Breaking News
Home / ರಾಷ್ಟ್ರೀಯ (page 583)

ರಾಷ್ಟ್ರೀಯ

ರಮೇಶ್ ಜಾರಕಿಹೊಳಿಯವರು ಒಬ್ಬ ಪವರ್ ಫುಲ್ ನಾಯಕರು ಎಷ್ಟು ಶಾಸಕರನ್ನು ಬೇಕಾದರೂ ಬಿಜೆಪಿಗೆ ಕರೆತರಬಹುದು- ಗೋವಿಂದ್ ಕಾರಜೋಳ್

ರಮೇಶ್ ಜಾರಕಿಹೊಳಿ ಒಬ್ಬ ಸಮರ್ಥ ನಾಯಕರು. ಅವರು ಬಿಜೆಪಿಗೆ ಎಷ್ಟು ಜನರನ್ನು ಬೇಕಾದರೂ ಕರೆ ತರಬಹುದು. ಅವರಲ್ಲಿ ಆ ಶಕ್ತಿ ಇದೆ. ಅವರು ಎಷ್ಟು ಜನ ಶಾಸಕರನ್ನು ಬೇಕಾದರೂ ಕರೆತರಬಹುದು ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.ಬೆಳಗಾವಿಯಲ್ಲಿ ಗಣರಾಜ್ಯೋತ್ಸವ ಸಂಬರ್ಭದಲ್ಲಿ ಧ್ವಜಾರೋಹಣದ ನೆರವೇರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳರವರು, ರಮೇಶ್ ಜಾರಕಿಹೊಳಿ ಒಬ್ಬ ಹಿರಿಯ ರಾಜಕಾರಣಿಗಳು. ಮಾಜಿ ಮಂತ್ರಿ ಹಾಗೂ ಅನುಭವಿ ರಾಜಕಾರಣಿ. ಅವರ …

Read More »

ಕೊವ್ಯಾಕ್ಸಿನ್ ಹಾಗೂ ಕೊವಿಶೀಲ್ಡ್ ತಯಾರಕರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆ

ದೆಹಲಿ : ಭಾರತವೂ ಕೂಡ ಲಸಿಕೆ ತಯಾರಿಕೆಯಲ್ಲಿ ಹಿಂದೆ ಬೀಳಲಿಲ್ಲ. ಅಸಲಿಗೆ ಭಾರತವೇ ಲಸಿಕೆ ತಯಾರಿಕೆಯ ವೇಗ ಹೆಚ್ಚಿಸಿ ಅಪಾರ ಪ್ರಮಾಣದ ಲಸಿಕೆ ಪೂರೈಕೆ ಮಾಡಿತು. ಭಾರತದ ಜನರಿಗೆ ಮಾತ್ರವಲ್ಲದೆ ಇತರ ಕೆಲವು ದೇಶಗಳಿಗೆ ಕೂಡ ಭಾರತದಿಂದ ಲಸಿಕೆ ರಫ್ತಾಯಿತು. ಈ ಲಸಿಕಾ ಅಭಿಯಾನದಲ್ಲಿ ಮುಖ್ಯವಾಗಿ ಕೆಲಸ ಮಾಡಿದ ಎರಡು ಭಾರತೀಯ ಸಂಸ್ಥೆಗಳು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಹಾಗೂ ಪುಣೆ ಮೂಲದ ಸೆರಂ ಇನ್​ಸ್ಟಿಟ್ಯೂಟ್. ಇದೀಗ ಆ ಎರಡೂ …

Read More »

