Breaking News
Home / ರಾಷ್ಟ್ರೀಯ (page 599)

ರಾಷ್ಟ್ರೀಯ

ಮಮತಾ ಬ್ಯಾನರ್ಜಿ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂಬ ಆರೋಪದಡಿ ದೂರು ದಾಖಲು

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಎಲ್ಲೆಡೆ ಕೇಳಿಬರುತ್ತಿದೆ. ಸಿಎಂ ಮಮತಾ ಬ್ಯಾನರ್ಜಿ ಅವರು ಮುಂಬೈ ನಲ್ಲಿ ನಡೆಸಿದ ಸುದ್ದಿಗೋಷ್ಠಿಯ ಮಧ್ಯದಲ್ಲಿ ರಾಷ್ಟ್ರಗೀತೆ ಹಾಡಲು ಪ್ರಾರಂಭಿಸಿದ್ದಾರೆ. ಆದರೆ ಅದನ್ನು ಪೂರ್ತಿಯಾಗಿಯೂ ಹಾಡಿಲ್ಲ, ಅರ್ಧದಲ್ಲೇ ನಿಲ್ಲಿಸಿ ಕುಳಿತುಕೊಂಡಿದ್ದಾರೆ. ಇದು ರಾಷ್ಟ್ರಗೀತೆಗೆ ಮಾಡಿದ ಅವಮಾನ ಎಂದು ಜನ ಕಿಡಿಕಾರುತ್ತಿದ್ದಾರೆ. ಮಮತಾ ಬ್ಯಾನರ್ಜಿ ಅವರ ಸುದ್ದಿಗೋಷ್ಠಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಭಾರತೀಯ ಜನತಾ …

Read More »

ಪಡಿತರ ಅಂಗಡಿಗಳಲ್ಲಿ ಮಿನಿ ಎಲ್‌ಪಿಜಿ ಸಿಲಿಂಡರ್‌ : ಕೇಂದ್ರ ಸಚಿವ ಪಿಯೂಷ್ ಗೋಯಲ್ ಘೋಷಣೆ

ನವದೆಹಲಿ: ಮಿನಿ ಎಲ್ ಪಿಜಿ ಸಿಲಿಂಡರ್ ಮಾರಾಟ ಸೇರಿದಂತೆ ಜನರಿಗೆ ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ಪಡಿತರ ಅಂಗಡಿಗಳಲ್ಲಿ ಆಹಾರ ಧಾನ್ಯಗಳ ಜತೆಗೆ ಇತರೆ ವಸ್ತುಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ . ಪಡಿತರ ಅಂಗಡಿಗಳ ಮೂಲಕ ಮಿನಿ ಎಲ್‌ಪಿಜಿ ಸಿಲಿಂಡರ್‌ಗಳ ಮಾರಾಟಕ್ಕೆ ಅನುಕೂಲ ಮಾಡಿಕೊಡಲಾಗಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.   ಪಡಿತರ ಅಂಗಡಿಗಳಲ್ಲಿ ಮಿನಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಮಾರಾಟ ಮಾಡುವ ಕುರಿತು ಈಗಾಗಲೇ ತೈಲ ಮಾರುಕಟ್ಟೆ ಕಂಪನಿಗಳೊಂದಿಗೆ ಚರ್ಚಿಸಲಾಗಿದೆ …

Read More »

