಕದ ಪ್ರಮುಖರ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.   ವಿಧಾನಸಭೆಯಿಂದ ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ನಡೆಯುವ ಚುನಾವಣೆ ಹಾಗೂ …

Read More »