ಗಣರಾಜ್ಯೋತ್ಸವಕ್ಕೆ ವಿಶೇಷ ಡೂಡಲ್​ ರಚಿಸಿ ಶುಭ ಕೋರಿದ ಗೂಗಲ್​

ಈ ಬಾರಿ ಗಣರಾಜ್ಯೋತ್ಸವಕ್ಕೂ ಕೊರೋನಾ ಕರಿನೆರಳು ಆವರಿಸಿದೆ. ಹೆಚ್ಚು ಜನರು ಸೇರುವಂತಿಲ್ಲ, ಸಾಂಸ್ಕೃತಿಕ ಕಾರ್ಯಕ್ರಮಗಳ ವೀಕ್ಷಣೆಗೂ ಬ್ರೇಕ್​ ಬಿದ್ದಿದೆ. ಈ ನಡುವೆ ದೆಹಲಿ ರಾಜಪಥನ್​ನಿಂದ ನ್ಯಾಷನಲ್​ ಸ್ಟೇಡಿಯಂವರೆಗೆ ಮೆರವಣಿಗೆ ನಡೆಯಲಿದೆ. ವಿವಿಧ ರಾಜ್ಯಗಳ ಜಾನಪದ ಕಲಾ ಪ್ರದರ್ಶನ ಜತೆಗೆ ಬಾನಂಗಳದಲ್ಲಿ ವಿಮಾನಗಳ ಹಾರಾಟ ನಡೆಯಲಿದೆ. ಇನ್ನು ಕೊರೋನಾ ಕಾರಣದಿಂದ ದೆಹಲಿಯಲ್ಲೂ ಕಟ್ಟೆಚ್ಚರವಹಿಸಲಾಗಿದೆ. ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಎರಡೂ ಡೋಸ್​ ವ್ಯಾಕ್ಸಿನೇಷನ್​ ಕಡ್ಡಾಯಗೊಳಿಸಲಾಗಿದ್ದು, 15 ವರ್ಷದೊಳಗಿನ ಮಕ್ಕಳಿಗೆ ಪ್ರವೇಷವನ್ನು ನಿಷೇಧಿಸಲಾಗಿದೆ. ಹೀಗಾಗಿ …

Read More »

ಬೆಳಗಾವಿ ಜಿಲ್ಲೆಯಲ್ಲಿ ಸಿಡಿದ ಕೊರೊನಾ ಬಾಂಬ್: ಇಂದು 977 ಪಾಸಿಟಿವ್, 4 ಸಾವು

ಬೆಳಗಾವಿ ಜಿಲ್ಲೆಯಲ್ಲಿ ಇಂದು ಮಹಾಮಾರಿ ಕೊರೊನಾ ಮತ್ತೆ ತನ್ನ ಅಟ್ಟಹಾಸ ಮೆರೆದಿದೆ. ಇಂದು ಹೊಸದಾಗಿ 977 ಹೊಸ ಕೊರೊನಾ ಕೇಸ್‍ಗಳು ಪತ್ತೆಯಾಗಿವೆ. ಅದೇ ರೀತಿ ನಾಲ್ವರು ಸಾವನ್ನಪ್ಪಿದ್ದಾರೆ.ಮಂಗಳವಾರ ಬೆಳಗಾವಿ ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿದ ಹೆಲ್ತ್ ಬುಲೆಟಿನ್‍ನಲ್ಲಿ ಜಿಲ್ಲೆಯಲ್ಲಿ 977 ಹೊಸ ಕೇಸ್‍ಗಳು ಕಾಣಿಸಿಕೊಂಡಿವೆ. ಅದೇ ರೀತಿ ಇಂದು ನಾಲ್ವರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಬೆಳಗಾವಿಯ 36 ವರ್ಷ ವ್ಯಕ್ತಿ, 64 ವರ್ಷದ ವೃದ್ಧ, 73 …

Read More »

ನಾನು ಯಾವ ಕಡೆ ಇಲ್ಲ: ಬಿಜೆಪಿ ಪಕ್ಷದ ಪರವಾಗಿ ಇದ್ದೇನೆ: ದುರ್ಯೋಧನ ಐಹೊಳೆ

ನಾನಂತು ಸಚಿವಗಿರಿಗಾಗಿ ಗುಂಪುಗಾರಿಕೆ, ಜಗಳ ಮಾಡಲ್ಲ. ಸಚಿವ ಸ್ಥಾನ ಕರೆದು ಕೊಟ್ಟರೇ ನಿಭಾಯಿಸುತ್ತೇವೆ. ಸಚಿವ ಸ್ಥಾನ ಬೇಕು ಎಂದು ಹಠ ಮಾಡಲ್ಲ. ನಮ್ಮ ನಾಯಕರಾದ ಗೋವಿಂದ ಕಾರಜೋಳ ಅವರು ಇರೋ ತನ ನಾವು ಮಂತ್ರಿ ಸ್ಥಾನ ಕೇಳುವುದಿಲ್ಲ ಎಂದು ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಾಸಕ ದುರ್ಯೋಧನ ಐಹೊಳೆ ಬಿಜೆಪಿ ಪಕ್ಷದ ಚಿಹ್ನೆ ಮೇಲೆ ಮೂರು ಬಾರಿ …