23 ರಾಷ್ಟ್ರಗಳಲ್ಲಿ `ಒಮಿಕ್ರಾನ್’ ಸೋಂಕು ಪತ್ತೆ

ನವದೆಹಲಿ : ಕಳೆದ ಒಂದು ವಾರದಲ್ಲಿಯೇ ದಕ್ಷಿಣ ಆಫ್ರಿಕಾದಿಂದ ಒಮಿಕ್ರಾನ್ ವೈರಸ್ 23 ದೇಶಗಳನ್ನು ತಲುಪಿದೆ. ವಿಶ್ವದಾದ್ಯಂತ ಕೊರನಾ ರೂಪಾಂತರಿ ಒಮಿಕ್ರಾನ್ ವೈರಸ್ ಸೋಂಕಿನ ಆತಂಕ ಹೆಚ್ಚಳವಾಗಿದ್ದು, 23 ರಾಷ್ಟ್ರಗಳಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಿದೆ.ಕೊರೊನಾ ವೈರಸ್ ಒಮಿಕ್ರಾನ್​ನ ಹೊಸ ರೂಪಾಂತರವು ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ.   ದಕ್ಷಿಣ ಆಫ್ರಿಕಾ-77, ಯುಕೆ-22, ಬೋಟ್ಸ್ ವಾನದಲ್ಲಿ 19, ನೆದರ್ ಲ್ಯಾಂಡ್ ನಲ್ಲಿ 16, ಪೋರ್ಚಗಲ್ ನಲ್ಲಿ 13, ಜರ್ಮನಿಯಲ್ಲಿ 9, ಇಟಲಿ 9, ಆಸ್ಟ್ರೇಲಿಯಾ …

Read More »

ಬೆಳಗಾವಿಯಲ್ಲಿ ನಡೆಯಲಿದೆ ಚಳಿಗಾಲ ಅಧಿವೇಶನ

ಬೆಂಗಳೂರು: ಕೊರೊನಾ ಆತಂಕ ಕಡಿಮೆಯಾದ್ರೂ ರೂಪಾಂತರಿಯ ಆತಂಕ ಕಡಿಮೆಯಾಗ್ತಿಲ್ಲ. ಈಗ ಎಲ್ಲೆಲ್ಲೂ ಓಮಿಕ್ರಾನ್ ಭಯ ಶುರುವಾಗಿದೆ. ಇದು ಅಧಿವೇಶನಕ್ಕೂ ತಟ್ಟುತ್ತಾ ಎಂಬ ಅನುಮಾನ ಕಾಡುತ್ತಿದೆ. ಕೊವೀಡ್ ಬಿಗಿ ಕ್ರಮಗಳೊಂದಿಗೆ ಸದನ ನಡೆಸಲು ಸರ್ಕಾರ ನಿರ್ಧಾರ ಮಾಡಿದೆ. ನಿಗಧಿಯಂತೆ 13 ರಿಂದ 26ರ‌ವರೆಗೆ ಅಧಿವೇಶನ ನಡೆಸಲು ಸಿದ್ದತೆ ‌ನಡೆಸಲಾಗಿದೆ. ಈ ಹಿನ್ನೆಲೆ ಇಂದು ಸಂಜೆ ಬೆಳಗಾವಿಗೆ ತೆರಳುತ್ತಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡ ತಿಳಿಸಿದ್ದಾರೆ. ಅಧಿವೇಶನದ ಹಿನ್ನೆಲೆ ಸ್ಪೀಕರ್ ನಾಳೆ …

Read More »

ಶಾಸಕರ ನಡುವೆ ಮಾತಿನ ಚಕಮಕಿ ನಡೆದಿದೆ: ಶಾಸಕರ ಗಲಾಟೆ ಕುರಿತು ಶೆಟ್ಟರ್ ಪ್ರತಿಕ್ರಿಯೆ

ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಸಿಎಂ ಹಾಗೂ ಪಕ್ಷದ ನಾಯಕರ ಸಮ್ಮುಖದಲ್ಲಿ ಸಭೆ ನಡೆಸಿ ಚರ್ಚೆ ಮಾಡಿದ್ದೇವೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಪಕ್ಷದ ಅಭ್ಯರ್ಥಿಯನ್ನ ಗೆಲ್ಲಿಸುತ್ತೇವೆ ಎಂದು ಮಾಜಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.   ಹುಬ್ಬಳ್ಳಿ ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ರಾಣೆಬೆನ್ನೂರ ಶಾಸಕ ಅರುಣಕುಮಾರ ಹಾಗೂ ಎಂಎಲ್ ಸಿ ಆರ್ ಶಂಕರ್ ಮಧ್ಯೆ ಮಾತಿನ ಚಕಮಕಿ‌ ನಡೆದಿದೆ. ಗಲಾಟೆ ಆಗಿಲ್ಲ. ಅವರಿಬ್ಬರು ಕ್ಷೇತ್ರದ ವಿಚಾರದಲ್ಲಿ ಚರ್ಚೆ …

Read More »

ಡಿ.14ಕ್ಕೆ ಡಿಕೆಶಿಗೆ ಎಲ್ಲ ಉತ್ತರ ಕೊಡುತ್ತೇನೆ: ಅವತ್ತು ಬೇಕಾದ್ರೆ ವಾರ್ ಆಗಲಿ: ಡಿಕೆಶಿಗೆ ರಮೇಶ ಜಾರಕಿಹೊಳಿ ಓಪನ್ ಚಾಲೆಂಜ್..!

ನನ್ನ ವ್ಯಕ್ಯಿತ್ವ ಏನು, ಡಿಕೆಶಿ ವ್ಯಕ್ತಿತ್ವ ಏನು ಎಂದು ಹೇಳ್ತಿನಿ. ಬೇಕಾದರೆ ಓಪನ್ ವಾರ್ ಆಗಲಿ. ಫಲಿತಾಂಶದ ದಿನ ಎಲ್ಲದಕ್ಕೂ ತಕ್ಕ ಉತ್ತರ ಕೊಡುತ್ತೇನೆ ಎಂದು ಕನಕಪುರ ಬಂಡೆ ಡಿಕೆ ಶಿವಕುಮಾರ್‍ಗೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಬಹಿರಂಗ ಸವಾಲು ಹಾಕಿದ್ದಾರೆ. ಎಂಎಲ್‍ಸಿ ಚುನಾವಣಾ ರಣಕಣದಲ್ಲಿ ಘಟಾನುಘಟಿ ನಾಯಕರ ಮಧ್ಯ ಮಾತಿನ ಸಮರ ಮುಂದುವರಿದಿದೆ. ಮೊನ್ನೆಯಷ್ಟೇ ರಮೇಶ ಜಾರಕಿಹೊಳಿ ವಿರುದ್ಧ ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗುಡುಗಿದ್ದರು. ಇದೀಗ ಡಿಕೆಶಿ …

Read More »

ನಮ್ಮದು ಯಾವಾಗಲೂ ಎ ಟೀಮ್, ಎ ಫಾರ್ ಎ ಒನ್-ಲಖನ್ ಜಾರಕಿಹೊಳಿ ಟಾಂಗ್ ಪರಿಷತ್ ಚುನಾವಣಾ ಅಖಾಡದಲ್ಲಿ ಸಹೋದರರ ಸವಾಲ್

ಬೆಳಗಾವಿ ತಾಲೂಕಿನ ಸುಳೇಬಾವಿಯಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ, ಯಾರ್ಯಾರೋ ಎ ಟೀಮ್ ಬಿ ಟೀಮ್ ಅಂತಾ ಏನೇನೋ ಹೇಳ್ತಾರೆ. ನಾವು ಯಾವಾಗಲೂ ಎ ಟೀಮ್. ಅಂದ್ರೆ ಎ ಫಾರ್ ಎ1. ನಮ್ಮದು ಎ ಟೀಮ್, ಅವರೇ ಬಿ ಟೀಮ್. ನಾವು ನೀವು ಎ ಟೀಮ್ ಅಂದ್ರೆ ಮತದಾರರು ಎಲ್ಲಾರೂ ನಮ್ಮನ್ನು ನೋಡಿ ಎ ಟೀಮ್ ಎನ್ನಬೇಕು. ಅವರದ್ದು ಒಂದು ಬಿ ಇನ್ನೊಂದು ಸಿ …

Read More »

ಪ್ರಥಮ ಪ್ರಾಶಸ್ತ್ಯದ ಮತ ನೀಡಿ:ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ!!

      ಬೈಲಹೊಂಗಲ: ಬೆಂಗಳೂರಿನಿಂದ ಬಂದು ಇಲ್ಲಿ ಬಂದು ಮಾತನಾಡುವವರ ಮಾತು ಬೆಳಗಾವಿಯಲ್ಲಿ ಏನೂ ನಡೆಯುವುದಿಲ್ಲ ಎಂದು ವಿಧಾನ ಪರಿಷತ್ತಿನ ಬೆಳಗಾವಿ ದ್ವಿಸದಸ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಹೇಳಿದರು. ಅವರು ಪಟ್ಟಣದ ಮುರಗೊಡ ರಸ್ತೆಯ ಪೃಥ್ವಿ ಗಾರ್ಡನ್‌ನಲ್ಲಿ ಮಂಗಳವಾರ ನಡೆದ ವಿಧಾನ ಪರಿಷತ್ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಯಲ್ಲಿ ನನಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡುವ ಮೂಲಕ ಪ್ರಚಂಡ ಬಹುಮತದಿಂದ …