Read More »

ಮೂಡಲಗಿ ತಾಲೂಕಿನ ಸಾರ್ವಜನಿಕರ ಬಹು ನಿರೀಕ್ಷೆಯ ಉಪ ನೋಂದಣಾಧಿಕಾರಿಗಳ ಕಛೇರಿ ಆರಂಭಕ್ಕೆ ಹಣಕಾಸು ಇಲಾಖೆಯಿಂದ ಅನುಮೋದನೆ ದೊರೆತಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಮೂಡಲಗಿ : ಮೂಡಲಗಿ ತಾಲೂಕಿನ ಸಾರ್ವಜನಿಕರ ಬಹು ನಿರೀಕ್ಷೆಯ ಉಪ ನೋಂದಣಾಧಿಕಾರಿಗಳ ಕಛೇರಿ ಆರಂಭಕ್ಕೆ ಹಣಕಾಸು ಇಲಾಖೆಯಿಂದ ಅನುಮೋದನೆ ದೊರೆತಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.   ಮೂಡಲಗಿಯಲ್ಲಿ ಹೊಸದಾಗಿ ಉಪನೋಂದಣಾಧಿಕಾರಿಗಳ ಕಛೇರಿಯನ್ನು ಫೆಬ್ರುವರಿ ತಿಂಗಳೊಳಗೆ ಆರಂಭಿಸಲಾಗುವುದು ಎಂದು ಅವರು ಹೇಳಿದರು.   ಸತತವಾಗಿ ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಕಛೇರಿ ಆರಂಭಕ್ಕೆ ಹಣಕಾಸು ಇಲಾಖೆಯು ನಮ್ಮ ಪ್ರಸ್ತಾವಣೆಯನ್ನು ವಿಳಂಬ ಮಾಡಿತ್ತು. ಆದರೂ ಹಲವು …

Read More »

ಗೋವಾದಲ್ಲಿ ಕಾಂಗ್ರೆಸ್‌ ಗೆಲುವು ಖಚಿತ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ

  ಪಣಜಿ: ಗೋವಾ ಚುವಾವಣೆಯಲ್ಲಿ ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯ ಸಾಧಿಸಲಿದ್ದು, ಕಾಂಗ್ರೆಸ್‌ ಅಧಿಕಾರ ಹಿಡಿಯುವುದು ಖಚಿತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಚುನಾವಣೆ ವೀಕ್ಷಕ ಸತೀಶ್‌ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು. ಗೋವಾ ರಾಜ್ಯದ ಮಡಗಾವನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಗೋವಾದಲ್ಲಿ 40 ವಿಧಾನಸಭಾ ಕ್ಷೇತ್ರಗಳಿದ್ದು, 37 ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ ಎಂದು ತಿಳಿಸಿದರು. ಗೋವಾ ಮತ್ತು ಬೆಳಗಾವಿಗೆ ಉತ್ತಮ ನಂಟು ಹೊಂದಿದ್ದು, …

Read More »