Read More »

ದಾವಣಗೆರೆ : ಕಬ್ಬಿನ ಗದ್ದೆಯಲ್ಲಿ ಅಡಗಿ ಕುಳಿತಿದ್ದವರಿಗೆ ಲಸಿಕೆ ಹಾಕಿಸಿದ ತಹಶೀಲ್ದಾರ್

ದಾವಣಗೆರೆ : ಜನ ಲಸಿಕೆ ಹಾಕಿಸಿಕೊಳ್ಳಲು ದಿನಕ್ಕೊಂದು ಹೈಡ್ರಾಮಾ ಮಾಡುತ್ತಿದ್ದರಿಂದ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ತಲೆನೋವು ಆಗಿ ಪರಿಣಮಿಸಿದೆ. ದಾವಣಗೆರೆ ಜಿಲ್ಲೆಯ ಕೈದಾಳೆ ಗ್ರಾಮದಲ್ಲಿ ಲಸಿಕೆ ನೀಡುತ್ತಾರೆ ಎಂಬ ಒಂದೇ ಕಾರಣಕ್ಕೆ ಕೆಲವರು ಕಬ್ಬಿನ ಗದ್ದೆಗಳಲ್ಲಿ ಅವಿತುಕೊಂಡಿದ್ದರು. ಅಂತಹವರನ್ನು ಹೊರಕರೆಸಿದ ದಾವಣಗೆರೆ ತಹಶೀಲ್ದರ್ ಲಸಿಕೆ ಹಾಕಿಸಿದ್ದಾರೆ. ದಾವಣಗೆರೆ ತಹಶೀಲ್ದಾರ್ ಗಿರೀಶ್ ನೇತೃತ್ವದಲ್ಲಿ ಮನೆ ಮನೆಗೂ ಹೋಗಿ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆರೋಗ್ಯ ಇಲಾಖೆ‌ ಸಿಬ್ಬಂದಿ ಲಸಿಕೆ ನೀಡಲು ಬರುತ್ತಿದ್ದಾರೆಂದು …

Read More »

ಹಣ ಇಲ್ಲದಿದ್ದರೆ ಹೊಸ ತಾಲೂಕುಗಳನ್ನು ರದ್ದುಪಡಿಸಿ: ಸರ್ಕಾರಕ್ಕೆ ಹೈಕೋರ್ಟ್​ ಚಾಟಿ2017-18ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಹೊಸದಾಗಿ ಘೋಷಿಸಿರುವ 50 ತಾಲೂಕುಗಳಿಗೆ ಕಚೇರಿ ಸ್ಥಾಪಿಸಲು ಮತ್ತು ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಅನುದಾನ ಬಿಡುಗಡೆ ಮಾಡುವಲ್ಲಿ ವಿಳಂಬ ಮಾಡುತ್ತಿರುವ ಸರ್ಕಾರದ ಧೋರಣೆಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಬೆಂಗಳೂರು: ಹೊಸದಾಗಿ ಘೋಷಿಸಿರುವ 50 ತಾಲೂಕುಗಳಿಗೆ ಕಚೇರಿ ಸ್ಥಾಪಿಸಲು ಮತ್ತು ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಅನುದಾನ ಬಿಡುಗಡೆ ಮಾಡುವಲ್ಲಿ ವಿಳಂಬ ಮಾಡುತ್ತಿರುವ ಸರ್ಕಾರದ ಧೋರಣೆಗೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಹಣ ಇಲ್ಲದಿದ್ದರೆ ಹೊಸ ತಾಲೂಕುಗಳನ್ನು ರದ್ದುಪಡಿಸಿ ಎಂದು ಕಟುವಾಗಿ ಟೀಕಿಸಿದೆ. 2017-18ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಹೊಸದಾಗಿ ಘೋಷಿಸಿರುವ 50 ತಾಲೂಕುಗಳಿಗೆ ಕಚೇರಿಗಳನ್ನು ಸ್ಥಾಪಿಸಲು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಬೀದರ್​​ನ ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಸಲ್ಲಿಸಿರುವ …

Read More »