ಶಾಲೆಯಲ್ಲೇ ವಿದ್ಯಾರ್ಥಿನಿಗೆ ಮುಖ್ಯಶಿಕ್ಷಕನಿಂದ ಲೈಂಗಿಕ ಕಿರುಕುಳ- ದೃಶ್ಯ ಮೊಬೈಲ್‌ನಲ್ಲಿ ಸೆರೆ

ಮೈಸೂರು: ಶಾಲೆಯಲ್ಲೇ ವಿದ್ಯಾರ್ಥಿನಿಗೆ ಮುಖ್ಯಶಿಕ್ಷಕನಿಂದ ಲೈಂಗಿಕ ಕಿರುಕುಳ ನೀಡಿರುವ ಘಟನೆ ಜಿಲ್ಲೆಯ ಹೆಚ್‌.ಡಿ ಕೋಟೆ ತಾಲೂಕಿನ ಶಾಲೆವೊಂದರಲ್ಲಿ ನಡೆದಿದೆ. ವಿದ್ಯಾರ್ಥಿನಿಗೆ ಶಿಕ್ಷಕ ಲೈಂಗಿಕ ಕಿರುಕುಳ ನೀಡುತ್ತಿದ್ದ ದೃಶ್ಯ ಅದೇ ಶಾಲೆಯ ವಿದ್ಯಾರ್ಥಿಗಳ ಮೊಬೈಲ್​ನಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಎಲ್ಲೆಡೆ ಹರಿದಾಡ್ತಿದ್ದು, ವಿಡಿಯೋ ಬಗ್ಗೆ ತಿಳಿಯುತ್ತಿದಂತೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿನಿಯ ಪೋಷಕರು ಹೆಚ್​​.ಡಿ ಕೋಟೆ ಬಿಇಓ ಹಾಗೂ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ …

Read More »

ಎಂಆರ್ ಲಸಿಕೆ ಪಡೆದು ಮಗು ಸಾವು: ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳ ಮೊರೆ ಹೋದ ಪಾಲಕರು..!

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬೋಚಬಾಳ ಗ್ರಾಮದ 13 ತಿಂಗಳ ಮಗು ಮಧು ಉಮೇಶ ಕುರಗುಂದಿ ಎಂಆರ್ ಲಸಿಕೆಯನ್ನು ಪಡೆದು ಸಾವನ್ನಪ್ಪಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಮಗುವಿನ ಸಾವಿಗೆ ಸೂಕ್ತ ಪರಿಹಾರ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.ಈ ಹಿಂದೆಯೇ ರಾಮದುರ್ಗ ತಾಲೂಕಿನಲ್ಲಿ ಈ ಎಂಆರ್ ಲಸಿಕೆಯನ್ನು ಹಾಕಿಸಿದ್ದಕ್ಕೆ ಮೂರು ಮಕ್ಕಳು ಸಾವನ್ನಪ್ಪಿದ್ದವು. ಸಾಲಹಳ್ಳಿಯ ಅದೇ ಪ್ರಾಥಮಿಕ ಕೇಂದ್ರದ ಸ್ಟ್ಯಾಫ್ ನರ್ಸ್ ಸಲೀಮಾ ಮಹಾತ್ ನೀಡಿದ ಎಂ.ಆರ್ ಲಸಿಕೆಯಿಂದ 13 …

Read More »

ಕಾಂಗ್ರೆಸ್‍ನ 16 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ: ರಮೇಶ ಜಾರಕಿಹೊಳಿ

ಕಾಂಗ್ರೆಸ್‍ನ 16 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಬಿಜೆಪಿ ಹೈಕಮಾಂಡ್ ಒಪ್ಪಿದರೆ ಅವರನ್ನು ಪಕ್ಷಕ್ಕೆ ಕರೆತರುವೆ ಎನ್ನುವ ಮೂಲಕ ಮಾಜಿ ಸಚಿವ ರಮೇಶ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಾಜಿ ಸಚಿವ ರಮೇಶ ಜಾರಕಿಹೊಳಿ ನನ್ನ ಜತೆ 36 ಜನ ಇದ್ರು, 17 ಜನ ನನ್ನ ಜತೆ ಬಂದ್ರು ತಾಂತ್ರಿಕ ಕಾರಣದಿಂದ 16 ಜನ ಅಲ್ಲಿಯೇ ಇದ್ದಾರೆ. ಆ ಸಂದರ್ಭದಲ್ಲಿ ನಮ್ಮ ಜತೆ ಬರಲಿಲ್ಲ. ಕಾಂಗ್ರೆಸ್‍ನ 16 …

Read More »